ಮೇಕೆದಾಟು ಯೋಜನೆ: ಜು.12ರಂದು ತಮಿಳುನಾಡು ಸರ್ವಪಕ್ಷಗಳ ಸಭೆ

posted in: ರಾಜ್ಯ | 0

ಚೆನ್ನೈ: ಕರ್ನಾಟಕ ಮತ್ತು ತಮಿಳುನಾಡು ರಾಜ್ಯಗಳ ನಡುವೆ ವಿವಾದಕ್ಕೆ ಕಾರಣವಾಗಿರುವ ಮೇಕೆದಾಟು ಯೋಜನೆ ಬಗ್ಗೆ ಚರ್ಚೆ ನಡೆಸಲು ತಮಿಳುನಾಡಿನ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅವರು ಜು.12ರಂದು ಸರ್ವಪಕ್ಷಗಳ ಸಭೆ ಕರೆದಿದ್ದಾರೆ.
ಕರ್ನಾಟಕ ಸರ್ಕಾರ ಕುಡಿಯುವ ನೀರು ಹಾಗೂ ವಿದ್ಯುತ್ ಉತ್ಪಾದನೆಗಾಗಿ ಮೇಕೆದಾಟು ಬಳಿ ಕಾವೇರಿ ನೀರು ಸಂಗ್ರಹಣೆಗಾಗಿ ಸುಮಾರು 9 ಸಾವಿರ ಕೋಟಿ ರೂ. ವೆಚ್ಚದಲ್ಲಿ ಜಲಾಶಯ ನಿರ್ಮಿಸಲು ಮುಂದಾಗಿದೆ.
ಆದರೆ, ತಮಿಳುನಾಡು ಸರ್ಕಾರ ಇದಕ್ಕೆ ತಕರಾರು ತೆಗೆದೆದಿದ್ದು, ಸುಪ್ರೀಂಕೋರ್ಟ್ ಮೊರೆ ಹೋಗಿದೆ. ಜಲಾಶಯ ನಿರ್ಮಾಣದಿಂದ ತಮಿಳುನಾಡು ಮತ್ತು ಕರ್ನಾಟಕ ಎರಡು ರಾಜ್ಯಗಳಿಗೂ ಅನುಕೂಲವಾಗಲಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಇತ್ತೀಚೆಗೆ ಸ್ಟಾಲಿನ್ ಅವರಿಗೆ ಪತ್ರ ಬರೆದು ಮನವರಿಕೆ ಮಾಡಿಕೊಡುವ ಪ್ರಯತ್ನ ಮಾಡಿದ್ದರು.
ತಕ್ಷಣವೇ ಪ್ರತ್ಯುತ್ತರ ಬರೆದ ಸ್ಟಾಲಿನ್ ಅವರು, ಹಲವಾರು ಸಂದೇಹಗಳನ್ನು ವ್ಯಕ್ತಪಡಿಸಿದ್ದರು. ಮೇಕೆದಾಟು ಯೋಜನೆ ಮುಂದುವರೆಸದಂತೆ ಹೇಳಿದ್ದರು. ಕರ್ನಾಟಕ ಸರ್ಕಾರ ಯೋಜನೆ ಕೈಗೊಳ್ಳುವುದಾಗಿ ಹೇಳಿದೆ.ಸುಮಾರು 16 ವರ್ಷಗಳ ಹಳೆಯದಾದ ಈ ಯೋಜನೆಯನ್ನು ಶೀಘ್ರ ಪೂರ್ಣಗೊಳಿಸುವುದು ಕರ್ನಾಟಕ ಸರ್ಕಾರದ ಆಸಕ್ತವಾಗಿದ್ದರೆ, ತಮಿಳುನಾಡಿನಲ್ಲಿ ಇದು ರಾಜಕೀಯದ ಪ್ರಮುಖ ವಸ್ತು. ಹೀಗಾಗಿ ಪದೇ ಪದೇ ಅಡ್ಡಿ ಆತಂಕಗಳನ್ನು ಒಡ್ಡಲಾಗುತ್ತಿದೆ.

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

0 / 5. ಒಟ್ಟು ವೋಟುಗಳು 0

ನಿಮ್ಮ ಕಾಮೆಂಟ್ ಬರೆಯಿರಿ