ಗಮನಿಸಿ.. ಇಂದು ಎಸ್​ಎಸ್ಎಲ್​ಸಿ ಫಲಿತಾಂಶ ಡೌಟು; ಶಿಕ್ಷಣ ಇಲಾಖೆ

ಬೆಂಗಳೂರು: ಎಸ್ಎಸ್ಎಲ್​ಸಿ ಫಲಿತಾಂಶ ಪ್ರಕಟ ಮಾಡುವ ಕುರಿತು ನಾಳೆ (ಶನಿವಾರ) ನಿಗದಿಯಾಗಿದ್ದ ಫಲಿತಾಂಶದ ದಿನ ಮುಂದೂಡಿಕೆಯಾಗಿದೆ ಎಂದು ಶಿಕ್ಷಣ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಜುಲೈ.19 ಮತ್ತು 22ರಂದು ಎರಡು ದಿನ ಕೊರೋನಾ ಆತಂಕದ ನಡುವೆಯೂ ಯಶಸ್ವಿಯಾಗಿ ನಡೆದಿದ್ದಂತ ಎಸ್ ಎಸ್ ಎಲ್ ಸಿ ಪರೀಕ್ಷೆಯ ಫಲಿತಾಂಶ ನಾಳೆ (ಶನಿವಾರ) ಪ್ರಕಟವಾಗಲಿದೆ ಎಂಬುದಾಗಿ ಹೇಳಲಾಗಿತ್ತು. ಆದರೆ ಆಗಸ್ಟ್ 7ರಂದು ಎಸ್ ಎಸ್ ಎಲ್ ಸಿ ಪರೀಕ್ಷೆಯ ಫಲಿತಾಂಶ ಪ್ರಕಟವಾಗುವುದಿಲ್ಲ ಎಂದು ಎಸ್ ಎಸ್ ಎಲ್ ಸಿ ಪರೀಕ್ಷಾ ಮಂಡಳಿ ಸ್ಪಷ್ಟ ಪಡಿಸಿದೆ.
ಈ ಕುರಿತಂತೆ ಎಸ್ಸೆಸ್ಸೆಲ್ಸಿ ಪರೀಕ್ಷಾ ಮಂಡಳಿಯ ನಿರ್ದೇಶಕಿ ಸುಮಂಗಲಾ.ವಿ. ಅವರು ಮಾಹಿತಿ ನೀಡಿದ್ದು, ನಾಳೆ ಎಸ್ ಎಸ್ ಎಲ್ ಸಿ ಪರೀಕ್ಷೆಯ ಫಲಿತಾಂಶ ಪ್ರಕಟಿಸುವಂತ ಯಾವುದೇ ನಿರ್ಧಾರವನ್ನು ಕೈಗೊಂಡಿಲ್ಲ ಎಂದು ತಿಳಿಸಿದ್ದಾರೆ. ಫಲಿತಾಂಶದ ಬಗ್ಗೆ ಮಾಹಿತಿ ತಿಳಿಸಲಾಗುವುದು ಎಂದು ಹೇಳಿದ್ದಾರೆ.
ಈ ಮೊದಲು ಆಗಸ್ಟ್​ 7ರಂದು ಎಸ್​ಎಸ್​ಎಲ್​ಸಿ ಫಲಿತಾಂಶ ಪ್ರಕಟಿಸಲಾಗುವುದು ಎನ್ನಲಾಗಿತ್ತು. ಈ ಕುರಿತು ಪ್ರತಿಕ್ರಿಯಿಸಿರುವ ಶಿಕ್ಷಣ ಇಲಾಖೆ ಫಲಿತಾಂಶ ಪ್ರಕಟಣೆ ಕುರಿತು ಇನ್ನು ಸರ್ಕಾರದಿಂದ ಅನುಮತಿ ಸಿಗದಕಾರಣ ಇನ್ನು ಎರಡು ದಿನಗಳ ಬಳಿಕ ಫಲಿತಾಂಶ ಘೋಷಣೆಯಾಗುವ ಸಾಧ್ಯತೆ ಇದೆ ಎಂದು ತಿಳಿಸಿದ್ದಾರೆ.
ಈಗಾಗಲೇ ಮೌಲ್ಯ ಮಾಪನ ಪೂರ್ಣಗೊಂಡಿದ್ದು, ಫಲಿತಾಂಶ ಪ್ರಕಟಣೆಗೆ ಸಕಲ ತಯಾರಿಯನ್ನು ಶಿಕ್ಷಣ ಇಲಾಖೆ ನಡೆಸಿದೆ. ಆದರೆ, ಸರ್ಕಾರದಲ್ಲಿ ನಡೆದ ಬದಲಾವಣೆಗಳಿಂದಾಗಿ ಫಲಿತಾಂಶ ವಿಳಂಬವಾಗಲಿದೆ. ಸದ್ಯ ಸಚಿವ ಸಂಪುಟ ರಚನೆಯಾಗಿದ್ದು, ಖಾತೆ ಹಂಚಿಕೆಯಾಗಿಲ್ಲ. ಈ ಹಿನ್ನಲೆ ಶಿಕ್ಷಣ ಸಚಿವರಿಲ್ಲದ ಕಾರಣ ಫಲಿತಾಂಶ ಪ್ರಕಟಕ್ಕೆ ಇನ್ನೆರಡು ದಿನ ತಡವಾಗಬಹುದು ಎಂದು ಹೇಳಲಾಗುತ್ತಿದೆ.
ಖಾತೆ ಹಂಚಿಕೆ ಕಾರ್ಯ ಇಂದು ಸಂಜೆಯೊಳಗೆ ಬಹುತೇಕ ಪೂರ್ಣಗೊಳ್ಳಲಿದೆ ಎಂದುಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. ಈ ವೇಳೆ ಶಿಕ್ಷಣ ಇಲಾಖೆ ಜವಾಬ್ದಾರಿ ಯಾವ ಸಚಿವರಿಗೆ ಸಿಗಲಿದೆ ಎಂಬ ಸ್ಪಷ್ಟತೆ ಸಿಗಲಿದೆ. ಬಳಿಕ ನೂತನ ಶಿಕ್ಷಣ ಸಚಿವರು ಇಲಾಖಾ ಅಧಿಕಾರಿಗಳೊಂದಿಗೆ ಚರ್ಚಿಸಿ, ಫಲಿತಾಂಶ ಪ್ರಕಟಣೆ ಕುರಿತು ಅವರೇ ಘೋಷಣೆ ಮಾಡುವ ಸಾಧ್ಯತೆ ಇದೆ.
ಕೋವಿಡ್ ಆತಂಕದಲ್ಲೂ ಸಕಲ ಮುನ್ನೆಚ್ಚರಿಕಾ ಕ್ರಮವಹಿಸಿ ಶಿಕ್ಷಣ ಇಲಾಖೆ ಕಳೆದ ಜು. 19 ಮತ್ತು 22 ರಂದು ಎಸ್​ಎಸ್​ಎಲ್​ಸಿ ಪರೀಕ್ಷೆಯನ್ನು ನಡೆಸಿತ್ತು.

ಪ್ರಮುಖ ಸುದ್ದಿ :-   ಶ್ರೀರಂಗಪಟ್ಟಣ: ಐಸ್‌ ಕ್ರೀಂ ತಿಂದ ಬಳಿಕ ಅವಳಿ ಮಕ್ಕಳ ಸಾವು

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement