
ನವದೆಹಲಿ:ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಿಂದ ಬುಧವಾರ ( ಆಗಸ್ಟ್ 4 ) ತ್ರೈಮಾಸಿಕ ಫಲಿತಾಂಶ ಪ್ರಕಟಿಸಲಾಗಿದೆ.
ಕಳೆದ ವರ್ಷದ ಏಪ್ರಿಲ್ನಿಂದ ಜೂನ್ ತ್ರೈಮಾಸಿಕಕ್ಕೆ ಹೋಲಿಸಿದರೆ ಈ ವರ್ಷ ಲಾಭಾಂಶ ಶೇ 55.25ರಷ್ಟು ಹೆಚ್ಚಳವಾಗಿ, 6504 ಕೋಟಿ ರೂಪಾಯಿ ನಿವ್ವಳ ಲಾಭವಾಗಿದೆ.
ಹೋದ ವರ್ಷ ಇದೇ ಅವಧಿಯಲ್ಲಿ 4,189.34 ಕೋಟಿ ರೂಪಾಯಿ ಲಾಭವಾಗಿತ್ತು. ನಿರೀಕ್ಷೆಗಿಂತ ಹೆಚ್ಚಿನ ಪ್ರಮಾಣದಲ್ಲಿ ಎಸ್ಬಿಐ ಲಾಭ ಗಳಿಸಿದೆ. ಸಿಎನ್ಬಿಸಿ- ಟಿವಿ18 ಅಭಿಮತದಲ್ಲಿ ವಿಶ್ಲೇಷಕರು ಮೊದಲನೇ ತ್ರೈಮಾಸಿಕದಲ್ಲಿ 6,374.5 ಕೋಟಿ ರೂಪಾಯಿ ಲಾಭದ ಅಂದಾಜು ಮಾಡಿದ್ದರು. ಆದರೆ ಬ್ಯಾಂಕ್ ಅದನ್ನು ಮೀರಿ ಲಾಭ ಬಂದಿದೆ.
ದೇಶದ ಅತಿ ದೊಡ್ಡ ಸಾರ್ವಜನಿಕ ಸ್ವಾಮ್ಯದ ಬ್ಯಾಂಕ್ ಆದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಆಪರೇಟಿಂಗ್ ಲಾಭ ಶೇ 5.06ರಷ್ಟು ಹೆಚ್ಚಳವಾಗಿದ್ದು, ಅದು 18,975 ಕೋಟಿ ಮುಟ್ಟಿದೆ. ವರ್ಷದ ಹಿಂದೆ ಇದೇ ಅವಧಿಯಲ್ಲಿ 18,061 ಕೋಟಿ ರೂಪಾಯಿ ಲಾಭವಾಗಿತ್ತು.
ನಿ ಠೇವಣಿದಾರರಿಗೆ ಪಾವತಿಸಿದ ಬಡ್ಡಿ ವರ್ಷದಿಂದ ವರ್ಷಕ್ಕೆ ಶೇ 3.74ರಷ್ಟು ಏರಿಕೆ ಆಗಿದೆ. ನಿವ್ವಳ ಬಡ್ಡಿ ಮಾರ್ಜಿನ್ ಈ ತ್ರೈಮಾಸಿಕಕ್ಕೆ ಶೇ 3.15ರಷ್ಟಿದೆ. ದೇಶೀಯ ನಿವ್ವಳ ಬಡ್ಡಿ ಮಾರ್ಜಿನ್ ಮೊದಲ ತ್ರೈಮಾಸಿಕಕ್ಕೆ ಶೇ 3.15 ಇದ್ದು, ವರ್ಷದಿಂದ ವರ್ಷಕ್ಕೆ 9 ಬಿಪಿಎಸ್ ಕಡಿಮೆ ಆಗಿದೆ. ಠೇವಣಿಯು ವರ್ಷದಿಂದ ವರ್ಷಕ್ಕೆ ಶೇ 8.82ರಷ್ಟು ಏರಿಕೆ ಆಗಿದೆ. ಕರೆಂಟ್ ಅಕೌಂಟ್ ಡೆಪಾಸಿಟ್ ಶೇ 11.75ರಷ್ಟು ಬೆಳವಣಿಗೆಯಾಗಿದೆ. ಉಳಿತಾಯ ವರ್ಷದಿಂದ ವರ್ಷಕ್ಕೆ ನೋಡಿದರೆ ಶೇ 10.55ರಷ್ಟು ಬೆಳವಣಿಗೆ ಕಂಡಿದೆ.
ದೇಶೀಯ ಸಾಲದ ಬೆಳವಣಿಗೆ ವರ್ಷದಿಂದ ವರ್ಷಕ್ಕೆ ಶೇ 5.64 ಇತ್ತು. ನಿವ್ವಳ ನಾನ್-ಪರ್ಫಾರ್ಮಿಂಗ್ ಅಸೆಟ್ಸ್ ರೇಷಿಯೋ ವರ್ಷದಿಂದ ವರ್ಷಕ್ಕೆ 9 ಬಿಪಿಎಸ್ ಇಳಿದು, ಶೇ 1.77ಕ್ಕೆ ಇಳಿದಿದೆ. ಗ್ರಾಸ್ ಎನ್ಪಿಎ ರೇಷಿಯೋ ವರ್ಷದಿಂದ ವರ್ಷಕ್ಕೆ 12 ಬಿಪಿಎಸ್ ಇಳಿದು, ಶೇ 5.32 ಮುಟ್ಟಿದೆ. ಈ ತ್ರೈಮಾಸಿಕದಲ್ಲಿ ಎನ್ಪಿಎ ಪ್ರಾವಿಷನ್ 5029.8 ಕೋಟಿ ರೂಪಾಯಿ ಇದ್ದು, ಕಳೆದ ಬಾರಿ 9914.2 ಕೋಟಿ ರೂ. ಇತ್ತು ಹಾಗೂ ವರ್ಷದಿಂದ ವರ್ಷಕ್ಕೆ ನೋಡಿದಾಗ 9420 ಕೋಟಿ ರೂ. ಇತ್ತು. ಅ



ನಿಮ್ಮ ಕಾಮೆಂಟ್ ಬರೆಯಿರಿ