ಆಕರ್ಷಕ ಮುಖಪುಟದ ಮೂರು ಆಯ್ದ ಪುಸ್ತಕಗಳಿಗೆ ಬಹುಮಾನ

ಹುಬ್ಬಳ್ಳಿ: ಆಕರ್ಷಕ ಮುಖಪುಟದ ಮೂರು ಆಯ್ದ ಪುಸ್ತಕಗಳಿಗೆ( 2018, 2019 ಮತ್ತು 2020 ತಲಾ ಒಂದು ) ತಲಾ ಒಂದು ಸಾವಿರ ನಗದು ಬಹುಮಾನ ಮತ್ತು ಪ್ರಶಂಸಾ ಪತ್ರನೀಡಲಾಗುತ್ತದೆ ಎಂದು ಉಮಾಶಂಕರ ಪ್ರತಿಷ್ಠಾನ ತಿಳಿಸಲಾಗಿದೆ.
ಪುಸ್ತಕದ ಮುಖಪುಟದ ಮುದ್ರಣ, ಕಲಾತ್ಮಕತೆ ,‌ಬಳಸಿದ ಕಾಗದದ ಗುಣಮಟ್ಟ ಮತ್ತು ಇತರ ಅಂಶಗಳನ್ನು ಪರಿಗಣಿಸಲಾಗುತ್ತದೆ. ಇದನ್ನು ರಾಜ್ಯೋತ್ಸವ ಅಂಗವಾಗಿ ನೀಲಾಗುತ್ತದೆ ಎಂದು ತಿಳಿಸಲಾಗಿದೆ. ಆಸಕ್ತರು 2018, 2019, 2020 ರಲ್ಲಿ ಪ್ರಕಟವಾದ ತಮ್ಮ ಪುಸ್ತಕದ ಒಂದು ಪ್ರತಿಯನ್ನು ರಾಜೇಂದ್ರ ಪಾಟೀಲ, ನಂ.245, “ಶ್ರೀನಿವಾಸ” ಬಮ್ಮಿಗಟ್ಟಿ ಬಿಲ್ಡಿಂಗ್,‌3 ನೇ ಕ್ರಾಸ್,‌1ನೇ ಮುಖ್ಯರಸ್ತೆ,‌ ನಂದಿ ಬಡಾವಣೆ, RTO ಎದುರು, ನವನಗರ, ಹುಬ್ಬಳ್ಳಿ- 580025 ಮೊ: 9148391546 ಈ ವಿಳಾಸಕ್ಕೆ‌‌ 31.08.2021 ರೊಳಗೆ ತಲುಪುವಂತೆ ಕಳಿಸಬೇಕು. ಪ್ರತಿಷ್ಠಾನದ ತೀರ್ಪು ಅಂತಿಮ. ಪುಸ್ತಕವನ್ನು ಯಾವುದೇ ಕಾರಣಕ್ಕೆ ಹಿಂತಿರುಗಿಸಲಾಗುವುದಿಲ್ಲ ಎಂದು ಉಮಾಶಂಕರ ಪ್ರತಿಷ್ಠಾನ ತಿಳಿಸಿದೆ.

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement