ಹಿಂದೂ ದೇವಾಲಯ ದಾಳಿ ಪ್ರಕರಣ: ಮಂದಿರ ಪುನರ್‌ಸ್ಥಾಪಿಸುವ ಭರವಸೆ ನೀಡಿದ ಪಾಕಿಸ್ತಾನ ಪ್ರಧಾ‌ನಿ

ಇಸ್ಲಮಾಬಾದ್:ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಗುರುವಾರ ಪಂಜಾಬ್ ಪ್ರಾಂತ್ಯದಲ್ಲಿ ಹಿಂದೂ ದೇವಾಲಯವನ್ನು ಧ್ವಂಸ ಮಾಡಿದ್ದನ್ನು ಖಂಡಿಸಿದ್ದಾರೆ ಮತ್ತು ಮಂದಿರವನ್ನು ಪುನುರ್‌ ನಿರ್ಮಾಣದ ಭರವಸೆ ನೀಡಿದ್ದಾರೆ
ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಟ್ವೀಟರಿನಲ್ಲಿ, ‘ನಿನ್ನೆ ಭುಂಗ್, RYK ಯ ಗಣೇಶ್ ಮಂದಿರದ ಮೇಲೆ ನಡೆದ ದಾಳಿಯನ್ನು ಬಲವಾಗಿ ಖಂಡಿಸುತ್ತೇನೆ. ಎಲ್ಲ ಅಪರಾಧಿಗಳನ್ನು ಬಂಧಿಸುವಂತೆ ಮತ್ತು ಯಾವುದೇ ಪೊಲೀಸ್ ನಿರ್ಲಕ್ಷ್ಯದ ವಿರುದ್ಧ ಕ್ರಮ ಕೈಗೊಳ್ಳುವಂತೆ ನಾನು ಈಗಾಗಲೇ ಪಂಜಾಬ್‌ನ ಐಜಿಗೆ ಸೂಚಿಸಿದ್ದೇನೆ. ಸರ್ಕಾರವು ಮಂದಿರವನ್ನು ಪುನಃ ಸ್ಥಾಪಿಸುತ್ತದೆ. ಎಂದು ಟ್ವೀಟ್ ಮಾಡಿದ್ದಾರೆ.
ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ದೂರದ ಪಟ್ಟಣದಲ್ಲಿರುವ ಹಿಂದೂ ದೇವಾಲಯದ ಮೇಲೆ ಗುಂಪೊಂದು ದಾಳಿ ಮಾಡಿ, ವಿಗ್ರಹಗಳನ್ನು ಹಾನಿಗೊಳಿಸಿತು ಮತ್ತು ದೇವಾಲಯದಕೆಲವು ಭಾಗಗಳನ್ನು ಸುಟ್ಟುಹಾಕಿತು. ಲಾಹೋರ್‌ನಿಂದ 590 ಕಿಮೀ ದೂರದಲ್ಲಿರುವ ರಹೀಮ್ ಯಾರ್ ಖಾನ್ ಜಿಲ್ಲೆಯ ಭೋಂಗ್ ನಗರದ ಹಿಂದೂ ದೇವಾಲಯದ ಮೇಲೆ ಬುಧವಾರ ಈ ಗುಂಪು ದಾಳಿ ನಡೆಸಿದ್ದು, ಅಪ್ರಾಪ್ತ ಹಿಂದೂ ಹುಡುಗ ಮುಸ್ಲಿಂ ಸೆಮಿನರಿಯನ್ನು ಅಪವಿತ್ರಗೊಳಿಸಿದ ಎಂಬ ಆರೋಪದ ಮೇಲೆ ಈ ಘಟನೆ ನಡೆದಿದೆ ಎಂದು ಪೊಲೀಸರು ಹೇಳಿದ್ದಾರೆ.
ಎಂಟು ವರ್ಷದ ಹಿಂದೂ ಹುಡುಗ ಕಳೆದ ವಾರ ಸೆಮಿನರಿಯ ಗ್ರಂಥಾಲಯದಲ್ಲಿ ಮೂತ್ರ ವಿಸರ್ಜನೆ ಮಾಡಿದನೆಂದು ಆರೋಪಿಸಲಾಗಿದೆ. ಇದು ಭೋಂಗ್‌ನಲ್ಲಿ ಉದ್ವಿಗ್ನತೆಯನ್ನು ಉಂಟುಮಾಡಿತು, ಅಲ್ಲಿ ಮುಸ್ಲಿಮರು ಮತ್ತು ಹಿಂದೂಗಳು ದಶಕಗಳಿಂದ ಶಾಂತಿಯುತವಾಗಿ ವಾಸಿಸುತ್ತಿದ್ದಾರೆ. ಬಾಲಕನನ್ನು ಕಳೆದ ವಾರ ಬಂಧಿಸಲಾಗಿದೆ ಮತ್ತು ದೇವದೂಷಣೆ ಕಾನೂನಿನ ಅಡಿಯಲ್ಲಿ ದೂರು ದಾಖಲಿಸಲಾಗಿದೆ. ಆದರೆ ನಂತರ ಅಪ್ರಾಪ್ತ ವಯಸ್ಕನಾಗಿದ್ದಕ್ಕಾಗಿ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ
.’ದಾಳಿಕೋರರು ಕೋಲುಗಳು, ಕಲ್ಲುಗಳು ಮತ್ತು ಇಟ್ಟಿಗೆಗಳನ್ನು ಹೊತ್ತಿದ್ದರು. ಅವರು ಧಾರ್ಮಿಕ ಘೋಷಣೆಗಳನ್ನು ಕೂಗಿ ದೇವರ ವಿಗ್ರಹಕ್ಕೆ ಹಾನಿ ಮಾಡಿದರು ಎಂದು ಜಿಲ್ಲಾ ಪೊಲೀಸ್ ಅಧಿಕಾರಿ ಅಸದ್ ಸರ್ಫ್ರಾಜ್ ಹೇಳಿದರು. ದೇವಾಲಯದ ಒಂದು ಭಾಗವನ್ನು ಸಹ ಸುಟ್ಟು ಹಾಕಲಾಗಿದೆ ಎಂದು ಅವರು ಹೇಳಿದರು.

ಪ್ರಮುಖ ಸುದ್ದಿ :-   ವೀಡಿಯೊ...: ಭಾರೀ ಮಳೆ-ಬಿರುಗಾಳಿಯ ನಡುವೆ ಹಸಿರು ಬಣ್ಣಕ್ಕೆ ತಿರುಗಿದ ದುಬೈನ ಆಕಾಶ...!

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement