ಕಿಡ್ನಿ ಮಾರಾಟ ಮಾಡಿ ಸಾಲ ತೀರಿಸಲು ಮುಂದಾದ ದಂಪತಿ ಕೈಯಿಂದಲೇ ಹೋಯ್ತು ಬರೋಬ್ಬರಿ 40 ಲಕ್ಷ ರೂ.ಗಳು..!

ಹೈದ್ರಾಬಾದ್: ದಂಪತಿ ತಾವು ಮಾಡಿಕೊಂಡಿದ್ದ ಸಾಲ ತೀರಿಸಲು ಹಣವಿಲ್ಲದೆ ಕಿಡ್ನಿ ಮಾರಲು ಮುಂದಾಗಿ ಅದರಲ್ಲಿಯೂ 40 ಲಕ್ಷ ಕಳೆದುಕೊಂಡು ಮೋಸ ಹೋದ ಘಟನೆ ಹೈದರಬಾದ್‍ನಲ್ಲಿ ವರದಿಯಾಗಿದೆ.
ಸ್ಟೇಷನರಿ ಅಂಗಡಿ ಇಟ್ಟುಕೊಂಡಿದ್ದ ದಂಪತಿ ವ್ಯಾಪಾರ ಹಾಗೂ ಮನೆ ನಿರ್ಮಾಣಕ್ಕಾಗಿ ಸಾಲ ತೆಗೆದುಕೊಂಡಿದ್ದರು. ಆದರೆ ಕೊರೊನಾ ಲಾಕ್‍ಡೌನ್ ಪರಿಣಾಮ ಆದಾಯ ಬಹುತೇಕ ನಿಂತು ಹೋಗಿತ್ತು. ಹೀಗಾಗಿ 1.5 ಲಕ್ಷ ಕೋಟಿ ರೂ. ಸಾಲ ಮಾಡಿ ಮಹಡಿ ಮನೆ ನಿರ್ಮಿಸಿದ್ದರ ಸಾಲ ತೀರಿಸಲು ಸಾಧ್ಯವಾಗದೇ ಹೋಯಿತು. ಆಗ ಅವರು ಅನಿವಾರ್ಯವಾಗಿ ತಮ್ಮ ಕಿಡ್ನಿ ಮಾರಾಟ ಮಾಡಲು ಮುಂದಾಗಿದ್ದಾರೆ. ಕಿಡ್ನಿ ಮಾರಾಟಕ್ಕಾಗಿ ಸಾಮಾಜಿಕ ಜಾಲ ತಾಣದ ಮೊರೆ ಹೋಗಿದ್ದಾರೆ.
ಮಾರ್ಚ್ ತಿಂಗಳಲ್ಲಿ ಈ ದಂಪತಿಗೆ ಸಾಮಾಜಿಕ ಜಾಲತಾಣದ ಮೂಲಕ ವ್ಯಕ್ತಿಯೊಬ್ಬನ ಪರಿಚಯವಾಗಿದೆ. ಆ ವ್ಯಕ್ತಿ ತಾನು ಬ್ರಿಟನ್ನಿನಲ್ಲಿ ವೈದ್ಯನಾಗಿ ಸೇವೆ ಸಲ್ಲಿಸುತ್ತಿರುವುದಾಗಿ ಹೇಳಿಕೊಂಡಿದ್ದಾನೆ. ಅಲ್ಲದೆ, ಬಳಿ ಕಿಡ್ನಿಗೆ 5 ಕೋಟಿ ರೂ.ಗಳನ್ನು ಕೊಟ್ಟು ಖರೀದಿಸುವುದಾಗಿ ಈ ದಂಪತಿಯನ್ನು ನಂಬಿಸಿದ್ದಾನೆ. ಕಿಡ್ನಿ ಖರೀದಿಸುವಾಗ ಆಗುವ ನೋಂದಣಿ ವೆಚ್ಚ, ನಿರ್ವಹಣಾ ವೆಚ್ಚ , ಮೊದಲಾದ ಖರ್ಚುಗಳೆಲ್ಲ ಸೇರಿ ಸುಮಾರು 26 ಲಕ್ಷ ರೂ.ಗಳಷ್ಟು ವೆಚ್ಚ ಮಾಡಬೇಕಾಗುತ್ತದೆ.ಇದಕ್ಕಾಗಿ ಆರಂಭದಲ್ಲಿ ನೀವು ಹಣ ಕಟ್ಟಬೇಕಾಗುತ್ತದೆ ಎಂದು ದಂಪತಿ ಬಳಿ ತನ್ನ ಖಾತೆಗೆ ಹಣ ಹಾಕಿಸಿಕೊಂಡಿದ್ದಾನೆ. ಅಷ್ಟೇ ಅಲ್ಲದೆ ಬೆಂಗಳೂರಿನ ಲಾಜ್‌ ನಲ್ಲಿ ಭೇಟಿಯಾಗುವುದಾಗಿ ಈ ನಕಲಿ ವೈದ್ಯ ಈ ದಂಪತಿಯನ್ನು ಯಾಮಾರಿಸಿದ್ದಾನೆ.
ಕೊನೆಗೆ ಬೆಂಗಳೂರಿನ ಲಾಜ್‌ನಲ್ಲಿ ಈ ದಂಪತಿಯನ್ನು ಆಫ್ರಿಕಾದ ಪ್ರಜೆಯೋರ್ವ ಭೇಟಿಯಾಗಿ ಸೂಟ್‍ಕೇಸ್‍ನಲ್ಲಿ ಕಪ್ಪು ನೋಟುಗಳನ್ನು ತಂದಿರುವುದಾಗಿ ತೋರಿಸಿದ್ದಾನೆ. ಇದಕ್ಕೆ ರಾಸಾಯನಿಕ ಮಿಕ್ಸ್ ಮಾಡಿದರೆ ಅದು 2 ಸಾವಿರ ರೂ.ಗಳ ನೋಟಾಗಿ ಪರಿವರ್ತನೆಯಾಗುತ್ತದೆ ಎಂದು ಹೇಳಿದ್ದಾನೆ. ದುಡ್ಡಿನ ಅನಿವಾರ್ಯತೆಯಲ್ಲಿದ್ದ ದಂಪತಿ ಅದನ್ನೂ ನಂಬಿದ್ದಾರೆ. ದಂಪತಿಗೆ ಕಪ್ಪುಹಣವನ್ನು ಕೊಟ್ಟು ಇದಕ್ಕೆ ಬೇಕಿರುವ ಕೆಮಿಕಲ್ ಕಳಿಸುತ್ತೇನೆಂದು ಹೇಳಿ ಮತ್ತೆ 14 ಲಕ್ಷ ರೂ.ಗಳಷ್ಟು ಹಣವನ್ನ ದಂಪತಿಯಿಂದ ಟ್ರಾನ್ಸ್ ಫರ್ ಮಾಡಿಸಿಕೊಂಡಿದ್ದಾನೆ. ಬರೋಬ್ಬರಿ 40 ಲಕ್ಷ ಹಣ ಕಳೆದುಕೊಂಡ ನಂತರ ತಾವು ಮೋಸ ಹೋದೆವೆಂದರಿತ ದಂಪತಿ ಕೊನೆಗೂ ಪೊಲೀಸರಿಗೆ ದೂರು ನೀಡಿದ್ದಾರೆ.

ಪ್ರಮುಖ ಸುದ್ದಿ :-   'ಇದು ಸಾಮಾನ್ಯ ಚುನಾವಣೆಯಲ್ಲ' : ಲೋಕಸಭೆ ಚುನಾವಣೆ ಮೊದಲ ಹಂತದ ಮತದಾನಕ್ಕೂ ಮುನ್ನ ಬಿಜೆಪಿ-ಎನ್‌ಡಿಎ ಅಭ್ಯರ್ಥಿಗಳಿಗೆ ಪತ್ರ ಬರೆದ ಪ್ರಧಾನಿ ಮೋದಿ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement