ಸಿಎಂ ಬಿಎಸ್‌ವೈಯಾರ ಚಮಚವೂ ಅಲ್ಲ ಎಂಬುದಕ್ಕಾಗಿ ಅವರಿಗೆ ಕಷ್ಟ: ಅದಕ್ಕೇ ಆಗದವರಿಂದ ಪಿತೂರಿ: ಸುಬ್ರಮಣಿಯನ್‌ ಸ್ವಾಮಿ

ನವದೆಹಲಿ: ಈಗ ದೇಶಾದ್ಯಂತೆ ಕರ್ನಾಟಕ ರಾಜಕೀಯದ್ದೇ ಮಾತು. ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ರಾಜೀನಾಮೆ ಸಲ್ಲಿಸುವ ವಿಚಾರ ದೊಡ್ಡಮಟ್ಟದಲ್ಲಿ ಚರ್ಚೆಯಾಗುತ್ತಿದ್ದು, ನಾಯಕತ್ವ ಬದಲಾವಣೆ ವಿಚಾರದಲ್ಲಿ ಈಗ ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ ಕೂಡ ಪ್ರವೇಶಿಸಿದ್ದಾರೆ.
ರಾಜ್ಯದ ಲಿಂಗಾಯತ ಸಮುದಾಯದ ನಾಯಕರು, ಮಠಾಧೀಶರು ಮುಖ್ಯಮಂತ್ರಿ ಬೆಂಬಲಿಸಿ ಹೇಳಿಕೆ ನೀಡಿದ ಬೆನ್ನಲ್ಲೇ ಡಾ. ಸುಬ್ರಮಣಿಯನ್ ಸ್ವಾಮಿಕರ್ನಾಟಕದ ನಾಯಕತ್ವ ಬದಲಾವಣೆ ವಿಚಾರವಾಗಿ ಟ್ವೀಟ್‌ ಮಾಡಿದ್ದು, ಇದರಿಂದಾಗಿ ಬಿಜೆಪಿಗೆ ಹಾನಿಯಾಗುತ್ತದೆ ಎಂದು ಬಿಜೆಪಿ ಹೈಕಮಾಂಡಿಗೆ ಎಚ್ಚರಿಕೆ ಟ್ವೀಟ್ ಮಾಡಿದ್ದಾರೆ.
ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನ ಏಕೆ ಕುರ್ಚಿಯಿಂದ ಇಳಿಸಬೇಕು ಎಂದು ಪ್ರಶ್ನಿಸಿದ್ದಾರೆ. ಕರ್ನಾಟಕದಲ್ಲಿ ಬಿಜೆಪಿಯನ್ನು ಮೊದಲು ಅಧಿಕಾರಕ್ಕೆ ತಂದವರು ಯಡಿಯೂರಪ್ಪ, ಅವರು ಇತರ ನಾಯಕರಿಗೆ ಚಮಚ ಆಗದೇ ಕೆಲಸ ಮಾಡುತ್ತಿರುವುದೇ ಅವರಿಗೆ ಕಷ್ಟವಾಗುತ್ತಿದೆ. ಇದೇ ಕಾರಣಕ್ಕೆ ಅವರನ್ನು ತೆಗೆದು ಹಾಕಲು ಸಂಚು ನಡೆಯುತ್ತಿದೆ. ಅವರನ್ನು ಕಂಡರೆ ಆಗದವರೇ ಈ ಕೆಲಸ ಮಾಡಿಸುತ್ತಿದ್ದಾರೆ ಎಂದು ಟ್ವೀಟ್‌ನಲ್ಲಿ ಹೇಳಿದ್ದಾರೆ.
ಕರ್ನಾಟಕದಲ್ಲಿ ಯಡಿಯೂರಪ್ಪ ಇಲ್ಲದೇ ಬಿಜೆಪಿ ಅಧಿಕಾರಕ್ಕೆ ಬರುವುದಕ್ಕೆ ಸಾಧ್ಯವಿಲ್ಲ. ಪಕ್ಷ ಬಿಟ್ಟು ಹೋಗಿದ್ದ ಅವರು ವಾಪಸ್ ಆದ ನಂತರವೇ ರಾಜ್ಯದಲ್ಲಿ ಪಕ್ಷವನ್ನು ಗೆಲ್ಲಿಸುವುದಕ್ಕೆ ಸಾಧ್ಯವಾಯಿತು. ಅದು ತಿಳಿದಿದ್ದರೂ ಕೂಡ ಈ ಹಿಂದಿನ ತಪ್ಪನ್ನೇ ಏಕೆ ಪುನರಾವರ್ತಿಸಬೇಕು,’ ಎಂದು ಸುಬ್ರಮಣಿಯನ್ ಸ್ವಾಮಿ ಪ್ರಶ್ನೆ ಮಾಡಿದ್ದಾರೆ.

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

5 / 5. ಒಟ್ಟು ವೋಟುಗಳು 2

ನಿಮ್ಮ ಕಾಮೆಂಟ್ ಬರೆಯಿರಿ