ಎರಡು ದಿನಗಳೊಳಗೆ ಕರ್ನಾಟಕಕ್ಕೆ ಹೊಸ ಸಿಎಂ ಆಯ್ಕೆ ಸಾಧ್ಯತೆ: ಉತ್ತರ ಕರ್ನಾಟಕಕ್ಕೆ ಮಣೆ ?

ಬೆಂಗಳೂರು: ಮುಖ್ಯಮಂತ್ರಿ ಯಡಿಯೂರಪ್ಪ ರಾಜೀನಾಮೆ ನೀಡುವುದಾಗಿ ತಮ್ಮ ನಿರ್ಧಾರ ಪ್ರಕಟಿಸಿದ್ದಾರೆ. ಹೀಗಾಗಿ ಈಗ ಕರ್ನಾಟಕದ ಮುಂದಿನ ಮುಖ್ಯಮಂತ್ರಿ ಯಾರಾಗಬಹುದು ಎಂಬ ಪ್ರಶ್ನೆ ಮುಂಚೂಣಿಗೆ ಬಂದಿದೆ.
ಜುಲೈ 26ರಂದು ಬಿಎಸ್ ಯಡಿಯೂರಪ್ಪ ನೇತೃತ್ವದ ಸರ್ಕಾರ 2ನೇ ವರ್ಷದ ಸಂಭ್ರಮಾಚರಣೆಯೊಂದಿಗೆ ವಿದಾಯ ಭಾಷಣದ ಮಾಡಿದ ಯಡಿಯೂರಪ್ಪ ಅವರ ಬದಲಿಗೆ ಬಿಜೆಪಿ ಹೈಕಮಾಂಡ್ ಅಚ್ಚರಿಯ ಹೆಸರನ್ನು ಪ್ರಕಟಿಸುವ ಸಾಧ್ಯತೆಯೂ ಇದೆ ಎನ್ನಲಾಗಿದೆ.ಅದರಲ್ಲಿಯೂ ಉತ್ತರ ಕರ್ನಾಟಕದವರೇ ಆಗುವ ಸಾಧ್ಯತೆ ಹೆಚ್ಚಿದೆ.

ಬಿಎಸ್ ಯಡಿಯೂರಪ್ಪ ಅವರು ಕರ್ನಾಟಕದ ಮುಖ್ಯಮಂತ್ರಿಯಾಗಿ ಎರಡು ವರ್ಷಗಳ ಅಧಿಕಾರಾವಧಿಯನ್ನು ಪೂರೈಸಿ ಇಂದು (ಜುಲೈ 26) ರಾಜೀನಾಮೆ ಪ್ರಕಟಿಸಿದರು. ಆದರೆ ಅವರ ಉತ್ತರಾಧಿಕಾರಿ ಯಾರು ಎಂದು ಇನ್ನೂ ಪ್ರಕಟವಾಗಿಲ್ಲ. ಅನೇಕ ಹೆಸರುಗಳು ಫ್ರಂಟ್-ರನ್ನರುಗಳಾಗಿ ಹೊರಹೊಮ್ಮುತ್ತಿವೆ.

ಲಿಂಗಾಯತ ಬಲಶಾಲಿಯನ್ನು ಬದಲಿಸುವುದು ಬಿಜೆಪಿಗೆ ಒಂದು ಕಾರ್ಯವಾಗಲಿದೆ ಆದರೆ ಇದರರ್ಥ ಅವರು ಈಗ ಕರ್ನಾಟಕದ ಮತ ಬ್ಯಾಂಕ್ ಅನ್ನು ಪಡೆದುಕೊಳ್ಳಲು ಇತರ ಸಮುದಾಯಗಳಲ್ಲಿ ಮೀರಿ ಮೇಲಿಂದ ಮೇಲೆ ಮಾಡಬೇಕಾಗುತ್ತದೆ. ಪ್ರಸ್ತುತ ಕೆಲವು ಮುಂಚೂಣಿಯಲ್ಲಿರುವವರು ಲಿಂಗಾಯತ, ವೊಕ್ಕಲಿಗಮತ್ತು ಬ್ರಾಹ್ಮಣ ಸಮುದಾಯಗಳಿಂದ ಬರಬಹುದು ಎಂದು ಹೇಳಲಾಗುತ್ತಿದೆ.

ಪ್ರಮುಖ ಸುದ್ದಿ :-   ಕರ್ನಾಟಕದ ಈ ಜಿಲ್ಲೆಗಳಲ್ಲಿ 3-4 ದಿನ ಬಿಸಿಗಾಳಿ : ಹವಾಮಾನ ಇಲಾಖೆ ಎಚ್ಚರಿಕೆ

ಹುಬ್ಬಳ್ಳಿ-ಧಾರವಾಡ ಪಶ್ಚಿಮ ವಿಧಾನಸಭಾ ಕ್ಷೇತ್ರದ ಶಾಸಕ ಅರವಿಂದ್ ಬೆಲ್ಲದ, ಕೇಂದ್ರ ಸಚಿವ ಪ್ರಲಾಹ ಝೋಶಿ, ಬಸನಗೌಡ ಪಾಟೀಲ ಯತ್ನಾಳ, ಬಸವರಾಜ ಬೊಮ್ಮಾಯಿ ಅವರ ಹೆಸರುಗಳು ಉತ್ತರ ಕರ್ನಾಟಕದಿಂದ ಕೇಳಿಬರುತ್ತಿದೆ. ಅದರಲ್ಲಿಯೂ ಉತ್ತರ ಕರ್ನಾಟಕದ ಲಿಮಗಾಯತ ಸಮುದಾಯಕ್ಕೆ ಸೇರಿದವರೊಬ್ಬರಿಗೆ ನೀಡಲಾಗುತ್ತದೆ ಎಂಬ ಮಾತುಗಳು ಕೇಳಿಬರುತ್ತಿವೆ.

ಉತ್ತರ ಕರ್ನಾಟಕದ ಲಿಂಗಾಯತ ಸಮುದಾಯದಲ್ಲಿ ಪಂಚಮಸಾಲಿ ಸಮಾಜಕ್ಕೆ ಸೇರಿದ ಯುವ ನಾಯಕ ಅರವಿಂದ ಬೆಲ್ಲದ ,ಯತ್ನಾಳ ಮಧ್ಯೆ ಯಾರನ್ನು ಮಾಡುತ್ತಾರೆ ಎಂಬ ಪ್ರಶ್ನೆ ಉದ್ಭವಿಸುತ್ತದೆಇವರ ಜೊತೆಗೆ

ಸಚಿವ ಮುರುಗೇಶ್‌ ನಿರಾಣಿಯವರ ಹೆಸರೂ ಕೂಡಾ ಕೇಳಿ ಬರುತ್ತಿದೆ.  ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರಿಗೆ ಮುರುಗೇಶ್‌ ನಿರಾಣಿ ಆತ್ಮೀಯರಾಗಿದ್ದಾರೆ. ಸ್ಪೀಕರ್‌ ವಿಶ್ವೇಶ್ವರ ಹೆಗಡೆ ಕಾಗೇರಿ ಅವರ ಹೆಸರೂ ಚಾಲ್ತಿಯಲ್ಲಿದೆ.

ಆದರೆ ಬಿಜೆಪಿ ಹೈಕಮಾಂಡ್‌ ಯಾರೂ ನಿರೀಕ್ಷಿಸದ ಮತ್ತೊಬ್ಬರನ್ನು ಮುಖ್ಯಮಂತ್ರಿಯಾಗಿ ಘೋಷಣೆ ಮಾಡಿದರೂ ಅಚ್ಚರಿಯಿಲ್ಲವೆನ್ನಲಾಗುತ್ತಿದೆ.ಎರಡು ದಿನಗಳೊಳಗೆ ಪ್ರಕಟಿಸುವ ಸಾಧ್ಯತೆ ಇದೆ.

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement