ಕೇಂದ್ರದ ಮಹತ್ವದ ನಿರ್ಧಾರ; ಬ್ಯಾಂಕ್‌ ನಿಷೇಧದ ಅಡಿಯಲ್ಲಿ ಇರಿಸಿದರೆ ಠೇವಣಿದಾರರಿಗೆ 5 ಲಕ್ಷ ರೂ.ವರೆಗೆ ವಿಮೆ, 90 ದಿನಗಳಲ್ಲಿ ಹಣ ವಾಪಸ್‌..!

ನವದೆಹಲಿ:ಠೇವಣಿ ವಿಮಾ ಕ್ರೆಡಿಟ್ ಗ್ಯಾರಂಟಿ ಕಾರ್ಪೊರೇಷನ್ (ಡಿಐಜಿಸಿ) ಮಸೂದೆಗೆ ತಿದ್ದುಪಡಿ ಮಾಡಲು ಕ್ಯಾಬಿನೆಟ್ ಅನುಮೋದನೆ ನೀಡಿದೆ.   ಠೇವಣಿ ವಿಮೆಯನ್ನು 1 ಲಕ್ಷದಿಂದ 5 ಲಕ್ಷ ರೂ.ಗೆ ಹೆಚ್ಚಿಸಲು ದಾರಿ ಮಾಡಿಕೊಟ್ಟಿದೆ ಎಂದು ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಬುಧವಾರ ಹೇಳಿದ್ದಾರೆ.

ಪ್ರತಿ ಬ್ಯಾಂಕಿನಲ್ಲಿ ಪ್ರತಿ ಠೇವಣಿದಾರರ ಬ್ಯಾಂಕ್ ಠೇವಣಿ 5 ಲಕ್ಷ ರೂ.ವರೆಗೆ ವಿಮೆ ಮಾಡಲಾಗುವುದು ಎಂದು  ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
ಠೇವಣಿ ವಿಮೆ ಮತ್ತು ಕ್ರೆಡಿಟ್ ಗ್ಯಾರಂಟಿ ಕಾರ್ಪೊರೇಷನ್ ಮಸೂದೆ 2021 (ಡಿಐಜಿಸಿ ಮಸೂದೆ 2021) ಅನ್ನು ಕೇಂದ್ರ ಸಚಿವ ಸಂಪುಟ ಅನುಮೋದನೆ ನಂತರ ಈ ಘೋಷಣೆ ಮಾಡಲಾಗಿದೆ. ಬ್ಯಾಂಕನ್ನು ತಾತ್ಕಾಲಿಕ  ನಿಷೇಧದ ( Moratorium) ಅಡಿಯಲ್ಲಿ  ಇರಿಸಿದರೆ 90 ದಿನಗಳಲ್ಲಿ ಠೇವಣಿದಾರರು ತಮ್ಮ 5 ಲಕ್ಷ ರೂಪಾಯಿ ಹಣವನ್ನು ಪಡೆಯುತ್ತಾರೆ ಎಂದು ಸಂಪುಟ ನಿರ್ಧರಿಸಿದೆ. ಈ ತಿದ್ದುಪಡಿಯ ಬಳಿಕ ಬ್ಯಾಂಕ್​ನಲ್ಲಿ ಹಣ ಕೂಡಿಟ್ಟವರಿಗೆ ಈ ಹಿಂದೆ ಸಿಗುತ್ತಿದ್ದ 1 ಲಕ್ಷ ವಿಮೆಯನ್ನ ಇದೀಗ 5 ಲಕ್ಷ ರೂಪಾಯಿಗೆ ಏರಿಕೆ ಮಾಡಲಾಗುತ್ತದೆ.
ಅಂದರೆ ಯಾವುದೇ ಬ್ಯಾಂಕುಗಳು ಮೊರಟೋರಿಯಂ ಅವಧಿಯಲ್ಲಿ ಇದ್ದಾಗ ಅವರಿಗೆ ಗ್ರಾಹಕರ ವ್ಯವಹಾರವನ್ನು ನಿರ್ವಹಣೆ ಮಾಡಲು ಆಗದೇ ಹೋದ ಸಮಯದಲ್ಲಿ ಇಲ್ಲಿ ಠೇವಣಿಯನ್ನು ಇಟ್ಟ ಗ್ರಾಹಕರು ಕ್ರೆಡಿಟ್​ ಗ್ಯಾರಂಟಿ ಕಾರ್ಪೋರೇಷನ್​ ಆಕ್ಟ್ – 1961 ತಿದ್ದುಪಡಿಯ ಮೂಲಕ 5 ಲಕ್ಷ ರೂಪಾಯಿ ವರೆಗೆ ವಿಮಾ ಮೊತ್ತವನ್ನು ಪಡೆಯಲಿದ್ದಾರೆ ಎಂದು ಅವರು ಹೇಳಿದ್ದಾರೆ.
ಡಿಐಸಿಜಿಸಿ ಮಸೂದೆ 2021 ರ ಪ್ರಕಾರ, ಎಲ್ಲಾ ಠೇವಣಿಗಳ 98.3%ರಷ್ಟು ಈ ವ್ಯಾಪ್ತಿಗೆ ಬರಲಿದೆ ಮತ್ತು ಠೇವಣಿ ಮೌಲ್ಯದ ಪ್ರಕಾರ 50.9% ಠೇವಣಿ ಮೌಲ್ಯವನ್ನು ಒಳಗೊಂಡಿರುತ್ತದೆ ಎಂದು ಕೇಂದ್ರ ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ಜಾಗತಿಕ ಠೇವಣಿ ಮೌಲ್ಯವು ಎಲ್ಲಾ ಠೇವಣಿ ಖಾತೆಗಳಲ್ಲಿ ಕೇವಲ 80% ಆಗಿದೆ. ಇದು ಠೇವಣಿ ಮೌಲ್ಯದ 20-30% ಮಾತ್ರ ಒಳಗೊಂಡಿದೆ ಎಂದು ಅವರು ಹೇಳಿದರು.

ಪ್ರಮುಖ ಸುದ್ದಿ :-   'ಇದು ಸಾಮಾನ್ಯ ಚುನಾವಣೆಯಲ್ಲ' : ಲೋಕಸಭೆ ಚುನಾವಣೆ ಮೊದಲ ಹಂತದ ಮತದಾನಕ್ಕೂ ಮುನ್ನ ಬಿಜೆಪಿ-ಎನ್‌ಡಿಎ ಅಭ್ಯರ್ಥಿಗಳಿಗೆ ಪತ್ರ ಬರೆದ ಪ್ರಧಾನಿ ಮೋದಿ

ಆರ್‌ಬಿಐ ಬ್ಯಾಂಕುಗಳ ಮೇಲೆ ನಿಷೇಧವನ್ನು ಹೇರಿದ ನಂತರ ಜನರು ತೊಂದರೆಗಳನ್ನು ಎದುರಿಸಬೇಕಾಗುತ್ತದೆ ಎಂದು ಠೇವಣಿ ವಿಮಾ ಕ್ರೆಡಿಟ್ ಗ್ಯಾರಂಟಿ ಕಾರ್ಪೊರೇಶನ್ ಅನ್ನು ರಚಿಸಲಾಗಿದೆ. ಇಂದಿನ ಕ್ಯಾಬಿನೆಟ್ ಸಭೆ 90 ದಿನಗಳಲ್ಲಿ ಠೇವಣಿದಾರರು ತಮ್ಮ 5 ಲಕ್ಷ ರೂ. ಹಣವನ್ನು ಪಡೆಯುತ್ತಾರೆ ಎಂದು ನಿರ್ಧರಿಸಿದೆ ”ಎಂದು ಕೇಂದ್ರ ಸಚಿವ ಅನುರಾಗ್ ಠಾಕೂರ್ ಹೇಳಿದ್ದಾರೆ
ಏತನ್ಮಧ್ಯೆ, ಅಂತಾರಾಷ್ಟ್ರೀಯ ಹಣಕಾಸು ಸೇವಾ ಕೇಂದ್ರಗಳು ಮತ್ತು ಬಹುಪಕ್ಷೀಯ ಏಜೆನ್ಸಿಗಳು, ಭದ್ರತಾ ಆಯೋಗಗಳ ಅಂತಾರಾಷ್ಟ್ರೀಯ ಸಂಸ್ಥೆ ಮತ್ತು ವಿಮಾ ಮೇಲ್ವಿಚಾರಕರ ಅಂತರರಾಷ್ಟ್ರೀಯ ಸಂಘಗಳ ನಡುವೆ ಬಹುಪಕ್ಷೀಯ ಒಪ್ಪಂದಕ್ಕೆ ಸಹಿ ಹಾಕಲಾಗಿದೆ.

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement