ಮಹತ್ವದ ಸುದ್ದಿ.. ರೆಪೋ ದರ, ರಿವರ್ಸ್ ರೆಪೋ ದರ ಯಥಾಸ್ಥಿತಿ ಮುಂದವರಿಸಿದ ಆರ್‌ಬಿಐ

ನವದೆಹಲಿ : ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ (RBI) ಗವರ್ನರ್ ಶಕ್ತಿಕಾಂತ ದಾಸ್ ಶುಕ್ರವಾರ ಹಣಕಾಸು ನೀತಿ ಪ್ರಕಟಿಸಿದ್ದು, ರೆಪೋದರವನ್ನು ಶೇ 4 ಹಾಗೂ ರಿವರ್ಸ್​ ರೆಪೋ ದರವನ್ನು ಶೇ 3.35ರಲ್ಲಿ ಮುಂದುವರಿಸಲಾಗುತ್ತದೆ ಎಂದು ಹೇಳಿದ್ದಾರೆ.
ಪ್ರಸಕ್ತ ಹಣಕಾಸು ವರ್ಷದಲ್ಲಿ ಜಿಡಿಪಿ ಬೆಳವಣಿಗೆಯ ಅಂದಾಜನ್ನು ಆರ್ ಬಿಐ ಶೇ.9.5ಕ್ಕೆ ಉಳಿಸಿಕೊಂಡಿದೆ ಎಂದು ದಾಸ್ ಹೇಳಿದರು.
ಭಾರತೀಯ ರಿಸರ್ವ್ ಬ್ಯಾಂಕ್ ರೆಪೊ ದರವನ್ನು ಶೇಕಡಾ 4 ರಲ್ಲಿ ಬದಲಾಯಿಸದೆ ಉಳಿಸಿಕೊಂಡಿದೆ ಮತ್ತು ಹೊಂದಾಣಿಕೆಯ ನಿಲುವನ್ನು ಕಾಯ್ದುಕೊಂಡಿದೆ. ಹಾಗು ರಿವರ್ಸ್ ರೆಪೊ ದರವನ್ನು ಶೇಕಡಾ 3.35 ಕ್ಕೆ ಇರಿಸಿದೆ ಎಂದು ಹೇಳಿದರು.
ಮಾರ್ಜಿನಲ್ ಸ್ಟ್ಯಾಂಡಿಂಗ್ ಫೆಸಿಲಿಟಿ ದರ ಮತ್ತು ಬ್ಯಾಂಕ್ ದರವನ್ನು ಶೇಕಡಾ 4.25 ಕ್ಕೆ ನಿಗದಿಪಡಿಸಲಾಗಿದೆ. ಪ್ರಸ್ತುತ ಹಣಕಾಸು ವರ್ಷದಲ್ಲಿ ನೈಜ ಜಿಡಿಪಿ ಬೆಳವಣಿಗೆ ಕ್ಯೂ1 ರಲ್ಲಿ ಶೇ.21.4, ಕ್ಯೂ2 ರಲ್ಲಿ 7.3, ಕ್ಯೂ3 ರಲ್ಲಿ ಶೇ.6.2 ಮತ್ತು ಕ್ಯೂ4 ರಲ್ಲಿ ಶೇ.6.1 ರಷ್ಟಿದೆ ಎಂದು ಆರ್ ಬಿಐ ಗವರ್ನರ್ ತಿಳಿಸಿದರು.
ಜೂನ್ 2021 ಕ್ಕೆ ಹೋಲಿಸಿದರೆ ಈಗ ನಾವು ಉತ್ತಮ ಸ್ಥಿತಿಯಲ್ಲಿದ್ದೇವೆ. ಆದರೆ ಕೋವಿಡ್-19 ರ ಮೂರನೇ ಅಲೆಯ ಸಾಧ್ಯತೆಯ ಬಗ್ಗೆ ನಾವು ಜಾಗರೂಕರಾಗಿರಬೇಕು’ ಎಂದು ಅವರು ಹೇಳಿದ್ದಾರೆ.
ಜೂನ್ ನಲ್ಲಿ ಹಣಕಾಸು ನೀತಿ ಸಮಿತಿಯ ನಿರೀಕ್ಷೆಗಳ ರೀತಿಯಲ್ಲಿ ಆರ್ಥಿಕ ಚಟುವಟಿಕೆವ್ಯಾಪಕವಾಗಿ ವಿಕಸನಗೊಂಡಿದೆ ಮತ್ತು ಕೋವಿಡ್-19 ರ ಎರಡನೇ ಹಂತದ ಹಿನ್ನಡೆಯಿಂದ ಆರ್ಥಿಕತೆ ಚೇತರಿಸಿಕೊಳ್ಳುತ್ತಿದೆ ಎಂದು ಶಕ್ತಿಕಾಂತ ದಾಸ್ ಹೇಳಿದರು.

ಪ್ರಮುಖ ಸುದ್ದಿ :-   ಇವಿಎಂ ಮತಗಳ ಜೊತೆ ವಿವಿಪ್ಯಾಟ್ ಮತಗಳ ಸಂಪೂರ್ಣ ಎಣಿಕೆ : ಎಲ್ಲ ಅರ್ಜಿಗಳನ್ನು ವಜಾ ಮಾಡಿದ ಸುಪ್ರೀಂ ಕೋರ್ಟ್

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement