ಸಿಎಂ ಏರ್ಪಡಿಸಿದ್ದ ಶಾಸಕರ ಭೋಜನ ಕೂಟವೂ ದಿಢೀರ್ ಮುಂದೂಡಿಕೆ..!

ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ನಾಯಕತ್ವ ಬದಲಾವಣೆಯಾಗಲಿದೆ ಎಂಬ ವದಂತಿ ಕೇಳಿ ಬರುತ್ತಿರುವಾಗಲೇ ಆಡಳಿತಾರೂಢ ಬಿಜೆಪಿಯಲ್ಲಿ ಕ್ಷಣಕ್ಕೊಂದು ಬೆಳವಣಿಗೆಗಳು ನಡೆಯುತ್ತಿವೆ. ಜುಲೈ 26ರಂದು ಸರ್ಕಾರಕ್ಕೆ ಎರಡು ವರ್ಷ ಪೂರೈಸುತ್ತಿರುವ ಹಿನ್ನಲೆಯಲ್ಲಿ ಭಾನುವಾರ ಸಂಜೆ ನಗರದ ಖಾಸಗಿ ಹೋಟೆಲ್‍ನಲ್ಲಿ ಸಚಿವರು, ಶಾಸಕರು , ವಿಧಾನಪರಿಷತ್ ಸದಸ್ಯರು ಹಾಗೂ ಅಧಿಕಾರಿಗಳ ವರ್ಗಕ್ಕೆ ಏರ್ಪಡಿಸಿದ್ದ ಭೋಜನ ಕೂಟವನ್ನು ದಿಢೀರನೆ ರದ್ದುಗೊಳಿಸಲಾಗಿದೆ.
ಬಿಜೆಪಿಯಲ್ಲಿ ಮತ್ತೊಂದು ಸಂದೇಶವನ್ನು ರವಾನಿಸಿದ್ದು, ಯಡಿಯೂರಪ್ಪ ಸುಲಭವಾಗಿ ಅಧಿಕಾರದಿಂದ ಇಳಿಯುವ ಸಾಧ್ಯತೆಗಳು ಕಡಿಮೆ ಎಂಬ ಸಂದೇಶ ಹರಿದಾಡುತ್ತಿವೆ.
ಸರ್ಕಾರಕ್ಕೆ ಎರಡು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಇದೇ 25ರ ಸಂಜೆ 7 ಗಂಟೆಗೆ ಶಾಸಕರು ಮತ್ತು ವಿಧಾನಪರಿಷತ್ ಸದಸ್ಯರು ಹಾಗೂ ಅಧಿಕಾರಿಗಳಿಗೆ ಭೋಜನ ಕೂಟ ಏರ್ಪಡಿಸಿದ್ದರು.
ಇದಾದ ನಂತರ 26ರಂದು ಶಾಸಕಾಂಗ ಸಭೆ ನಡೆಯಲಿದ್ದು, ಬಳಿಕ ತಮ್ಮ ಸ್ಥಾನಕ್ಕೆ ರಾಜೀನಾಮೆಯನ್ನು ಸಲ್ಲಿಸಲಿದ್ದಾರೆ ಎಂಬ ಮಾತುಗಳು ಕೇಳಿ ಬಂದಿದ್ದವು. ಈಗ ಎಲ್ಲವೂ ಬದಲಾಗಿದೆ, ಜುಲೈ 26ರಂದು ಯಡಿಯೂರಪ್ಪ ಕರೆದಿದ್ದ ಶಾಸಕ ಸಭೆ ರದ್ದಾದ ಮಾಹಿತಿ ನಿನ್ನೆ (ಮಂಗಳವಾರ) ಬಂದಿತ್ತು. ಭೂಜನಕೂಟ ಮಾತರ ನಡೆಯಲಿದೆ ಎಂದು ಹೇಳಲಾಗಿತ್ತು. ಈಗ ಅದೂ ರದ್ದಾದ ಮಾಹಿತಿ ಬಂದಿದೆ.
ಮುಖ್ಯಮಂತ್ರಿಗಳ ಆಪ್ತ ಮೂಲಗಳ ಪ್ರಕಾರ 10 ಆಯ್ದ ಜಿಲ್ಲೆಗಳಲ್ಲಿ ಅಧಿಕಾರಿಗಳು, ಶಾಸಕರು ಸೇರಿದಂತೆ ಮತ್ತಿತರ ಜೊತೆ ಮಳೆ ಹಾನಿ ಕುರಿತಂತೆ ಸಿಎಂ ವಿಡಿಯೋ ಕಾನ್ಫರೆನ್ಸ್ ನಡೆಸಲಿದ್ದಾರೆ. ಹೀಗಾಗಿ ಕೆಲ ಶಾಸಕರು ತಮಗೆ ಬರಲು ಸಾಧ್ಯವಾಗುತ್ತಿಲ್ಲ ಎಂದು ದೂರವಾಣಿ ಮೂಲಕ ವಿಧಾನಸಭೆಯ ಮುಖ್ಯ ಸಚೇತಕ ವಿ.ಸುನೀಲ್‍ಕುಮಾರ ಅವರಿಗೆ ತಿಳಿಸಿದ್ದಾರೆ ಎಂದು ಹೇಳಲಾಗುತ್ತಿದೆ.

ಪ್ರಮುಖ ಸುದ್ದಿ :-   ಕನ್ನಡ ಚಿತ್ರರಂಗದ ಹಿರಿಯ ನಟ ದ್ವಾರಕೀಶ ಇನ್ನಿಲ್ಲ

ಇನ್ನೊಂದು ಮೂಲದ ಪ್ರಕಾರ ಮಠಾಧೀಶರು, ಬೆಂಬಲಿಗರು ಸೇರಿದಂತೆ ಮತ್ತಿತರರ ಮೂಲಕ ಕೇಂದ್ರ ವರಿಷ್ಠರಿಗೆ ಒತ್ತಡ ಹಾಕಲು ಭೋಜನ ಕೂಟ ಮುಂದೂಡಲಾಗಿದೆ ಎಂದು ಹೇಳಲಾಗುತ್ತಿದೆ. ಇನ್ನಷ್ಟು ಧಾರ್ಮಿಕ ಮುಖಂಡರ ಮೂಲಕ ಒತ್ತಡ ಹಾಕಿದರೆ ಕೆಲ ದಿನಗಳ ಮಟ್ಟಿಗಾದರೂ ಕುರ್ಚಿ ಉಳಿಸಿಕೊಳ್ಳಬಹುದು ಎಂಬುದು ಅವರ ಲೆಕ್ಕಾಚಾರ ಯಡಿಯೂರಪ್ಪನವರದ್ದು ಎಂದು ಹೇಳಾಗುತ್ತಿದೆ. ಯಡಿಯೂರಪ್ಪ ಎಲ್ಲಿಯೂ ಒಂದೂಮಾಥನಾಡುತ್ತಿಲ್ಲ. ಆದರೆ ಎಲ್ಲವೂ ಅವರ ಸೂಚನೆಯಂತೆ ನಡೆಯುತ್ತಿದೆ ಎಂದೂಹೇಳಲಾಗುತ್ತಿದೆ.
ಈಗಾಗಲೇ ಅನೇಕ ಮಠಾಧೀಶರು ಯಡಿಯೂರಪ್ಪ ಅವರನ್ನು ಅಧಿಕಾರದಿಂದ ಕೆಳಗಿಳಿಸಬಾರದು ಎಂದು ನೇರವಾಗಿ ಬಿಜೆಪಿ ಹೈಕಮಾಂಡಿಗೆ ಹೇಳಿದ್ದಾರೆ. ಸಾಧ್ಯವಾದಷ್ಟು ಶಾಸಕಾಂಗ ಸಭೆ, ಭೋಜನ ಕೂಟ ಮುಂದೂಡಿದರೆ ವರಿಷ್ಠರು ಒತ್ತಡಕ್ಕೆ ಮಣಿದ ರಾಜೀನಾಮೆ ನಿರ್ಧಾರದಿಂದ ಹಿಂದೆ ಸರಿಯಬಹುದೆಂಬುದು ಯಡಿಯೂರಪ್ಪ ಬಣದ ಆಲೋಚನೆಯಾಗಿದೆ ಎನ್ನಲಾಗಿದೆ,ಒಟ್ಟಿನಲ್ಲಿ ಕರ್ನಾಟಕದ ಬಿಜೆಪಿಯಲ್ಲಿ ದಿನಕ್ಕೊಂದು ಬೆಳವಣಿಗೆ ನಡೆಯುತ್ತಿದ್ದು ಗೊಂದಲ ಇನ್ನೂ ಮುಂದುವರಿಯುವಂತೆ ಕಾಣುತ್ತಿದೆ.

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement