ಭಾರತದಲ್ಲಿ 4 ತಿಂಗಳಲ್ಲಿ ಕಡಿಮೆ ದೈನಂದಿನ ಕೋವಿಡ್ -19 ಪ್ರಕರಣ ದಾಖಲು

ನವದೆಹಲಿ: ಭಾರತವು ಕಳೆದ 24 ಗಂಟೆಗಳಲ್ಲಿ (ಮಂಗಳವಾರ ) 31,443 ಹೊಸ ಕೋವಿಡ್ -19 ಪ್ರಕರಣಗಳನ್ನು ವರದಿ ಮಾಡಿದೆ. ಇದು 118 ದಿನಗಳಲ್ಲಿ ದೇಶ ಕಂಡ ಪ್ರಕರಣಗಳಲ್ಲಿ ಇದು ಅತ್ಯಂತ ಕಡಿಮೆ ದೈನಂದಿನ ಸೋಂಕು ಆಗಿದೆ.
ಭಾರತದಲ್ಲಿ ಸಕ್ರಿಯ ಪ್ರಕರಣ 4,31,315 ಕ್ಕೆ ಇಳಿದಿದೆ, ಇದು 109 ದಿನಗಳಲ್ಲಿ ಇದು ಅತ್ಯಂತ ಕಡಿಮೆ.
ದೇಶದ ಕೋವಿಡ್ ಚೇತರಿಕೆ ದರ ಏತನ್ಮಧ್ಯೆ ಶೇ 97.28 ಕ್ಕೆ ಏರಿದೆ. ಕಳೆದ 24 ಗಂಟೆಗಳಲ್ಲಿ ಒಟ್ಟು 49,007 ರೋಗಿಗಳು ಚೇತರಿಸಿಕೊಂಡಿದ್ದು, ದೇಶದ ಒಟ್ಟು ಕೋವಿಡ್ ಚೇತರಿಕೆ 3,00,63,720 ಕ್ಕೆ ತಲುಪಿದೆ.
ದೈನಂದಿನ ಸಕಾರಾತ್ಮಕ ದರವು ಶೇಕಡಾ 1.81 ರಷ್ಟಿದೆ. ಇದು ಸತತ 22 ದಿನಗಳವರೆಗೆ ಶೇಕಡಾ ಮೂರು ಕ್ಕಿಂತಲೂ ಕಡಿಮೆಯಾಗಿದೆ. ಮತ್ತೊಂದೆಡೆ, ಸಾಪ್ತಾಹಿಕ ಸಕಾರಾತ್ಮಕ ದರವು ಪ್ರಸ್ತುತ ಶೇಕಡಾ 2.28 ರಷ್ಟಿದೆ.
ದೇಶದ ವ್ಯಾಕ್ಸಿನೇಷನ್ ಡ್ರೈವ್‌ಗೆ ಸಂಬಂಧಿಸಿದಂತೆ, ಭಾರತದಲ್ಲಿ ಇದುವರೆಗೆ 38.14 ಕೋಟಿ ಕೋವಿಡ್ ಲಸಿಕೆ ಪ್ರಮಾಣವನ್ನು ನೀಡಲಾಗಿದೆ. ಈ ಪೈಕಿ ಕಳೆದ 24 ಗಂಟೆಗಳಲ್ಲಿ 40 ಲಕ್ಷಕ್ಕೂ ಹೆಚ್ಚು ಪ್ರಮಾಣವನ್ನು ನೀಡಲಾಗಿದೆ.

ಪ್ರಮುಖ ಸುದ್ದಿ :-   ದೆಹಲಿ ವಕ್ಫ್ ಬೋರ್ಡ್ ಹಗರಣ : 9 ತಾಸುಗಳ ವಿಚಾರಣೆಯ ನಂತರ ಎಎಪಿ ನಾಯಕ ಅಮಾನತುಲ್ಲಾ ಖಾನ್ ಬಂಧಿಸಿದ ಇ.ಡಿ.

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement