ಇತಿಹಾಸ ಸೃಷ್ಟಿಸಿದ ರಿಚರ್ಡ್ ಬ್ರಾನ್ಸನ್, ಬಾಹ್ಯಾಕಾಶಕ್ಕೆ ಹಾರಿದ ಮೊದಲ ಬಿಲಿಯನೇರ್: ತೆರೆದ ಬಾಹ್ಯಾಕಾಶ ಪ್ರವಾಸೋದ್ಯಮದ ಯುಗ..!

ವಾಷಿಂಗ್ಟನ್: ಬಿಲಿಯನೇರ್, ವ್ಯಾಪಾರ ಉದ್ಯಮಿ, ಸರ್ ರಿಚರ್ಡ್ ಬ್ರಾನ್ಸನ್ ಅವರು ಊಹಿಸಬಹುದಾದ ಎಲ್ಲವನ್ನೂ ಹೊಂದಿದ್ದಾರೆ ಮತ್ತು 17 ವರ್ಷಗಳ ಹಿಂದೆ ಅವರು ಬಾಹ್ಯಾಕಾಶ ಪ್ರಯಾಣಿಕರಾಗಬೇಕೆಂಬ ಕನಸು ಕಂಡಿದ್ದರು. ಜುಲೈ 11, 2021 ರಂದು, ಬ್ರಾನ್ಸನ್ ಖಾಸಗಿ ಬಾಹ್ಯಾಕಾಶ ಪ್ರವಾಸೋದ್ಯಮದ ಹೊಸ ಯುಗವನ್ನು ಪ್ರಾರಂಭಿಸುವ ಗಗನಯಾತ್ರಿಗಳಾದರು.

ಬ್ರಿಟನ್​ನ ಕೋಟ್ಯಧಿಪತಿ,​ ಬ್ರಾನ್ಸನ್ ರ ಬಾಹ್ಯಾಕಾಶ ಪ್ರವಾಸದ ಕನಸು ನನಸಾಗಿದ್ದು, ಭಾರತ ಮೂಲದ ಸಿರೀಷಾ ಬಾಂದ್ಲಾ ಸೇರಿದಂತೆ 6 ಮಂದಿ ಗಗನಯಾನಿಗಳನ್ನು ಹೊತ್ತು ವರ್ಜಿನ್ ಗ್ಯಾಲಾಕ್ಟಿಕ್ ಸ್ಪೇಸ್ ರಾಕೆಟ್ ವಿಎಸ್‍ಎಸ್ ಯುನಿಟಿ-22 ಉಡಾವಣೆಯಾಗಿ ಬಾಹ್ಯಾಕಾಶ ತಲುಪಿದೆ.
ಇಂದು (ಭಾನುವಾರ) ವರ್ಜಿನ್ ಗ್ಯಾಲಾಕ್ಟಿಕ್ ಸ್ಪೇಸ್ ರಾಕೆಟ್ ವಿಎಸ್‍ಎಸ್ ಯುನಿಟಿ-22 ಯಶಸ್ವಿಯಾಗಿ ರಾತ್ರಿ 8 ಗಂಟೆಗೆ ಉಡಾವಣೆಯಾಗಿದ್ದು, 9.20ರ ಸುಮಾರಿಗೆ ಬಾಹ್ಯಾಕಾಶ ತಲುಪಿದೆ ಎನ್ನಲಾಗಿದೆ.
ರಿಚರ್ಡ್ ಬ್ರಾನ್ಸನ್ ಅವರೇ ಸಂಸ್ಥಾಪಿಸಿದ ವರ್ಜಿನ್​ ಗ್ಯಾಲಕ್ಟಿಕ್ (Virgin Galactic) ​ ಸ್ಪೇಸ್​ಫ್ಲೈಟ್​ ಕಂಪನಿಯೇ ತಯಾರಿಸಿದ ವಿಎಸ್​ಎಸ್​ ಯುನಿಟಿ (VSS Unity) ಗಗನ ನೌಕೆಯಲ್ಲಿ ರಿಚರ್ಡ್​ ಬ್ರಾನ್ಸನ್​ ಸೇರಿ ಒಟ್ಟು ಆರು ಮಂದಿ ಬಾಹ್ಯಾಕಾಶವನ್ನು ತಲುಪಿದ್ದಾರೆ. ಆಂಧ್ರ ಮೂಲದ ಶಿರಿಷಾ ಬಾಂದ್ಲಾ ಸಹ ಒಬ್ಬರಾಗಿದ್ದಾರೆ. ಆಂಧ್ರ ಪ್ರದೇಶದ ಗುಂಟೂರು ಮೂಲದ ಶಿರಿಷಾ ವರ್ಜಿನ್ ಗ್ಯಾಲಾಕ್ಟಿಕ್ ಸ್ಪೇಸ್ ನಲ್ಲಿ ಗವರ್ನ್‍ಮೆಂಟ್ ಅಫೇರ್ಸ್ ಮತ್ತು ರಿಸರ್ಚ್ ಆಪರೇಷನ್ ಉಪಾಧ್ಯಕ್ಷೆ ಆಗಿದ್ದಾರೆ.
90 ನಿಮಿಷಗಳ ಪ್ರಯಾಣ ಮುಗಿಸಿ ಅಮೆರಿಕದ ನ್ಯೂ ಮೆಕ್ಸಿಕೋ ಸ್ಪೇಸ್‍ಪಾರ್ಟ್ ನಲ್ಲಿ ಲ್ಯಾಂಡ್ ಆಗಲಿದೆ. ಇದು ಭೂಮಿಯ ಪರಿಧಿಯಿಂದ 50 ಸಾವಿರ ಅಡಿಗಳಷ್ಟು ಎತ್ತರಕ್ಕೆ ತೆಗೆದುಕೊಂಡು ಹೋಗಲಿದೆ. ತದನಂತರ ಸ್ಪೇಸ್‍ಕ್ರಾಫ್ಟ್ ಸ್ವತಃ ಬಾಹ್ಯಾಕಾಶದತ್ತ ಚಲಿಸುತ್ತದೆ. ಅಂತರಿಕ್ಷದ ಈ ಯಾತ್ರೆ 1 ಗಂಟೆ 5 ನಿಮಿಷ ಇರಲಿದೆ. ನಂತರ ವಿಎಸ್‍ಎಸ್ ಯುನಿಟಿ ವಾಪಸ್ ಸ್ಪೇಸ್‍ಪಾರ್ಟ್ ನಲ್ಲಿ ಲ್ಯಾಂಡ್ ಆಗಲಿದೆ. ಸ್ಪೇಸ್‍ಪಾರ್ಟ್ ಲಾಂಚ್ ನಿಂದ ಲ್ಯಾಂಡಿಂಗ್ ನಡುವಿನ ಸಮಯ ಒಟ್ಟು 90 ನಿಮಿಷ. ವಿಎಸ್‍ಎಸ್ ಯುನಿಟಿ ಬರೋಬ್ಬರಿ 4 ನಿಮಿಷ ಅಂತರಿಕ್ಷ ಯಾತ್ರಿಗಳಿಗೆ ಝೀರೋ ಗ್ರೆವಿಟಿಯ ಅನುಭವವಾಗುತ್ತದೆ. ರಿಚರ್ಡ್ ಜೊತೆಯಲ್ಲಿ ಚೀಫ್ ಎಸ್ಟ್ರೋನಾಟ್ ಇನ್‍ಸ್ಟ್ರಕ್ಟರರ್ ಬೆಥ್ ಮೊಸೆಸ್, ಲೀಡ್ ಆಪರೇಷನ್ ಇಂಜಿನೀಯರ್ ಕೋಲಿನ್ ಬೆನ್ನೆಟ್, ಗವರ್ನ್‍ಮೆಂಟ್ ಅಫೇರ್ಸ್ ಮತ್ತು ರಿಸರ್ಚ್ ಆಪರೇಷನ್ ಉಪಾಧ್ಯಕ್ಷೆ ಶಿರೀಷಾ ಬಾಂದ್ಲಾ ಸಹ ಪ್ರಯಾಣಿಸಿದ್ದಾರೆ.

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement