ಸಫಾರಿ ವಾಹನಕ್ಕೇ ಕಾಲುಕೊಟ್ಟು ನಿಂತ ದೈತ್ಯಾಕಾರದ 3 ಹುಲಿಗಳು: ವಿಡಿಯೋ ನೋಡಿದರೆ ಬೆಚ್ಚಿ ಬೀಳ್ತೀರಿ..ಒಳಗಿದ್ದವರ ಪರಿಸ್ಥಿತಿ..?!

ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುವ ಕೆಲವಷ್ಟು ವಿಡಿಯೋಗಳು ನಮ್ಮನ್ನು ಬೆಚ್ಚಿ ಬೀಳಿಸುತ್ತವೆ ಹಅಗೂ ಅಚ್ಚರಿ ಮೂಡಿಸುತ್ತವೆ.
ಇಂಥದ್ದೇ ಈಗ ವೈರಲ್ ಆಗುತ್ತಿರುವ ವಿಡಿಯೋ ನಮ್ಮ ಗಮನ ಸೆಳೆಯುತ್ತದೆ. ವಿಡಿಯೋ ನೋಡಿದಾಕ್ಷಣ ಒಮ್ಮೆ ಎದೆ ಝಲ್‌ ಎನ್ನುತ್ತದೆ. ಈ ವಿಡಿಯೋ ವಿಡಿಯೋವನ್ನು ಐಎಫ್​ಎಸ್​ ಅಧಿಕಾರಿ ಸುಸಂತ ನಂದ ತಮ್ಮ ಟ್ವಿಟರ್​ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ವಿಡಿಯೊವನ್ನು ಐಎಫ್​ಎಸ್​ ಅಧಿಕಾರಿ ಸುಸಂತಾ ನಂದಾ ತಮ್ಮ ಟ್ವಿಟರ್​ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ವಿಡಿಯೊದಲ್ಲಿ ಅ ಅರಣ್ಯದಲ್ಲಿರುವ ಪ್ರಾಣಿಗಳನ್ನು ನೋಡಲೆಂದು ಟೂರಿಸ್ಟ್​ ವ್ಯಾನ್​ನಲ್ಲಿ ತುಂಬಾ ಪ್ರವಾಸಿಗರು ಹತ್ತಿ ಕುಳಿತಿದ್ದಾರೆ. ಸಫಾರಿ ಸಂದರ್ಭದಲ್ಲಿ ವಾಹನಕ್ಕೆ ಅಳವಡಿಸಲಾಗಿರುವ ತಂತಿ ಜಾಲರಿ ಮೂಲಕ ಹುಲಿಗಳು ಇಣುಕಿ ಹಾಕಿವೆ. ಜನರು ವ್ಯಾನ್​ ಒಳಗಿದ್ದರೂ ಸಹ ದೈತ್ಯಾಕಾರದ ಹುಲಿಗಳನ್ನು ನೋಡಿದಾಕ್ಷಣ ಒಮ್ಮೆಗೇ ಬೆಚ್ಚಿ ಬಿದ್ದಿರಬಹುದು. ಯಾಕೆಂದರೆ ಇವರ ವಾಹನಕ್ಕೆ ಕಾಲು ಕೊಟ್ಟು ದೈತ್ಯಾಕಾರದ ಮೂರು ಹುಲಿಗಳು ಇಣುಕಿ ಹಾಕಿವೆ. ವಾಹನದೊಳಗಿದ್ದ ಟೂರಿಸ್ಟ್‌ಗಳನ್ನು ಹತ್ತಿರದಿಂದ ನೋಡಿವೆ.

ಹೊರಗಡೆಯಿಂದ ನೋಡಲು ನಮಗೆ ರೋಮಾಂಚನವಾದರೂ ವ್ಯಾನ್​ ಒಳಗೆ ಕುಳಿತಿರುವವರ ಪರಿಸ್ಥಿತಿ ಹೇಗಾಗಿರಬೇಡ?
ವಿಡಿಯೋ ಹಂಚಿಕೊಳ್ಳಲಾಗುತ್ತಿದ್ದಂತೆಯೇ 28 ಸಾವಿರಕ್ಕೂ ಹೆಚ್ಚು ಜನರು ವಿಡಿಯೋವನ್ನು ನೋಡಿದ್ದಾರೆ. ಓರ್ವರು ಇಂಥಹ ಭಯಾನಕ ದೃಶ್ಯವನ್ನು ನಾನು ಎಂದೂ ನೋಡಿಲ್ಲ ಎಂದು ಪ್ರತಿಕ್ರಿಯೆ ನೀಡಿದ್ದಾರೆ. ಇನ್ನು ಕೆಲವರು ಸುರಕ್ಷಿತವಾಗಿ ಅರಣ್ಯದಿಂದ ಹೊರಬರಲು ಸಾಧ್ಯವೇ? ಎಂಬ ಪ್ರತಿಕ್ರಿಯೆಗಳು ಕೇಳಿ ಬಂದಿವೆ.

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

5 / 5. ಒಟ್ಟು ವೋಟುಗಳು 1

ನಿಮ್ಮ ಕಾಮೆಂಟ್ ಬರೆಯಿರಿ