ಜೆಡಿಎಸ್‌ ಕಾರ್ಯಕರ್ತನ ಕೆನ್ನೆಗೆ ಬಾರಿಸಿದ ವಿಚಾರ ಕುರಿತು ಡಿಕೆಶಿ ಹೇಳಿದ್ದೇನು..?

posted in: ರಾಜ್ಯ | 0

ಬೆಂಗಳೂರು: ಪಕ್ಕದಲ್ಲಿ ಬಂದು ನಿಂತ ಜೆಡಿಎಸ್ ಕಾರ್ಯಕರ್ತನಿಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಥಳಿಸಿದ ವಿಡಿಯೊ ವ್ಯಾಪಕವಾಗಿ ವೈರಲ್ ಆಗುತ್ತಿದ್ದು ಈಗಾಗಲೇ ಬಿಜೆಪಿ ಟೀಕಿಸಿದೆ. ಸಾಮಅಜಿಕ ಜಅಲತಾಣದಲ್ಲಿ ಈ ಬಗ್ಗೆ ಸಾಕಷ್ಟು ಚರ್ಚೆಯಾಗುತ್ತಿದೆ. ಈಗ ಈ ಘಟನೆ ಬಗ್ಗೆ ಕಪಾಳಮೋಕ್ಷ ಮಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಪ್ರತಿಕ್ರಿಯೆ ನೀಡಿದ್ದಾರೆ.

ಬೆಂಗಳೂರಿನಲ್ಲಿ ಭಾನುವಾರ ಸುದ್ದಿಗಾರರಿಗೆ ಪ್ರತಿಕ್ರಿಯಿಸಿರುಅವರು, ಆತ ನಮ್ಮ ಹುಡುಗನೇ, ನಮ್ಮ ಸಂಬಂಧಿಕ, ಅವನು ನನ್ನ ಹೆಗಲ ಮೇಲೆ ಕೈಹಾಕಲು ಬಂದ, ಆಗ ಏನು ಇಂಥ ನಡತೆ, ನೋಡಿದವರು, ಟಿ ವಿ ಮಾಧ್ಯಮದವರೆಲ್ಲ ಇದ್ದಾರೆ, ಅವರ ಮುಂದೆಯೇ ಹೆಗಲ ಮೇಲೆ ಕೈಹಾಕಲು ಬರ್ತಿದ್ದೀಯಾ ಎಂದು ಹೊಡೆದೆ ಎಂದು ಹೇಳಿದ್ದಾರೆ.
ನಮ್ಮ ಮನೆ ಹುಡುಗನಿಗೆ ಹೊಡೆಯುವ ರೀತಿಯಲ್ಲಿ ಒಂದು ಏಟು ಹೊಡೆದೆ, ಅವನು ಬೈದರೆ ನಾನು ಬೈಸಿಕೊಳ್ಳುತ್ತೇನೆ, ನಾನು ಬೈದರೆ ಅವನು ಬೈಸಿಕೊಳ್ಳುತ್ತಾನೆ, ನನ್ನದು-ಅವನದು ಸಂಬಂಧ ಆ ರೀತಿ ಇದೆ ಎಂದು ವಿವಾದಕ್ಕೆ ತೆರೆ ಎಳೆಯಲು ಪ್ರಯತ್ನಿಸಿದ್ದಾರೆ.
ಹೊಡೆಸಿಕೊಂಡವರು ಕೈಹಾಕಿಲ್ಲ ಎನ್ನುತ್ತಿದ್ದಾರಲ್ಲವೇ ಎಂದು ಕೇಳಿದಾಗ, ಆಯ್ತಪ್ಪ, ಕೈ ಹಾಕಿಲ್ಲ ಎಂದುಕೊಳ್ಳೋಣ, ಕೈ ಯಾಕೆ ಬಂತು, ಈಗ ಯಾಕೆ ನಮ್ಮ ಹುಡುಗರ ಜೊತೆ ಚರ್ಚೆ, ನಾವು ತಪ್ಪು ಮಾಡ್ತೀವಿ, ಅವರೂ ತಪ್ಪು ಮಾಡ್ತಾರೆ, ಹೋಗ್ಲಿ ಬಿಡಿ ಅವನ್ನ ಲೀಡರ್ ಮಾಡ್ತೀರ, ನಂದು-ಅವಂದು ಗಲಾಟೆ, ನಾವೇ ಸರಿ ಮಾಡಿಕೊಳ್ತೀವಿ ಎಂದು ಡಿ ಕೆ ಶಿವಕುಮಾರ್ ಪ್ರತಿಕ್ರಿಯಿಸಿದ್ದಾರೆ.
ಅಭಿಮಾನದಿಂದ ಹೋಗಿದ್ದೆ: ಇನ್ನು ಶಿವಕುಮಾರ್ ಅವರಿಂದ ಹೊಡೆಸಿಕೊಂಡಿರುವ ಜೆಡಿಎಸ್ ಕಾರ್ಯಕರ್ತ ಉಮೇಶ್ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿ, ಡಿ ಕೆ ಶಿವಕುಮಾರ್ ಅವರು ಜೆಡಿಎಸ್ ನಾಯಕ ಮಾದೇಗೌಡರನ್ನು ನೋಡಲು ಬಂದಿದ್ದರು, ನಾನು ಅವರ ಮೇಲಿನ ಅಭಿಮಾನದಿಂದ ಸಂಬಂಧಿಕರು ಎಂದು ಪ್ರೀತಿ,ವಿಶ್ವಾಸವಿಟ್ಟುಕೊಂಡು ಹೋದೆ. ಪಕ್ಷದ ವತಿಯಿಂದ ನಾನು ಹೋದದ್ದಲ್ಲ ಎಂದು ಹೇಳಿದ್ದಾರೆ.
ನಾನು ಅವರ ಹೆಗಲ ಮೇಲೆ ಕೈಹಾಕಿಲ್ಲ, ಹಾಕಿದ್ದರೆ ನಾನು ಬಹಿರಂಗವಾಗಿ ಕ್ಷಮೆ ಕೇಳುತ್ತೇನೆ, ನಾನು ಅವರ ಪಕ್ಕ ಹೋಗಿ ನಿಂತು ಫೋಟೋ ತೆಗೆಸಿಕೊಳ್ಳಲು ನೋಡಿದ್ದಷ್ಟೆ, ಅವರಿಗೆ ಒಳ್ಳೆಯದಾಗಬೇಕೆಂದರೆ ಮುಂದಿನ ದಿನಗಳಲ್ಲಿ ಇಂತಹ ಸಿಟ್ಟು, ಗೂಂಡಾ ಸಂಸ್ಕೃತಿಯನ್ನು ಬಿಡಬೇಕು,ಇದು ಅವರಿಗೆ ಶೋಭೆ ತರುವಂಥದ್ದಲ್ಲ ಎಂದು ಹೇಳಿದ್ದಾರೆ..

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

0 / 5. ಒಟ್ಟು ವೋಟುಗಳು 0

ನಿಮ್ಮ ಕಾಮೆಂಟ್ ಬರೆಯಿರಿ