ಒಲಿಂಪಿಕ್ಸ್​ನಲ್ಲಿ ಚಿನ್ನ ಗೆದ್ದ ನೀರಜ್​ಗೆ ಕೆಎಸ್​ಆರ್​ಟಿಸಿಯಿಂದ ಜೀವಿತಾವಧಿ ಕೊಡುಗೆ, ಕನ್ನಡತಿ ಅದಿತಿ​ಗೂ ಗೌರವ

ಬೆಂಗಳೂರು: ಟೋಕಿಯೊ ಲಿಂಪಿಕ್ಸ್​ನಲ್ಲಿ ಚಿನ್ನ ಗೆದ್ದ ನೀರಜ್​ ಚೋಪ್ರಾಗೆ ಅವರ ಸಾಧನೆಗೆ ಕೆಎಸ್​ಆರ್​ಟಿಸಿ ಜೀವಿತಾವಧಿ ಕೊಡುಗೆ ನೀಡಿದೆ. ಪದಕ ಜಸ್ಟ್‌ ಮಿಸ್‌ ಆದ ಗಾಲ್ಫರ್‌ ಕನ್ನಡತಿ ಅದಿತಿ ಅಶೋಕ್​ಗೂ ಗೌರವ ನೀಡಿದೆ.
ಕೆಎಸ್​ಆರ್​ಟಿಸಿ ಕೊಡಮಾಡುವ ಗೋಲ್ಡನ್​ ಪಾಸ್​ ಪ್ರಕಟಸಿದ್ದು, ಬಸ್ಸಿನಲ್ಲಿ ರಾಜ್ಯ ಹಾಗೂ ಅಂತಾರಾಜ್ಯಗಳಲ್ಲಿ ಜೀವಿತಾವಧಿವರೆಗೆ ಉಚಿತವಾಗಿ ಪ್ರಯಾಣಿಸಬಹುದಾಗಿದೆ.
ಟೋಕಿಯೋ ಒಲಿಂಪಿಕ್ಸ್​ನ (Tokyo Olympics) ಜಾವೆಲಿನ್‌ ಎಸೆತದಲ್ಲಿ ಚಿನ್ನದ ಪದಕ ಗೆದ್ದು ಶತಮಾನದ ಅಥ್ಲಟಿಕ್ಸ್‌ನಲ್ಲಿ ಶತಮಾನದ ಭಾರತದ ಪದಕ ಕಾಯುವಿಕೆ ಕೊನೆಗಾಣಿಸಿದ ನೀರಜ್‌ ಚೋಪ್ರಾ (Neeraj Chopra) ಅವರಿಗೆ ಕೆಎಸ್​ಆರ್​ಟಿಸಿ ಕೂಡ ಚಿನ್ನದ ಹುಡುಗನಿಗೆ ಅಭಿನಂದನೆ ಸಲ್ಲಿಸಿ ವಿಶೇಷ ಸೌಲಭ್ಯ ಪ್ರಕಟಿಸಿದೆ.
ಒಲಿಂಪಿಕ್ಸ್​ನಲ್ಲಿ ಚಿನ್ನ ಗೆದ್ದಿರುವ ನೀರಜ್​ ಚೋಪ್ರಾಗೆ ಕೆಎಸ್​ಆರ್​ಟಿಸಿ ಗೋಲ್ಡನ್ ಪಾಸ್ ನೀಡುವ ಮೂಲಕ ಸಾಧನೆಗೆ ಗೌರವ ನೀಡಿದೆ. ಸಂಸ್ಥೆಯ 60 ವರ್ಷದ ಸಂಭ್ರಮಾಚರಣೆ ಸಂದರ್ಭದಲ್ಲೇ ಈ ವಿಶೇಷ ಗೌರವವನ್ನು ಚೋಪ್ರಾಗೆ ಸಲ್ಲಿಸಲಾಗಿದ್ದು, ಈ ಬಗ್ಗೆ ಕೆಎಸ್​ಆರ್​ಟಿಸಿ ಅಧಿಕೃತ ಟ್ವಿಟರ್ ಅಕೌಂಟ್​ನಲ್ಲಿ ಟ್ವೀಟ್ ಮಾಡಿದೆ.
ಅನಂತ ಅನಂತ ಅಭಿನಂದನೆಗಳು. ಚಿನ್ನದ ಹುಡುಗ ನೀರಜ್ ಚೋಪ್ರಾ ಅವರ ಅತ್ಯುನ್ನತ ಸಾಧನೆಯನ್ನು ಸಂಭ್ರಮಿಸಿ ಹಾರೈಸುತ್ತ, ಕೆಎಸ್​ಆರ್​ಟಿಸಿಯು 60 ವಸಂತಗಳನ್ನು ಪೂರೈಸಿರುವ ಸವಿನೆನಪಿನಲ್ಲಿ ನೀರಜ್ ಚೋಪ್ರಾ ಅವರಿಗೆ ಕೆಎಸ್​ಆರ್​ಟಿಸಿ ಗೋಲ್ಡನ್ ಪಾಸ್ ನೀಡಲಾಗುತ್ತದೆ ಎಂದು ಟ್ವೀಟ್ ಮಾಡಲಾಗಿದೆ. ಅವರ ಸಾಧನೆಗೆ ಕೆಎಸ್​ಆರ್​ಟಿಸಿ ಅಭಿನಂದನೆ ಸಲ್ಲಿಸಿದೆ.
ಕೆಎಸ್​ಆರ್​ಟಿಸಿ ಕೊಡಮಾಡುವ ಗೋಲ್ಡನ್​ ಪಾಸ್​ ಮೂಲಕ ನಿಗಮದ ಯಾವುದೇ ಬಸ್ಸಿನಲ್ಲಿ ರಾಜ್ಯ ಹಾಗೂ ಅಂತಾರಾಜ್ಯಗಳಲ್ಲಿ ಜೀವಿತಾವಧಿವರೆಗೆ ಉಚಿತವಾಗಿ ಪ್ರಯಾಣಿಸಬಹುದಾಗಿದೆ. ಇದು ಗೌರವ ಸೂಚಕವಾಗಿ ಕೊಡಲಾಗುವ ಸವಲತ್ತಾಗಿದೆ.
ಅದಿತಿ ಅಶೋಕ್​ಗೂ ಉಚಿತ ಪಾಸ್
ಪದಕ ಗೆಲ್ಲುವುದು ಸಾಧ್ಯವಾಗದಿದ್ದರೂ ಗಾಲ್ಫ್​ ಕ್ರೀಡೆಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿ ಹೃದಯ ಗೆದ್ದ ಕನ್ನಡತಿ ಅದಿತಿ ಅಶೋಕ್​ ಅವರಿಗೂ ಕೆಎಸ್​ಆರ್​ಟಿಸಿ ಉಚಿತ ಪಾಸ್​ ನೀಡುವುದಾಗಿ ಘೋಷಿಸಿದೆ. ಒಲಿಂಪಿಕ್​ನಲ್ಲಿ ಅದ್ಭುತ ಆಟವಾಡಿದ ಕನ್ನಡದ ಕುವರಿ, ಅರ್ಜುನ ಪ್ರಶಸ್ತಿ ವಿಜೇತೆ ಅದಿತಿ ಅಶೊಕ್​ ಅವರಿಗೆ ಕೆಎಸ್​ಆರ್​ಟಿಸಿ ಉಚಿತ ಪಾಸ್​ ನೀಡುವ ಮೂಲಕ ಅಭಿನಂದನೆ ಸಲ್ಲಿಸುತ್ತದೆ ಎಂದು ಟ್ವೀಟ್ ಮೂಲಕ ತಿಳಿಸಲಾಗಿದೆ.

ಪ್ರಮುಖ ಸುದ್ದಿ :-   ನೇಹಾ ಹಿರೇಮಠ ಕೊಲೆ ಪ್ರಕರಣ: ಆರೋಪಿ ಫಯಾಜ್‌ ಆರು ದಿನ ಸಿಐಡಿ ಕಸ್ಟಡಿಗೆ

 

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement