ಪುದುಚೇರಿಯಲ್ಲಿ ಜುಲೈ 16ರಿಂದ ಶಾಲಾ-ಕಾಲೇಜ್ ಪುನಾರಂಭ: ಸಿಎಂ ರಂಗಸ್ವಾಮಿ

ಪುದುಚೇರಿ: ಕೋವಿಡ್-19 ಉಲ್ಬಣದಿಂದ ಪುದುಚೇರಿಯಲ್ಲಿ ಬಂದ್ ಆಗಿದ್ದ ಶಾಲಾ-ಕಾಲೇಜ್ ಗಳು ಜುಲೈ 16 ರಂದು ಪುನಾರಂಭಗೊಳ್ಳಲಿವೆ.
ಜುಲೈ 16 ರಂದು ಕಾಲೇಜ್ ಗಳು ಪುನರಾರಂಭಗೊಳ್ಳಲಿದ್ದು, ಶಾಲೆಗಳು ಭಾಗಶಃ ಪುನಃ ತೆರೆಯಲ್ಪಡುತ್ತವೆ ಎಂದು ಮುಖ್ಯಮಂತ್ರಿ ಎನ್. ರಂಗಸ್ವಾಮಿ ಭಾನುವಾರ ತಿಳಿಸಿದ್ದಾರೆ.
ಒಂಭತ್ತರಿಂದ 12 ನೇ ತರಗತಿಗಳಿಗೆ ಮಾತ್ರ ತರಗತಿಗಳು ಆ ದಿನ ಪುನರಾರಂಭಗೊಳ್ಳುತ್ತವೆ ಎಂದು ಅವರು ತಿಳಿಸಿದರು.
ಹೊಸದಾಗಿ ಸಂಪುಟಕ್ಕೆ ಸೇರ್ಪಡೆಯಾದ ಐದು ಮಂತ್ರಿ ಸಹೋದ್ಯೋಗಿಗಳಿಗೆ ಖಾತೆ ಹಂಚಿಕೆ ಪಟ್ಟಿಯನ್ನು ಲೆಫ್ಟಿನೆಂಟ್ ಗವರ್ನರ್ ಡಾ. ತಮಿಳುಸಾಯಿ ಸುಂದರರಾಜನ್ ಅವರಿಗೆ ಸಲ್ಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗ ಕೇಂದ್ರಾಡಳಿತ ಪ್ರದೇಶದಲ್ಲಿ ಪರಿಸ್ಥಿತಿ ಸುಧಾರಿಸುತ್ತಿರುವುದರಿಂದ ಸರ್ಕಾರ ಈ ನಿರ್ಧಾರ ಕೈಗೊಂಡಿದೆ ಎಂದು ತಿಳಿಸಿದರು.
ಪುದುಚೇರಿಯಲ್ಲಿ ಭಾನುವಾರ ಕೋವಿಡ್-19 ನಿಂದ ಯಾವುದೇ ಸಾವು ಸಂಭವಿಸಿಲ್ಲ. ಆದರೆ, ಹೊಸ ಪ್ರಕರಣಗಳ ಸಂಖ್ಯೆ 145 ಆಗಿದೆ.

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

5 / 5. ಒಟ್ಟು ವೋಟುಗಳು 1

ನಿಮ್ಮ ಕಾಮೆಂಟ್ ಬರೆಯಿರಿ