ಕುಮಟಾ; ೧೫ ಕ್ಕೂ ಹೆಚ್ಚು ಮನೆ ಸಂಪೂರ್ಣ ಕುಸಿತ, ೬೦೦ ಜನರ ಸ್ಥಳಾಂತರ, ಎನ್.ಡಿಆರ್ ಎಫ್ ತಂಡ ಆಗಮನ

ಕುಮಟಾ: ಶಿರಸಿ -ಸಿದ್ದಾಪುರದಲ್ಲಿ ಸುರಿದ ಮಳೆ ಕರಾವಳಿಯಲ್ಲಿ ಪ್ರವಾಹದ ಭೀಕರತೆ ಸೃಷ್ಟಿಸಿದೆ.
ಹೇಚ್ಚುತ್ತಿರುವ ನದಿ ನೀರಿನ ನೀರಿನ ಮಟ್ಟದಿಂದ ಜನರನ್ನು ರಕ್ಷಿಸುವುದೇ ತಾಲೂಕಾಡಳಿಕ್ಕೆ ಹರಸಾಹಸವಾಗಿದೆ.
ಸುಮಾರು ೫೦೦ಕ್ಕೂ ಹೆಚ್ಚುಮನೆಗಳು ಜಲಾವೃತಗೊಂಡಿದೆ. ಹೊಲನಗದ್ದೆ, ಹೀಣಿ, ದಿವಗಿ, ಮಿರ್ಜಾನ, ಹೆಗಡೆ, ಐಗಳಕೂರ್ವೆ ಇತ್ಯಾದಿ ಗ್ರಾಮಗಳು ಸಂಪೂರ್ಣ ಜಲಾವೃತವಾಗಿದ್ದು ೨೮ಕ್ಕೂ ಹೆಚ್ಚು ನೆಮ್ಮದಿ ಕೇಂದ್ರವನ್ನು ತೆರೆಯಲಾಗಿದೆ. ೧೫ ಮನೆಗಳು ಕುಸಿದು ಬಿದ್ದಿದೆ. ೬ ಸಾವಿರಕ್ಕೂ ಹೆಚ್ಚು ಜನರನ್ನು ಸ್ಥಳಾಂತರಿಸಲಾಗಿದೆ. ಕೋಟ್ಯಂತರ ಹಾನಿ ಸಂಭವಿಸಿರುವ ಅಂದಾಜನ್ನು ತಾಲೂಕಾ ಆಡಳಿತ ಮಾಡಿದೆ.
ಹೆಚ್ಚಿದ ಆತಂಕ; ಪ್ರವಾಹವು ಇನ್ನೂ ಕೇವಲ ೫ ಅಡಿಯಷ್ಟು ಏರಿದರೂ ೧೦ ಸಾವಿರಕ್ಕೂ ಹೆಚ್ಚು ಜನರನ್ನು ಸ್ಥಳಾಂತರಿಸುವ ಪರಿಸ್ಥಿತಿ ಬರಬಹುದು ಎನ್ನಲಾಗಿದೆ. ಹೊಲನಗದ್ದೆಯಲ್ಲಿ ಭತ್ತ ನಾಟಿ ಮಾಡುತ್ತಿರುವಾಗಲೆ ಅಘನಾಶನಿ ನದಿಯ ಹಿನ್ನೀರು ಒಮ್ಮೆಲೇ ನುಗ್ಗುತ್ತಿರುವುದನ್ನು ಕಂಡು ರೈತರು ನಾಟಿ ಮಾಡುವುದನ್ನು ಬಿಟ್ಟು ಮೇಲಕ್ಕೆ ಓಡಿಹೊಗಿ ಪ್ರಾಣ ರಕ್ಷಿಸಿಕೊಂಡಿದ್ದಾರೆ. ಹಿರಿಯ ರೈತರು ಹೇಳುವ ಪ್ರಕಾರ ಈ ವರ್ಷದ ಪ್ರವಾಹ ಹೆಚ್ಚು ಭೀಕರತೆ ಇದೆ. ನೀರಿನ ಮಟ್ಟ ಒಮ್ಮೆಲೇ ಹೆಚ್ಚುತ್ತಿರುವುದು ಅಚ್ಚರಿ ತಂದಿದೆ ಎನ್ನುತ್ತಾರೆ ನದಿ ತಟದಲ್ಲಿರುವ ಜನರು.
ತಾಲೂಕಿನಲ್ಲಿ ನಾಟಿ ಮಾಡಲು ಕಿತ್ತಿಟ್ಟಿದ್ದ ಸಾವಿರಾರು ಭತ್ತದ ಸಸಿಗಳು ಕಟ್ಟುಗಳು ಪ್ರವಾಹದಲ್ಲಿ ತೇಲಿ ಹೋಗಿದೆ. ದೋಣಿಗಳ ಮೂಲಕ ಜಾನುವಾರುಗಳನ್ನು ರಕ್ಷಿಸಲಾಗುತ್ತಿದೆ.ಅನೇಕ ಮನೆಗಳಲ್ಲಿ ನುಗ್ಗಿರುವ ನೀರಿನ ಮಟ್ಟದಿಂದ ಅಕ್ಕಿ, ಇತರೆ ಸಾಮಾನುಗಳು ನೀರಿನಲ್ಲಿ ಮುಳುಗಿದೆ.
ಎನ್.ಡಿ.ಆರ್.ಎಫ್ ತಂಡ ಆಗಮನ: ಪ್ರವಾಹದಿಂದ ಜನರನ್ನು ರಕ್ಷಿಸಲು ಎನ್.ಡಿ.ಆರ್.ಎಫ್ ತಂಡವು ಕುಮಟಾಕ್ಕೆ ಆಗಮಿಸಿದ್ದು ಜನರ ರಕ್ಷಣೆಯಲ್ಲಿ ನಿರತವಾಗಿದೆ ಎಂದು ತಹಶೀಲ್ದಾರ ಆರ್.ವಿ.ಕಟ್ಟಿ ತಿಳಿಸಿದ್ದಾರೆ. ಕುಮಟಾ-ಶಿರಸಿ ರಸ್ತೆಯು ಚಂಡಿಕಾ ಹೊಳೆ ತುಂಬಿರುವುದರಿಂದ ಬಂದಾಗಿದೆ. ನೀರಿನ ಮಟ್ಟ ಇಳಿಕೆಯಾದರೆ ಮಧ್ಯರಾತ್ರಿ ಮುಕ್ತವಾಗುವ ಆಶಾಭಾವನೆ ಇದೆ ಎಂದು ತಹಶೀಲ್ದಾರ ತಿಳಿಸಿದ್ದಾರೆ. ಪ್ರವಾಹ ಇರುವ ಪ್ರತಿಯೋಂದು ಗ್ರಾಮ ಪಂಚಾಯತದಲ್ಲೂ ದೋಣಿ ಇತ್ಯಾದಿ ಸಜ್ಜು ಗೊಳಿಸಿದ್ದು ಜನರ ರಕ್ಷಣೆಯೇ ನಮ್ಮ ಮೊದಲ ಆದ್ಯತೆ ಎಂದು ಅವರು ಹೇಳಿದರು.

advertisement

ಕ್ಷಣ ಕ್ಷಣದ ಸುದ್ದಿಗಳು ಮತ್ತು ಮಾಹಿತಿಗಾಗಿ
ವಾಟ್ಸಾಪ್ ಗ್ರೂಪ್ ಸೇರಿ
ಫೇಸ್ ಬುಕ್ ಫಾಲೋ ಮಾಡಿ
ಗೂಗಲ್ ನ್ಯೂಸ್ ನಲ್ಲಿ ಸೇರಿ
ಟ್ವಿಟರ್ ನಲ್ಲಿ ಫಾಲೋ ಮಾಡಿ
advertisement
ಐಸಿಎಸ್ ಮಹೇಶ ಪಿಯು ಸೈನ್ಸ್ ಕಾಲೇಜು, ಧಾರವಾಡ
ಅಡ್ಮಿಶನ್ ಗಾಗಿ ಇಂದೇ ಕರೆ ಮಾಡಿ
9535127775 / 9901837775 / 6364528715 / 08362775155 / https://icsmpucollege.com/
ಓದಿರಿ :-   ಧಾರವಾಡ: ಜೆಎಸ್‌ಎಸ್‌ ಮಂಜುನಾಥೇಶ್ವರ ಐಟಿಐ ಕಾಲೇಜಿಗೆ ಕರ್ಣಾಟಕ ಬ್ಯಾಂಕಿನಿಂದ ಬೊಲೆರೊ ವಾಹನ ಹಸ್ತಾಂತರ

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

5 / 5. ಒಟ್ಟು ವೋಟುಗಳು 2

advertisement

ನಿಮ್ಮ ಕಾಮೆಂಟ್ ಬರೆಯಿರಿ