ಶ್ಯಾಮರಾವ್ ದತ್ತಿ ಪ್ರಶಸ್ತಿ ಪತ್ರಕರ್ತ ವಿಠ್ಠಲದಾಸ ಕಾಮತರ ೩೫ ವರ್ಷಗಳ ಪರಿಶ್ರಮಕ್ಕೆ ಸಂದ ಗೌರವ: ಜಗದೀಶ ನಾಯಕ

posted in: ರಾಜ್ಯ | 0

ಅಂಕೋಲಾ : ಹಿರಿಯ ಪತ್ರಕರ್ತ ವಿಠ್ಠಲದಾಸ ಕಾಮತ ಅವರಿಗೆ ಕೆ. ಶ್ಯಾಮರಾವ್ ದತ್ತಿ ಪ್ರಶಸ್ತಿ ಸಿಕ್ಕಿರುವುದು ಅಂಕೋಲೆ ಹೆಮ್ಮೆಗೆ ಕಾರಣವಾಗಿದೆ. ಕಳೆದ ೩೫ ವರ್ಷಗಳಿಂದ ಪತ್ರಕರ್ತರಾಗಿ ಸೇವೆ ಸಲ್ಲಿಸುವುದರ ಜೊತೆಗೆ ವಿವಿಧ ಸಂಘ-ಸಂಸ್ಥೆ ಮತ್ತು ಮಾನವೀಯ ಮೌಲ್ಯಗಳನ್ನು ಹೊಂದಿರುವ ಇವರಿಗೆ ಇನ್ನಷ್ಟು ಪ್ರಶಸ್ತಿಗಳು ದೊರೆಯುವಂತಾಗಲಿ ಎಂದು ಕನ್ನಡ ಚಂದ್ರಮದ ಅಧ್ಯಕ್ಷ ಜಗದೀಶ ಜಿ. ನಾಯಕ ಹೊಸ್ಕೇರಿ ಹೇಳಿದರು.
ತಾಲೂಕಿನ ತೆಂಕಣಕೇರಿಯ ಅವರ ಮನೆಯಲ್ಲಿಯೇ ಬುಧವಾರ ಕಡಲು ಪ್ರಕಾಶನದ ವತಿಯಿಂದ ಹಮ್ಮಿಕೊಂಡ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ನಿವೃತ್ತ ಗ್ರಂಥಪಾಲಕ ಮಹಾಂತೇಶ ರೇವಡಿ ಮಾತನಾಡಿ, ಕೆಲವು ಪ್ರಶಸ್ತಿಗಳು ಬಂದ ನಂತರ ವ್ಯಕ್ತಿಗೆ ಮಹತ್ವ ಬರುತ್ತದೆ. ಆದರೆ ಕೆಲವರಿಗೆ ಪ್ರಶಸ್ತಿ ಬಂದ ನಂತರ ಪ್ರಶಸ್ತಿಯ ಗೌರವ ಹೆಚ್ಚಿಸುತ್ತದೆ. ಈ ನಿಟ್ಟಿನಲ್ಲಿ ವಿಠ್ಠಲದಾಸ ಅವರು ಎರಡನೇ ಸಾಲಿಗೆ ಸೇರಿದವರು ಎಂದರು.

ಕೋಟ್‌
ನನಗೆ ಪ್ರಶಸ್ತಿ ದೊರಕಿರುವುದಕ್ಕಿಂತ ಹೆಚ್ಚಾಗಿ ಈ ಪ್ರಶಸ್ತಿ ಬಂದ ನಂತರ ಜನರು ನನ್ನನ್ನು ಗೌರವಿಸುವುದನ್ನು ಕಂಡು ಅತ್ಯಂತ ಸಂತಸವಾಗಿದೆ. ಹಲವರು ಮನೆಗೆ ಬಂದು ಸನ್ಮಾನಿಸುತ್ತಿದ್ದಾರೆ. ಒಬ್ಬ ಪತ್ರಕರ್ತನಿಗೆ ಇದಕ್ಕಿಂತ ಗೌರವ ಬೇರೆ ಬೇಕಾಗಿಲ್ಲ.
– ವಿಠ್ಠಲದಾಸ ಕಾಮತ
ಕೆ. ಶ್ಯಾಮರಾವ್ ದತ್ತಿ ಪ್ರಶಸ್ತಿ ಪುರಸ್ಕೃತ ಪತ್ರಕರ್ತ

ಸಾಹಿತಿ ಗೋಪಾಲಕೃಷ್ಣ ನಾಯಕ ಮಾತನಾಡಿ, ಪತ್ರಿಕೆ ವಿತರಕರಾಗಿ ವೃತ್ತ ಜೀವನ ಆರಂಭಿಸಿ ನಂತರ ಪತ್ರಕರ್ತರಾಗಿ ಈ ಪ್ರಶಸ್ತಿ ದೊರೆತಿರುವುದು ಅತ್ಯಂತ ಹೆಮ್ಮೆಯ ಸಂಗತಿ ಎಂದರು.
ಜಿಲ್ಲಾ ಹಿಂದುಳಿದ ವರ್ಗಗಳ ವೇದಿಕೆಯ ಸಂಚಾಲಕ ಉಮೇಶ ನಾಯ್ಕ ಮಾತನಾಡಿ, ತಡವಾದರೂ ಕೂಡ ಸಜ್ಜನ ವ್ಯಕ್ತಿಗೆ ಗೌರವ ಅರಸಿ ಬರುತ್ತದೆ ಎಂದರು. ಪತ್ರಕರ್ತರಾದ ವಿದ್ಯಾಧರ ಮೊರಬಾ, ವಿಲಾಸ ನಾಯಕ, ಪುರಸಭೆ ಮಾಜಿ ಸದಸ್ಯ ಸಂದೀಪ ಬಂಟ, ಶಿಕ್ಷಕ ಜಿ.ಆರ್. ತಾಂಡೇಲ, ಪತ್ರಕರ್ತ ನಾಗರಾಜ ಮಂಜಗುಣಿ ಇದ್ದರು.

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

5 / 5. ಒಟ್ಟು ವೋಟುಗಳು 1

ನಿಮ್ಮ ಕಾಮೆಂಟ್ ಬರೆಯಿರಿ