ಪುಲ್ವಾಮಾ ದಾಳಿ ಸಂಚುಕೋರ, ಮೋಸ್ಟ್‌ ವಾಂಟೆಡ್‌ ಜೈಶ್ ಭಯೋತ್ಪಾದಕ ಅಬು ಸೈಫುಲ್ಲಾ ಎನ್ಕೌಂಟರ್ ನಲ್ಲಿ ಹತ: ಅಧಿಕಾರಿಗಳು

ಶ್ರೀನಗರ : 2019ರ ಪುಲ್ವಾಮ ಭಯೋತ್ಪಾದಕ ದಾಳಿಯ ಸಂಚುಕೋರ ಜೈಶ್​-ಎ-ಮೊಹಮ್ಮದ್ ಉಗ್ರ ಸಂಘಟನೆ ಸದಸ್ಯ ಸೈಫುಲ್ಲಾನನ್ನು ಇಂದು ಕಾಶ್ಮೀರದ ಭದ್ರತಾ ಸಿಬ್ಬಂದಿ ಕೊಂದು ಹಾಕಿದ್ದಾರೆ.
ಅಬು ಅಬು ಸೈಫುಲ್ಲಾ, ಅಥವಾ ಲಂಬೂ ಅಥವಾ ಮೊಹಮ್ಮದ್ ಇಸ್ಮಾಯಿಲ್ ಅಲ್ವಿ ಇಂದು (ಶನಿವಾರ) ಬೆಳಿಗ್ಗೆ ಪುಲ್ವಾಮದ ದಾಚಿಗಮ್​ ಅರಣ್ಯ ಪ್ರದೇಶದಲ್ಲಿ ನಡೆದ ಎನ್​ಕೌಂಟರ್​ನಲ್ಲಿ ಮತ್ತೊಬ್ಬ ಜೈಶ್​ ಉಗ್ರವಾದಿಯೂ ಮೃತಪಟ್ಟಿದ್ದಾರೆ.

ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ನಿವಾಸಿ, ಸೈಫುಲ್ಲಾ, ಜೈಶ್ ಸಂಸ್ಥಾಪಕ ಮಸೂದ್ ಅಜರ್ ಅವರ ಸಂಬಂಧಿಯಾಗಿದ್ದರು. ಆತ ದಕ್ಷಿಣ ಕಾಶ್ಮೀರದ ಜೈಶ್‌ನ ಕಾರ್ಯಾಚರಣಾ ಕಮಾಂಡರ್ (ರೌಫ್ ಅಸ್ಗರ್ ಜೊತೆಯಲ್ಲಿ) ಎಂದು ನಂಬಲಾಗಿತ್ತು,
ಪುಲ್ವಾಮ ದಾಳಿಯ ಸಂಚು ರೂಪಿಸುವುದು ಮತ್ತು ಆಯೋಜಿಸುವುದರಲ್ಲಿ ಪ್ರಮುಖ ಪಾತ್ರ ವಹಿಸಿದ್ದ. ಈತನ ಹೆಸರು ನಾಷನಲ್ ಇನ್ವೆಸ್ಟಿಗೇಷನ್ ಏಜೆನ್ಸಿ(ಎನ್​ಐಎ) ಸಲ್ಲಿಸಿರುವ ಚಾರ್ಜ್​ಶೀಟ್​ನಲ್ಲಿದೆ ಎಂದು ಕಾಶ್ಮೀರ ಪೊಲೀಸರು ತಿಳಿಸಿದ್ದಾರೆ.
ಇಂದು ಬೆಳಿಗ್ಗೆ ಉಗ್ರವಾದಿಗಳು ಬಚ್ಚಿಟ್ಟುಕೊಂಡಿರುವ ಸುಳಿವು ಸಿಕ್ಕ ಭದ್ರತಾ ಪಡೆ ಮತ್ತು ಕಾಶ್ಮೀರ ಪೊಲೀಸರು ಪತ್ತೆ ಕಾರ್ಯಾಚರಣೆ ಆರಂಭಿಸಿದಾಗ ಇಬ್ಬರು ಉಗ್ರವಾದಿಗಳು ಭದ್ರತಾ ಪಡೆಗಳತ್ತ ಗುಂಡು ಹಾರಿಸಲು ಆರಂಭಿಸಿದರು. ನಂತರ ಎನ್​ಕೌಂಟರ್​ನಲ್ಲಿ ಭದ್ರತಾ ಪಡೆಗಳು ಅವರನ್ನು ಗುಂಡಿಡು ಸಾಯಿಸಿವೆ. ಮತ್ತೊಬ್ಬನ ಗುರುತು ಇನ್ನೂ ಪತ್ತೆ ಹಚ್ಚಬೇಕಿದೆ.
ದಶಕಗಳಲ್ಲೇ ಅತ್ಯಂತ ಬರ್ಬರವಾದ ದಾಳಿಯಾಗಿದ್ದ ಪುಲ್ವಾಮ ಭಯೋತ್ಪಾದಕ ದಾಳಿಯಲ್ಲಿ, 40 ಸಿಆರ್‌ಪಿಎಫ್‌ ಸಿಬ್ಬಂದಿ ಮೃತಪಟ್ಟಿದ್ದರು. ಜೈಶ್​ ಸಂಘಟನೆಯ ಸೂಯಿಸೈಡ್​ ಬಾಂಬರ್ 2019 ಫೆಬ್ರವರಿ 14 ರಂದು​ ಈ ದಾಳಿ ನಡೆಸಿದ್ದ.
ಜೈಶ್​ ಮುಖ್ಯಸ್ಥ ಮಸೂದ್​ ಅಜರ್​ನ ಕುಟುಂಬಕ್ಕೆ ಸೇರಿದವನೆನ್ನಲಾದ ಮೃತ ಮೊಹಮ್ಮದ್​ ಇಸ್ಮಲ್ ಅಲ್ವಿ, ಪುಲ್ವಾಮ ದಾಳಿಯ ಸಂಚು ರಚಿಸುವಲ್ಲಿ ಮತ್ತು ಆಯೋಜಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ. ಪಾಕಿಸ್ತಾನಿ ನಾಗರಿಕನಾಗಿದ್ದ ಈತನ ಹೆಸರು ನಾಷನಲ್ ಇನ್ವೆಸ್ಟಿಗೇಷನ್ ಏಜೆನ್ಸಿ(ಎನ್​ಐಎ) ಸಲ್ಲಿಸಿರುವ ಚಾರ್ಜ್​ಶೀಟ್​ನಲ್ಲಿದೆ ಎಂದು ಕಾಶ್ಮೀರ ಪೊಲೀಸರು ತಿಳಿಸಿದ್ದಾರೆ.
ಇಂದು ಬೆಳಿಗ್ಗೆ ಉಗ್ರವಾದಿಗಳು ಬಚ್ಚಿಟ್ಟುಕೊಂಡಿರುವ ಸುಳಿವು ಸಿಕ್ಕ ಭದ್ರತಾ ಪಡೆ ಮತ್ತು ಕಾಶ್ಮೀರ ಪೊಲೀಸರು ಪತ್ತೆ ಕಾರ್ಯಾಚರಣೆ ಆರಂಭಿಸಿದರು. ಆಗ ಇಬ್ಬರು ಉಗ್ರವಾದಿಗಳು ಗುಂಡು ಹಾರಿಸಲು ಆರಂಭಿಸಿದಾಗ, ಎನ್​ಕೌಂಟರ್​ನಲ್ಲಿ ಸಾವಪ್ಪಿದರು. ಮೃತಪಟ್ಟವರಲ್ಲಿ ಒಬ್ಬ ಇಸ್ಮಲ್​ ಅಲ್ವಿಯಾಗಿ ಗುರುತಿಸಲ್ಪಟ್ಟಿದ್ದರೆ, ಮತ್ತೊಬ್ಬನ ಗುರುತು ಇನ್ನೂ ಪತ್ತೆ ಹಚ್ಚಲಾಗುತ್ತಿದೆ ಎನ್ನಲಾಗಿದೆ.
ದಶಕಗಳಲ್ಲೇ ಅತ್ಯಂತ ಬರ್ಬರವಾದ ದಾಳಿಯಾಗಿದ್ದ ಪುಲ್ವಾಮ ಭಯೋತ್ಪಾದಕ ದಾಳಿಯಲ್ಲಿ, 40 ಸೈನಿಕರು ಮೃತಪಟ್ಟಿದ್ದರು. ಜೈಶ್​ ಸಂಘಟನೆಯ ಸೂಯಿಸೈಡ್​ ಬಾಂಬರ್​​​ಗಳು 2019 ಫೆಬ್ರವರಿ 14 ರಂದು​ ಈ ದಾಳಿ ನಡೆಸಿದ್ದರು.

ಪ್ರಮುಖ ಸುದ್ದಿ :-   ಇವರು ಭಾರತದ ಅತ್ಯಂತ ಶ್ರೀಮಂತ ಅಭ್ಯರ್ಥಿ : ತೆಲುಗು ದೇಶಂ ಪಕ್ಷದ ಇವರ ಆಸ್ತಿ 5,785 ಕೋಟಿ ರೂಪಾಯಿ...!

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement