ಮುರ್ಡೇಶ್ವರದಲ್ಲಿ ಇಬ್ಬರು ಸಮುದ್ರ ಪಾಲು. ಓರ್ವ ಶವವಾಗಿ ಪತ್ತೆ, ಮತ್ತೊಬ್ಬ ನಾಪತ್ತೆ

posted in: ರಾಜ್ಯ | 0

ಕಾರವಾರ : ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಮುರುಡೇಶ್ವರದಲ್ಲಿ ಇಬ್ಬರು ಪ್ರವಾಸಿಗರು ಸಮುದ್ರದಲ್ಲಿ ಮುಳುಗಿದ ಘಟನೆ ಭಾನುವಾರ ಮಧ್ಯಾಹ್ನ ನಡೆದಿದೆ. ಘಟನೆಯಲ್ಲಿ ಓರ್ವ ಶವವಾಗಿ ಪತ್ತೆಯಾಗಿದ್ದು, ಇನ್ನೋರ್ವ ನಾಪತ್ತೆಯಾಗಿದ್ದಾನೆ. ಮತ್ತೋರ್ವನ ಶೋಧಕಾರ್ಯ ಮುಂದುವರೆದಿದೆ.
ಶಿವಮೊಗ್ಗ ಜಿಲ್ಲೆಯ ಶಿಕಾರಿಪುರದಿಂದ ನಾಲ್ವರು ಮುರುಡೇಶ್ವರ ದೇವಸ್ಥಾನದಲ್ಲಿ ಪೂಜೆಯ ಬಳಿಕ ಸಮುದ್ರದಲ್ಲಿ ಈಜಲು ಹೋಗಿದ್ದರು. ಈ ವೇಳೆ ಅಲೆಯ ಅಬ್ಬರಕ್ಕೆ ನಾಲ್ವರು ನೀರು ಪಾಲಾದರು. ಸ್ಥಳೀಯ ಮೀನುಗಾರರು ಇಬ್ಬರನ್ನ ರಕ್ಷಿಸಿದ್ದಾರೆ‌. ಓರ್ವ ಶವವಾಗಿ ಪತ್ತೆಯಾದರೆ , ಮತ್ತೋರ್ವ ನಾಪತ್ತೆಯಾಗಿದ್ದಾನೆ..
ಮಂಜುನಾಥ್ (26) ಮೃತ ದುರ್ದೈವಿ ಎಂದು ಗುರುತಿಸಲಾಗಿದೆ. ಮಣಿಕಾಂತ (32) ನಾಪತ್ತೆಯಾದ ಯುವಕ. ಘಟನೆಯಲ್ಲಿ ಪ್ರವೀಣ್ ಮತ್ತು ನಾಗರಾಜ ಅವರನ್ನು ಸ್ಥಳೀಯ ಮೀನುಗಾರರು ರಕ್ಷಿಸಿದ್ದಾರೆ. ಮುರ್ಡೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

0 / 5. ಒಟ್ಟು ವೋಟುಗಳು 0

ನಿಮ್ಮ ಕಾಮೆಂಟ್ ಬರೆಯಿರಿ