ಮಂಗೋಲಿಯಾ, ತಜಿಕಿಸ್ತಾನ ಮತ್ತು ಸ್ವಿಡ್ಜರ್ಲೆಂಡ್ ಕ್ರಿಕೆಟ್ ಜಗತ್ತಿಗೆ ಸೇರ್ಪಡೆ

ದುಬೈ: ಮಂಗೋಲಿಯಾ, ತಜಿಕಿಸ್ತಾನ ಮತ್ತು ಸ್ವಿಡ್ಜರ್ಲೆಂಡ್ ದೇಶಗಳನ್ನು ಹೊಸ ಸದಸ್ಯ ರಾಷ್ಟ್ರಗಳಾಗಿ ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ೭೮ನೇ ವಾರ್ಷಿಕ ಸರ್ವಸದಸ್ಯರ ಸಭೆಯಲ್ಲಿ ಆಂಗೀಕರಿಸಿದೆ.

ವರ್ಚುವಲ್ ಸಭೆಯಲ್ಲಿ ಮಂಗೋಲಿಯಾ ಹಾಗೂ ತಜಿಕಿಸ್ತಾನವನ್ನು ಏಷ್ಯಾ ಪ್ರದೇಶದ ೨೨ ಹಾಗೂ ೨೩ನೇ ಸದಸ್ಯರಾಷ್ಟ್ರಗಳಾಗಿ ಸೇರಿಸಿಕೊಳ್ಳಲಾಗಿದೆ. ಯೂರೋಪ್ ನ ೩೫ನೇ ಸದಸ್ಯ ದೇಶವಾಗಿ ಸ್ವಿಡ್ಜರ್ಲೆಂಡ್ ಸೇರ್ಪಡೆಯಾಗಿದೆ. ಇದೀಗ ಐಸಿಸಿ ೯೪ ಸಹಸದಸ್ಯತ್ವ ಸೇರಿದಂತೆ ೧೦೬ ಸದಸ್ಯದೇಶಗಳನ್ನು ಹೊಂದಿದಂತಾಗಿದೆ.

ಎಲ್ಲ ಮೂರು ಅರ್ಜಿದಾರ ದೇಶಗಳು ಮಹಿಳೆಯರು ಮತ್ತು ಯುವಜನತೆಯಲ್ಲಿ ಕ್ರಿಕೆಟ್ ಬೆಳೆಸಲು ಬದ್ಧತೆ ಹೊಂದಿದ್ದು, ಅವು ತಮ್ಮ ಸಾಮರ್ಥ್ಯವನ್ನು ಸಾಧಿಸುವ ನಿಟ್ಟಿನಲ್ಲಿ ಐಸಿಸಿ ನೆರವಾಗಲಿದೆ ಎಂದು ಐಸಿಸಿ ಅಭಿವೃದ್ಧಿ ವಿಭಾಗದ ಪ್ರಧಾನ ವ್ಯವಸ್ಥಾಪಕ ವಿಲಿಯಂ ಗ್ಲೆನ್ವರ್ತ್ ಹೇಳಿದ್ದಾರೆ.

 

 

 

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement