ಖಾತೆ ಬದಲಿಸದಿದ್ರೆ ರಾಜೀನಾಮೆ ಎಂದ ಆನಂದ ಸಿಂಗ್‌, ಎಂಟಿಬಿ ನಾಗರಾಜ: ಖಾತೆ ಹಂಚಿಕೆ ಬೆನ್ನಲ್ಲೇ ಸಿಎಂ ಬೊಮ್ಮಾಯಿಗೆ ಸಂಕಟ..!

ಬೆಂಗಳೂರು: ಖಾತೆ ಹಂಚಿಕೆ ಬೆನ್ನಲ್ಲೇ ಖಾತೆಯ ಬಗ್ಗೆ ಸಚಿವರ ಅಸಮಾಧಾನ ಸ್ಪೋಟಗೊಳ್ಳುತ್ತಿದೆ.
ನಿರೀಕ್ಷಿತ ಖಾತೆ ಸಿಗದ ಕಾರಣಕ್ಕೆ ಮೊದಲಿಗೆ ಆನಂದ್​ ಸಿಂಗ್​ ಮತ್ತು ಈಗಎಂಟಿಬಿ ನಾಗರಾಜ್​ ಬಹಿರಂಗವಾಗಿ ತಮ್ಮ ಅಸಮಾಧಾನ ಹೊರಹಾಕಿದ್ದಾರೆ. ಭೂವಿಜ್ಞಾನ ಮತ್ತು ಪರಿಸರ, ಪ್ರವಾಸೋದ್ಯಮ ಖಾತೆ ನೀಡಿದ್ದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಆನಂದ್​ ಸಿಂಗ್​ ಈ ಸಂಬಂಧ ಇನ್ನೆರಡು ದಿನದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿಯಾಗಿ ಈ ಬಗ್ಗೆ ಮಾತನಾಡುವುದಾಗಿತಿಳಿಸಿದ್ದಾರೆ,ಅಲ್ಲದೆ ಸೂಚ್ಯವಾಗಿ ರಾಜೀನಾಮೆ ಬೆದರಿಕೆಯನ್ನೂ ಒಡ್ಡಿದ್ದಾರೆ.

ತಮ್ಮ ಖಾತೆ ಬದಲಿಸದಿದ್ದರೆ ತನ್ನ ಶಾಸಕ ಸ್ಥಾನದಲ್ಲಿ ಉಳಿಯಬೇಕೋ ಏನು ಎಂಬುದರ ಬಗ್ಗೆ ಆಲೋಚನೆ ಮಾಡಬೇಕಾಗುತ್ತದೆ ಎಂದು ಸೂಚ್ಯವಾಗಿ ಹೇಳಿದ್ದಾರೆ.
ನಾನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಐಇ ಹಾಗೂ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಬಳಿ ಈ ಕುರಿತು ಹೇಳಿದ್ದೆ. ಆದರೆ ನನಗೆ ಬೇರೆ ಕಾತೆ ನೀಡಲಾಗಿದೆ. ಇದರಿಂದ ನನಗೆ ಅಸಮಾದಾನವಾಗಿರುವುದಂತೂ ನಿಜ.ಈ ಸರ್ಕಾರ ಬರಲು ಮೊದಲು ನಾನು ರಾಜೀನಾಮೆ ನೀಡಿದ್ದು ನಾನೇ. ನಂತರ ಒಬ್ಬೊಬ್ಬರಾಗಿ ರಾಜೀನಾಮೆ ನೀಡಿದ್ದರಿಂದ ಬಿಜೆಪಿ ಸರ್ಕಾರ ಅಧಿಕಾರಕ್ಕೆಬಂತು. ಖಾತೆ ಹಂಚಿಕೆ ಮಾಡಿಕೊಳ್ಳುವ ಮೊದಲು ವರಿಷ್ಠರು ಇದನ್ನು ಆಲೋಚನೆ ಮಾಡಬೇಕಿತ್ತು ಎಂದು ಹೇಳಿದ್ದಾರೆ.ನನಗೆ ಖಾತೆ ಬಗ್ಗೆ ಸಮಾಧಾನವಿಲ್ಲ, ಎಲ್ಲವನ್ನೂ ಮಾಧ್ಯಮದವರ ಮುಂದೆ ಬಹಿರಂಗವಾಗಿ ಹೇಳಲು ಆಗುವುದಿಲ್ಲ ಎಂದು ಹೇಳಿದ್ದಾರೆ.
ಮತ್ತೊಂದೆಡೆ ಸಚಿವ ಎಂಟಿಬಿ ನಾಗರಾಜ ಸಹ ಪೌರಾಡಳಿತ, ಸಣ್ಣ ಕೈಗಾರಿಕೆ, ಸಾರ್ವಜನಿಕ ವಲಯ ಕೈಗಾರಿಕೆ ಇಲಾಖೆ ನೀಡಿರುವುದಕ್ಕೆ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದು ತಾವು ಬಯಸಿದ ಖಾತೆ ಅಲ್ಲ ಎಂದಿರುವ ಎಂಟಿಬಿ ನಾಗರಾಜ್​, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಈ ಖಾತೆ ನೀಡಿರುವುದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅಲ್ಲದೇ, ತಮ್ಮ ಖಾತೆ ಇನ್ನು ಮೂರು ದಿನದಲ್ಲಿ ಬದಲಾವಣೆ ಆಗದಿದ್ದರೆ, ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವ ಎಚ್ಚರಿಕೆಯನ್ನೂ ನೀಡಿದ್ದಾರೆ.
ಈ ಕುರಿತು ಟ್ವೀಟರ್​ನಲ್ಲಿ ಅಸಮಾಧಾನ ಹೊರ ಹಾಕಿರುವ ವಿಧಾನ ಪರಿಷತ್​ ಸದಸ್ಯರಾಗಿರುವ ಎಂಟಿಬಿ ನಾಗರಾಜ್​, ಈ ಹಿಂದಿನ ಮುಖ್ಯಮಂತ್ರಿಗಳು ಮತ್ತು ಈಗಿನ ಮುಖ್ಯಮಂತ್ರಿಗಳು ನನಗೆ ಕೊಟ್ಟ ಮಾತಿನಂತೆ ನಡೆದುಕೊಂಡಿಲ್ಲ. ಖಾತೆ ಹಂಚಿಕೆಯಲ್ಲಿ ನನಗೆ ಅಸಮಾಧಾನವಿದೆ. ಮುಂದಿನ 2-3 ದಿನಗಳಲ್ಲಿ ನನ್ನ ನಿರ್ಧಾರ ತಿಳಿಸುವೆ ಎಂದು ಟ್ವೀಟ್​ ಮೂಲಕ ಮುಖ್ಯಮಂತ್ರಿಗಳಿಗೆ ಗಡುವು ನೀಡಿದ್ದಾರೆ.

ಪ್ರಮುಖ ಸುದ್ದಿ :-   ಬೆಳಗಾವಿ: ಹಾಡಹಗಲೇ ಸ್ಕ್ರೂ ಡ್ರೈವರ್​ನಿಂದ ಚುಚ್ಚಿ ಯುವಕನ ಕೊಲೆ

ಎರಡು ಮೂರು ದಿನ ಕಾದು ನೋಡುವ ತಂತ್ರಕ್ಕೆ ಮೊರೆ ಹೋಗಿರುವ ಅವರು, ಬಳಿಕವೂ ಖಾತೆ ಬದಲಾವಣೆ ಮಾಡದಿದ್ದರೆ, ಸುದ್ದಿಗೋಷ್ಠಿ ಕರೆದು ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಲು ಸಿದ್ದತೆ ನಡೆಸಿದ್ದಾರೆ ಎನ್ನಲಾಗಿದೆ.
ಹೀಗಾಗಿ ಈ ಇಬ್ಬರು ಸಚಿವರಿಗೆ ಮುಖ್ಯಮಂತ್ರಿಗಳು ತಮ್ಮ ಬಳಿ ಇರುವ ಖಾತೆಗಳನ್ನು ನೀಡಿ ಸಮಾಧಾನಪಡಿಸುತ್ತಾರೋ ಅಥವಾ ಕೆಲಕಾಲ ಹೀಗೆಯೇ ಮುಂದೂಡುತ್ತಾರೋ ಎಂಬುದನ್ನು ಕಾದು ನೋಡಬೇಕಿದೆ.

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement