ಜಲಜೀವನ ಮಿಷನ್ ಅನ್ವಯ ಕರ್ನಾಟಕಕ್ಕೆ 5,009 ಕೋಟಿ ರೂ.

posted in: ರಾಜ್ಯ | 0

ಹೊಸದಿಲ್ಲಿ: ಪ್ರತಿ ಮನೆಗೂ ಶುದ್ಧ  ನಲ್ಲಿ  ನೀರು ಒದಗಿಸುವ ಪ್ರಧಾನಿ ಮೋದಿಯವರ ಆಶಯ ಕಾರ್ಯರೂಪಕ್ಕೆ ತರುವ ಜಲ ಜೀವನ್ ಮಿಷನ್ ಅನ್ವಯ ಕೇಂದ್ರ ಸರ್ಕಾರವು ೨೦೨೧-೨೨ರ ಸಾಲಿಗೆ ಕರ್ನಾಟಕಕ್ಕೆ ೫,೦೦೮.೭೯ ಕೋಟಿ ರೂ. ಅನುದಾನ ಹೆಚ್ಚಿಸಿದೆ. ೨೦೨೦-೨೧ರಲ್ಲಿ ಈ ಹಣ ೧,೧೮೯.೪೦ ಕೋಟಿ ರೂ. ಆಗಿತ್ತು. ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರು … Continued

ಅಪರೂಪದ ಗಂಭೀರ ಕಾಯಿಲೆ ‘ಡುಷೆನ್ ಮಸ್ಕ್ಯುಲರ್‌ಡಿಸ್ಟ್ರೋಫಿ’: ೮ ವರ್ಷದ ಬಾಲಕನ ಚಿಕಿತ್ಸೆಗೆ ಬೇಕಿದೆ ನೆರವು

ಧಾರವಾಡ: ವಿದ್ವತ್ ವಿಶ್ವನಾಥ ಕಂಚೀಬೈಲು ಎಂಬ ೮ ವರ್ಷದ ಬಾಲಕ ‘ಡುಷೆನ್ ಮಸ್ಕ್ಯುಲರ್‌ಡಿಸ್ಟ್ರೋಫಿ’ (Duchene Muscular Dystrophy) ಎಂಬ ಅಪರೂಪದ, ಗಂಭೀರಕಾಯಿಲೆಯಿಂದ ಬಳಲುತ್ತಿದ್ದಾನೆ. ಮಾಂಸಖಂಡಗಳು ಸಂಕುಚಿತಗೊಂಡು, ಕ್ರಮೇಣ ನಡೆದಾಡಲಾಗದೇ ನೆಲಕ್ಕೊರಗಿ ಸಾವು-ಬದುಕಿನ ನಡುವೆ ಹೋರಾಡಬೇಕಾದ ರೋಗ ಇದು. ಮಹಾರಾಷ್ಟ್ರದ ನವೀ ಮುಂಬೈನಲ್ಲಿರುವ ತಜ್ಞ ವೈದ್ಯಡಾ.ಪ್ರದೀಪ್ ಮಹಾಜನ್‌ ಅವರು ಮಗುವಿಗೆ ಚಿಕಿತ್ಸೆ ನೀಡುತ್ತಿದ್ದಾರೆ. ‘ಸ್ಟೆಮ್‌ ಸೆಲ್ಸ್‌ ಥೆರಪಿ’ಅವಶ್ಯಕತೆ … Continued

ಎನ್‌ಕೌಂಟರಿನಲ್ಲಿ ಇಬ್ಬರು ಪಾಕ್‌ ಉಗ್ರರು ಹತ, ಭಾರತದ ಇಬ್ಬರು ಯೋಧರು ಹುತಾತ್ಮ

ಶ್ರೀನಗರ: ನಿಯಂತ್ರಣ ರೇಖೆಯ ಉದ್ದಕ್ಕೂ ನಡೆದ ಎನ್‌ಕೌಂಟರ್‌ನಲ್ಲಿ ಇಬ್ಬರು ಪಾಕಿಸ್ತಾನಿ ಭಯೋತ್ಪಾದಕರನ್ನು ಗುಂಡಿಕ್ಕಿ ಕೊಂದಿದ್ದಾರೆ,” ಎಂದು ಜಮ್ಮು ಮತ್ತು ಕಾಶ್ಮೀರದ ರಕ್ಷಣಾ ವಕ್ತಾರರು ತಿಳಿಸಿದ್ದಾರೆ. ಇದೇ ಸಮಯದಲ್ಲಿ’ ‘ಇಬ್ಬರು ಭಾರತೀಯ ಸೈನಿಕರು ಕೂಡಾ ಹುತಾತ್ಮರಾಗಿದ್ದಾರೆ ಎಂದು ವಕ್ತಾರರು ತಿಳಿಸಿದ್ದಾರೆ. ಕೆಲವು ದಿನಗಳಲ್ಲಿ ನಿಯಂತ್ರಣ ರೇಖೆಯ ಉದ್ದಕ್ಕೂ ನಡೆದ ಎರಡನೇ ಮುಖಾಮುಖಿಯಾಗಿದೆ. ನಿಯಂತ್ರಣ ರೇಖೆಯ ಉದ್ದಕ್ಕೂ ಕದನ … Continued

ರಾಜ್ಯ ಸರ್ಕಾರದಿಂದ ಕೊರೊನಾನಿಂದ ಮೃತಪಟ್ಟ ರೈತರ ಡಿಸಿಸಿ, ಅಪೆಕ್ಸ್ ಬ್ಯಾಂಕ್ ಸಾಲಮನ್ನಾ

ಬೆಂಗಳೂರು: ಕೋವಿಡ್‌-19 ಗೆ ಬಲಿಯಾದ ರೈತರು ಜಿಲ್ಲಾ ಕ್ರೆಡಿಟ್ ಕೋ-ಆಪರೇಟಿವ್ (ಡಿಸಿಸಿ) ಮತ್ತು ಅಪೆಕ್ಸ್ ಬ್ಯಾಂಕುಗಳಿಂದ ಪಡೆದ ಸಾಲವನ್ನು ರಾಜ್ಯ ಸರ್ಕಾರವು ಮನ್ನಾ ಮಾಡುತ್ತಿದೆ ಎಂದು ಕರ್ನಾಟಕ ಸಹಕಾರ ಸಚಿವ ಎಸ್ ಟಿ ಸೋಮಶೇಖರ್ ಗುರುವಾರ ಹೇಳಿದ್ದಾರೆ. ಮಾಹಿತಿ ಸಂಗ್ರಹಿಸಲಾಗುತ್ತಿದ್ದು, ಒಂದೆರಡು ದಿನಗಳಲ್ಲಿ ಸರ್ಕಾರ ನಿರ್ಧಾರ ತೆಗೆದುಕೊಳ್ಳಲಿದೆ ಎಂದರು. ಲಾಭದಾಯಕವಾಗಿರುವ ಡಿಸಿಸಿ ಮತ್ತು ಅಪೆಕ್ಸ್ ಬ್ಯಾಂಕುಗಳ … Continued

ಮೋದಿ ಸಂಪುಟ ಪುನರ್ರಚನೆಯಲ್ಲಿ ಉತ್ತರಪ್ರದೇಶಕ್ಕೆ ಸಿಂಹ ಪಾಲು: 2022ರ ವಿಧಾನಸಭೆ ಚುನಾವಣೆ ಹಿಂದೆಯೇ ಜಾತಿ ಸಮೀಕರಣ ಪ್ರಯತ್ನ

ನವದೆಹಲಿ: ಜುಲೈ 7 ರಂದು ಪ್ರಧಾನಿ ನರೇಂದ್ರ ಮೋದಿ ಅವರು ನಡೆಸಿದ ಕ್ಯಾಬಿನೆಟ್ ಪುನರ್ರಚನೆ ನೋಡಿದರೆ 2022 ರಲ್ಲಿ ನಡೆಯಲಿರುವ ನಿರ್ಣಾಯಕ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆ ಗಮನದಲ್ಲಿಟ್ಟು ಮಾಡಲಾಗಿದೆ ಎಂಬುದು ಸ್ಪಷ್ಟವಾಗುತ್ತದೆ. ಮಂತ್ರಿ ಮಂಡಳಿಯಲ್ಲಿ ಸೇರ್ಪಡೆಗೊಂಡ 36 ಹೊಸ ಮುಖಗಳಲ್ಲಿ ಏಳು ಸಚಿವರು ಉತ್ತರ ಪ್ರದೇಶದವರು. ಇದು ರಾಜ್ಯದಿಂದ ಒಟ್ಟು ಪ್ರಾತಿನಿಧ್ಯವನ್ನು 16 ಕ್ಕೆ … Continued