
ಬೆಂಗಳೂರು: ಕರ್ನಾಟಕದ ನೂತನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಂಪುಟ ಸೇರುವವರ ಪಟ್ಟಿ ಅಂತಿಮಗೊಂಡಿದೆ. ಮುಖ್ಯಮಂತ್ರಿ ಬೊಮ್ಮಾಯಿ ದೆಹಲಿಯಲ್ಲಿ ಹೈ ಕಮಾಂಡ್ ಭೇಟಿ ಮಾಡಿ ಸಚಿವರ ಪಟ್ಟಿ ಫೈನಲ್ ಆದ ಬಳಿಕ ನಿನ್ನೆ ರಾತ್ರಿ ಬೆಂಗಳೂರಿಗೆ ವಾಪಸ್ಸಾಗಿದ್ದರು. ಮುಖ್ಯಮಂತ್ರಿ ಬೊಮ್ಮಾಯಿ ಈವರೆಗೆ 26 ಶಾಸಕರಿಗೆ ಕರೆ ಮಾಡಿ ಸಚಿವ ಸ್ಥಾನ ನೀಡಿರುವ ವಿಷಯವನ್ನು ಖಚಿತಪಡಿಸಿದ್ದಾರೆ. ಇಂದು ಮಧ್ಯಾಹ್ನ 2.15ಕ್ಕೆ ರಾಜಭವನದಲ್ಲಿ ನೂತನ ಸಚಿವರ ಪದಗ್ರಹಣ ನಡೆಯಲಿದೆ.
ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್ ಶಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಡ್ಡಾ ಮಾರ್ಗದಲ್ಲಿ ಈಗಾಗಲೇ ಹೇಳಿದಂತೆ ಜನಪರ ಆಡಳಿತ ಕೊಡುವ ಹಿನ್ನಲೆಯಲ್ಲಿ ಸಂಪುಟ ರಚನೆ ಮಾಡಲಾಗುತ್ತಿದೆ. ಅಲ್ಲದೇ ಮುಂದಿನ ಚುನಾವಣೆ ಹಿನ್ನಲೆಯಲ್ಲಿ ಈ ಸಂಪುಟ ರಚನೆಯಾಗಿದೆ. ಇದು ಬರುವಂತ ದಿನಗಳಲ್ಲಿ ರಾಜ್ಯದಲ್ಲಿ ಜನರ ಸಮಸ್ಯೆಗೆ ಸ್ಪಂದಿಸಿ, ವಿಶ್ವಾಸ ಗಳಿಸಿ, ನೂತನವಾದಂತ ಒಳ್ಳೆಯ ಆಡಳಿತ ಕೊಡುವುದಕ್ಕೆ ತೀರ್ಮಾನ ಮಾಡಲಾಗಿದೆ. ಇವತ್ತು ಪ್ರಮಾಣವಚನವನ್ನು 2.15ಕ್ಕೆ ನೂತನ ಸಚಿವರು ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಅಧಿಕೃತವಾಗಿ ನೂತನ ಸಚಿವರ ಪಟ್ಟಿ ರಾಜಭವನದ ಕಚೇರಿಯಿಂದ ಕೆಲವೇ ಕ್ಷಣಗಳಲ್ಲಿ ಪ್ರಕಟಗೊಳ್ಳಲಿದೆ ಎಂದು ಮಾಹಿತಿ ನೀಡಿದರು.
8 ಲಿಂಗಾಯತ ಸಮುದಾಯದವರಿಗೆ, 7 ಒಬಿಸಿ ಸಮುದಾಯದವರಿಗೆ, 7 ಒಕ್ಕಲಿಗ ಸಮುದಾಯದವರಿಗೆ, 3 ಎಸ್ಸಿ, 1 ಎಸ್ಟಿ ಹಾಗೂ ಒಬ್ಬ ಮಹಿಳೆಯರು ಇಂದಿನ ಸಚಿವ ಸಂಪುಟದಲ್ಲಿ ನೂತನ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂಬುದಾಗಿ ಪ್ರಕಟಿಸಿದರು.
ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ವಿಜಯೇಂದ್ರ ಅವರಿಗೆ ಸಂಪುಟದಲ್ಲಿ ವಿಜಯೇಂದ್ರ ಅವರಿಗೆ ಸಂಪುಟದಲ್ಲಿ ಸ್ಥಾನ ನೀಡುವ ಕುರಿತಂತೆ ಬಿಜೆಪಿ ರಾಷ್ಟ್ರೀಯ ನಾಯಕರು ನೇರವಾಗಿಯೇ ಮಾತನಾಡಿ ಹೇಳಿದ್ದಾರೆ. ಆ ಕುರಿತು ನಾನು ಏನೂ ಹೇಳೋದಿಲ್ಲ. ಪಟ್ಟಿ ಬಿಡುಗಡೆಯಾದ ನಂತರ ಸಂಪುಟದಲ್ಲಿ ಯಾರೆಲ್ಲಾ ಇರಲಿದ್ದಾರೆ ಎಂಬುದಾಗಿ ತಿಳಿಯಲಿದೆ. ನಾನು ಇಷ್ಟು ಹೇಳಬಲ್ಲೇ.. ಈಗ ಏನ್ ರಾಜ್ಯಪಾಲರಿಗೆ ಪಟ್ಟಿ ಕಳುಹಿಸಲಾಗಿದೆಯೋ, ಅದರಲ್ಲಿ ವಿಜಯೇಂದ್ರ ಅವರ ಹೆಸರು ಇಲ್ಲ ಎಂದು ತಿಳಿಸಿದರು.

ಮುಖ್ಯಮಂತ್ರಿ ನೇರವಾಗಿ ಕರೆ ಮಾಡಿ ಪ್ರಮಾಣ ವಚನಕ್ಕೆ ಆಹ್ವಾನ ನೀಡಿರುವ ಶಾಸಕರ ಪಟ್ಟಿ
*ಕೆ.ಎಸ್.ಈಶ್ವರಪ್ಪ -ಶಿವಮೊಗ್ಗ
*ಆರ್.ಅಶೋಕ್- ಪದ್ಮನಾಭ ನಗರ
*.ಡಾ.ಸಿ.ಎನ್.ಅಶ್ವತ್ಥ ನಾರಾಯಣ – ಮಲ್ಲೇಶ್ವರ
*.ಬಿ.ಶ್ರೀ ರಾಮುಲು- ಮೊಳಕಾಲುಮ್ಮೂರು6.
*ಉಮೇಶ್ ಕತ್ತಿ- ಹುಕ್ಕೇರಿ
*.ಎಸ್.ಟಿ.ಸೋಮಶೇಖರ್- ಯಶವಂತಪುರ
*.ಡಾ.ಕೆ.ಸುಧಾಕರ್ – ಚಿಕ್ಕಬಳ್ಳಾಪುರ
*ಬೈರತಿ ಬಸವರಾಜ – ಕೆ ಆರ್ ಪುರಂ
*ಮುರುಗೇಶ್ ನಿರಾಣಿ – ಬಿಳಿಗಿ
*ಶಿವರಾಂ ಹೆಬ್ಬಾರ್- ಯಲ್ಲಾಪುರ
*ಶಶಿಕಲಾ ಜೊಲ್ಲೆ- ನಿಪ್ಪಾಣಿ
*ಕೆ.ಸಿ. ನಾರಾಯಣ್ ಗೌಡ – ಕೆಆರ್ ಪೇಟೆ
*ಸುನೀಲ್ ಕುಮಾರ್ – ಕಾರ್ಕಳ
*.ಅರಗ ಜ್ಞಾನೇಂದ್ರ – ತೀರ್ಥ ಹಳ್ಳಿ
*.ಗೋವಿಂದ ಕಾರಜೋಳ-ಮುಧೋಳ
*.ಮುನಿರತ್ನ- ಆರ್ ಆರ್ ನಗರ
*ಎಂ.ಟಿ.ಬಿ ನಾಗರಾಜ್ – ಎಂ ಎಲ್ ಸಿ
*.ಗೋಪಾಲಯ್ಯ- ಮಹಾಲಕ್ಷ್ಮಿ ಲೇಔಟ್
*.ಹಾಲಪ್ಪ ಆಚಾರ್ – ಯಲಬುರ್ಗಾ
*.ಶಂಕರ್ ಪಾಟೀಲ್ ಮುನೇನಕೊಪ್ಪ – ನವಲುಗುಂದ
*ಕೋಟಾ ಶ್ರೀನಿವಾಸ ಪೂಜಾರಿ – ಎಂ ಎಲ್ ಸಿ
*.ಪ್ರಭು ಚೌವ್ಹಾಣ್ – ಔರಾದ್
*.ವಿ ಸೋಮಣ್ಣ – ಗೋವಿಂದ್ ರಾಜನಗರ
* ಎಸ್ ಅಂಗಾರ-ಸುಳ್ಯ
* ಆನಂದ್ ಸಿಂಗ್ – ಹೊಸಪೇಟೆ
*.ಸಿ ಸಿ ಪಾಟೀಲ್ – ನರಗುಂದ
*.ಬಿ.ಸಿ. ನಾಗೇಶ್ – ತಿಪಟೂರು
*ಮಾಧುಸ್ವಾಮಿ- ಚಿಕ್ಕನಾಯಕನಹಳ್ಳಿ
ಸಚಿವ ಸ್ಥಾನ ಕೈ ತಪ್ಪಿದವರು ಇವರು: ಆರ್ ಶಂಕರ್, ಸಿಪಿ ಯೋಗೇಶ್ವರ್ , ಅರವಿಂದ್ ಲಿಂಬಾವಳಿ, ಶ್ರೀಮಂತ ಪಾಟೀಲ್, ಸುರೇಶ್ ಕುಮಾರ್, ಜಗದೀಶ್ ಶೆಟ್ಟರ್, ಲಕ್ಷಣ ಸವದಿ.
ಈ ಬಾರಿ ಸಂಪುಟದಲ್ಲಿ ಉಪಮುಖ್ಯಮಂತ್ರಿ ಸ್ಥಾನವನ್ನು ಕೈಬಿಡಲಾಗಿದೆ. ಇದಕ್ಕೆ ಕತ್ತರಿ ಹಾಕಿರುವ ಬಿಜೆಪಿ ಹೈಕಮಾಂಡ್, ಅನಗತ್ಯ ಕಿರಿಕಿರಿಯಿಂದ ತಪ್ಪಿಸಿಕೊಳ್ಳುವ ಪ್ಲಾನ್ ಮಾಡಿದೆ.


ನಿಮ್ಮ ಕಾಮೆಂಟ್ ಬರೆಯಿರಿ