ಮಾನಸಿಕ ಅಸ್ವಸ್ಥೆ ಯಾಮಾರಿಸಿ 1.7 ಕೋಟಿ ಚಿನ್ನಾಭರಣ ದೋಚಿದ ಸಾಧು ಬಂಧನ

ರಿಷಿಕೇಶ್: ಸಾಧುವೇಷದಲ್ಲಿದ್ದ ವ್ಯಕ್ತಿಯೊಬ್ಬ ಚಿನ್ನಾಭರಣಗಳ ಅಂಗಡಿ ಮಾಲೀಕನ ಪತ್ನಿಯನ್ನು ಯಾಮಾರಿಸಿ ಸುಮಾರು 1.75 ಕೋಟಿ ರೂಪಾಯಿ ಮೌಲ್ಯದ ಚಿನ್ನಾಭರಣಗಳನ್ನು ತೆಗೆದುಕೊಂಡು ಮೋದ ಮಾಡಿದ ಘಟನೆ ರಿಷಿಕೇಶದಲ್ಲಿ ವರದಿಯಾಗಿದೆ.
ಪ್ರಕರಣದ ತನಿಖೆ ನಡೆಸಿರುವ ಪೊಲೀಸರು ಮಹೇಂದ್ರ ರೊಡೆ ಅಲಿಯಾಸ್ ಯೋಗಿ ಪ್ರಿಯಾರ್ವತ್ ಅನಿಮೇಶ್‍ ಎಂಬಾತನನ್ನು ಲಾಲ್ ತಪ್ಪರ್ ಪ್ರದೇಶದ ನೇಚರ್ ವಿಲ್ಲಾದ ನಂಬರ್ 21ರ ಆತನ ಕಾಟೇಜ್‍ನಲ್ಲಿ ಬಂಧಿಸಿದ್ದಾರೆ. 10 ಲಕ್ಷ ರೂಪಾಯಿ ಮೌಲ್ಯದ ಚಿನ್ನ ಹಾಗೂ ಬೆಳ್ಳಿ ಆಭರಣಗಳನ್ನು ವಶ ಪಡಿಸಿಕೊಳ್ಳಲಾಗಿದೆ ಮತ್ತು 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ರಿಷಿಕೇಶ್ ಡಿಎಸ್‍ಪಿ ದಿನೇಶ್ ಚಂದ್ರ ಧುಂಡಿಯಾಲ್ ತಿಳಿಸಿದ್ದಾರೆ.
ಆರೋಪಿ ಅನಿಮೇಶ್ ಬರೆದಿರುವ ಮಾನಸ್ ಮೋತಿ ಪುಸ್ತಕವನ್ನು ಇತ್ತೀಚೆಗೆ ಉತ್ತರಾಖಾಂಡ್‍ನ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಬಿಡುಗಡೆ ಮಾಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ರಿಷಿಕೇಶದ ಖ್ಯಾತ ಚಿನ್ನಾಭರಣಗಳ ಅಂಗಡಿಯ ಮಾಲೀಕ ಹಿತೇಂದ್ರ ಪನ್ವಾರ್ ಅವರು ಪೊಲೀಸರಿಗೆ ದೂರು ನೀಡಿದ್ದಾರೆ. ತಮ್ಮ ಪತ್ನಿ ಮಾನಸಿಕ ಅಸ್ವಸ್ಥಳಾಗಿದ್ದು ಚಿಕಿತ್ಸೆ ಕೊಡಿಸಲಾಗುತ್ತಿದೆ. ಆಕೆಯ ಮಾನಸಿಕ ದೌರ್ಬಲ್ಯವನ್ನು ದುರುಪಯೋಗ ಪಡಿಸಿಕೊಂಡಿರುವ ಅನಿಮೇಶ್ ಅವರು ಚಿನ್ನಾಭರಣ ಮತ್ತು ನಗದನ್ನು ತೆಗೆದುಕೊಂಡಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಅನಿಮೇಶ್ ಗಣ್ಯ ವ್ಯಕ್ತಿಗಳ ಜೊತೆ ತೆಗೆಸಿಕೊಂಡ ಫೋಟೋಗಳನ್ನು ಫೆಸ್ ಬುಕ್‍ನಲ್ಲಿ ಪೋಸ್ಟ್ ಮಾಡಿ ತನ್ನ ಬಗ್ಗೆ ಪ್ರಚಾರ ಮಾಡಿಕೊಳ್ಳುತ್ತಿದ್ದ. ಆತನ ಸಂಪರ್ಕಕ್ಕೆ ಬಂದವರನ್ನು ನಂಬಿಸಿ ವಂಚನೆ ಮಾಡುತ್ತಿದ್ದ ಎಂದು ಪೊಲೀಸರು ತನಿಖೆ ವೇಳೆ ಪತ್ತೆ ಹಚ್ಚಿದ್ದಾರೆ. ಈ ಮೊದಲು ಎರಡು ಬಾರಿ ಇದೇ ರೀತಿಯ ಪ್ರಕರಣಗಳ ಮೇಲೆ ಜೈಲು ಸೇರಿದ್ದ ಈತನಿಂದ ಹಲವರು ವಂಚನೆಗೆ ಒಳಗಾಗಿದ್ದಾರೆ ಎಂದು ಪೊಲೀಸರು ಹೇಳಿದ್ದು, ತನಿಖೆ ಮುಂದುವರೆಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಮುಖ ಸುದ್ದಿ :-   ಲೋಕಸಭೆ ಚುನಾವಣೆ: ಮತದಾನಕ್ಕೂ ಮುನ್ನವೇ ಗೆಲುವು ಸಾಧಿಸಿದ ಬಿಜೆಪಿ ಅಭ್ಯರ್ಥಿ...!

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement