ಕುವೈತ್‌ನಲ್ಲಿ ಸಿಲುಕಿದ್ದ ತಾಯಿ-ಮಗುವಿನ ಮಂಗಳೂರು ಪ್ರಯಾಣಕ್ಕೆ 10 ನಿಮಿಷದೊಳಗೆ ವ್ಯವಸ್ಥೆ ಮಾಡಿಸಿದ ಸಚಿವೆ ಶೋಭಾ

ಮಂಗಳೂರು: ಸಮಯಕ್ಕೆ ಸರಿಯಾಗಿ ವಿದೇಶಾಂಗ ಸಚಿವಾಲಯ(ಎಂಇಎ) ನೆರವಾಗಿದ್ದರಿಂದ ಮಹಿಳೆ ಮತ್ತು ಆಕೆಯ ಆರು ತಿಂಗಳ ಮಗು ಕುವೈತ್‌ನಿಂದ ಮಂಗಳೂರಿಗೆ ಬರಲು ವಿಮಾನ ಏರುವಂತಾಗಿದೆ.
ಶನಿವಾರ ಸಂಜೆ ಕೋವಿಡ್ ಮಾರ್ಗಸೂಚಿಯಲ್ಲಿನ ಕೆಲ ಗೊಂದಲಗಳಿಂದಾಗಿ ತಾಯಿ ಮತ್ತು ಮಗು ಸ್ವದೇಶಕ್ಕೆ ವಾಪಸ್ಸಾಗಲು ಅಡ್ಡಿಯಾಗಿತ್ತು. ಕುವೈತ್ ನಲ್ಲಿ ಪತಿ ಜತೆಗಿದ್ದ ಕುಂಟಿಕಾನ ನಿವಾಸಿ ಅದಿತಿ ಸುದೇಶ್ ನಾಯಕ್ ತಮ್ಮ ಬೆನ್ನಮೂಳೆಯ ಚಿಕಿತ್ಸೆಗಾಗಿ ಪುತ್ರ ಶಿವನಶ್‌ ಜೊತೆಗೆ ಸಂಜೆ 5 ಗಂಟೆಗೆ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನಕ್ಕಾಗಿ ಕುವೈತ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ತಲುಪಿದರು. ಆದರೆ ಆರ್‌ಟಿಪಿಸಿಆರ್ ವರದಿ ಹೊಂದಿರದ ಕಾರಣ ಶಿವನಶ್‌ಗೆ ಬೋರ್ಡಿಂಗ್ ಪಾಸ್ ನೀಡಲು ವಿಮಾನ ನಿಲ್ದಾಣದ ಸಿಬ್ಬಂದಿ ನಿರಾಕರಿಸಿದರು.
ಪ್ರಯಾಣಕ್ಕಾಗಿ ಅದಿತಿ ಕುವೈತ್ ನಲ್ಲಿಯೇ ಆರ್ ಟಿಪಿಸಿಆರ್ ಪರೀಕ್ಷೆ ಮಾಡಿ ಪ್ರಮಾಣಪತ್ರವನ್ನು ತಂದಿದ್ದರು. ಆದರೆ ವಿಮಾನ ಪ್ರಯಾಣಕ್ಕೆ ಆರು ತಿಂಗಳ ಮಗುವಿಗೆ ಪರೀಕ್ಷೆ ಅಗತ್ಯವಿಲ್ಲ ಎಂದು ಏರ್ ಇಂಡಿಯಾ ಕಚೇರಿ ಸಿಬ್ಬಂದಿ ತಿಳಿಸಿದ ಕಾರಣ ಮಗುವಿನ ಪರೀಕ್ಷೆ ಮಾಡಿಸಿರಲಿಲ್ಲ. ಇದು ಅವರಿಗೆ ಸಂಕಷ್ಟಕ್ಕೆ ಕಾರಣವಾಯಿತು.
ಕುವೈತ್ ವಿಮಾನ ನಿಲ್ದಾಣದಲ್ಲಿ ದಾಖಲೆ ಪರಿಶೀಲಿಸಿದ ಅಧಿಕಾರಿಗಳು ಭಾರತದ ಮಾರ್ಗಸೂಚಿ ಪ್ರಕಾರ ಆರ್ಟಿಪಿಸಿಆರ್ ನೆಗೆಟಿವ್ ವರದಿ ಇಲ್ಲದೆ ಮಗುವಿನ ಪ್ರಯಾಣ ಸಾಧ್ಯವಿಲ್ಲ ಎಂದು ಹೇಳಿದ್ದು ಅದರ ವ್ಯವಸ್ಥೆ ಮಾಡಲು ಅವರಿಗೆ 20 ನಿಮಿಷಗಳ ಸಮಯವನ್ನು ನೀಡಿದ್ದರು.
ಈ ವೇಳೆ ದಂಪತಿ ತಮ್ಮ ಸಂಬಂಧಿ ಎಂಜಿನಿಯರ್ ಮೋಹನ್‌ದಾಸ್ ಕಾಮತ್ ಅವರನ್ನು ಸಂಪರ್ಕಿಸಿದರು. ಅವರು ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ರಾಜ್ಯ ಸಚಿವ ಶೋಭಾ ಕರಂದ್ಲಾಜೆ ಅವರಿಗೆ ಈ ವಿಷಯ ತಿಳಿಸಿದರು. ಸಚಿವರು ಎಂಇಎ ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿದ್ದರು ಮತ್ತು ಭಾರತ ವಿಮಾನ ಹತ್ತಲು ಮಗುವಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಂಡರು. ಇದೆಲ್ಲವೂ 15 ನಿಮಿಷಗಳಲ್ಲಿ ಆಗಿ ಹೋಯಿತು.
ಮೊದಲಿಗೆ ಕರಂದ್ಲಾಜೆ ಅವರೊಂದಿಗೆ ಮಾತನಾಡಿದಾಗ ಅವರು ಯಾವುದೇ ಭರವಸೆ ನೀಡಿರಲಿಲ್ಲ. ಆದರೆ ಅದಕ್ಕೆ ಪರಿಹಾರ ನೀಡುವ ಭರವಸೆ ನೀಡಿದರು. ‘ಆದರೆ 5 ನಿಮಿಷಗಳಲ್ಲಿ ಮತ್ತೆ ಕರೆ ಮಾಡಿದರು. ಮಗು ವಿಮಾನ ಹತ್ತಬಹುದು ಎಂದು ತಿಳಿಸಿದರು ಎಂದು ಕಾಮತ್ ಹೇಳಿದರು.
ಶನಿವಾರ ತಡರಾತ್ರಿ ಮಂಗಳೂರು ತಲುಪಿದ ಆದಿತಿ, ವಿಮಾನ ನಿಲ್ದಾಣದ ಅಧಿಕಾರಿಗಳು ಸಹಾಯ ಮಾಡಲು ನಿರಾಕರಿಸಿದಾಗ ತಾನು ಮತ್ತು ಪತಿ ತೀವ್ರ ಆತಂಕಕ್ಕೊಳಗಾಗಿದ್ದೆವು ಎಂದು ಹೇಳಿದರು. ‘ನಾನು ಅವರನ್ನು ಕಾಡಿ ಬೇಡಿದ್ದೆ, ವಅಷ್ಟರಲ್ಲಿ ಎಂಇಎ ಅಧಿಕಾರಿಗಳು ಅವರನ್ನು ಸಂಪರ್ಕಿಸಿದ ನಂತರ, ಅಲ್ಲಿನ ಅಧಿಕಾರಿಗಳೇ ಓಡಿ ಬಂದು ನಮ್ಮನ್ನು ವಿಮಾನಕ್ಕೆ ಕರೆದೊಯ್ದರು ಆದಿತಿ ಹೇಳಿದ್ದಾರೆ.

ಪ್ರಮುಖ ಸುದ್ದಿ :-   ನ್ಯಾಯಾಲಯದ ನಿರ್ದೇಶನ ಪಾಲಿಸಲು ನಿರ್ಲಕ್ಷ್ಯ: ರಾಜ್ಯ ಸರ್ಕಾರದ 41 ಇಲಾಖೆಗಳಿಗೆ ಹೈಕೋರ್ಟ್‌ ನೋಟಿಸ್‌

1 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement