ಮೂರನೇ ಅಲೆ ಭೀತಿ ಮಧ್ಯೆ ಬೆಂಗಳೂರಿನಲ್ಲಿ 5 ದಿನದಲ್ಲಿ 242 ಮಕ್ಕಳಿಗೆ ಕೊರೊನಾ,,!

ಬೆಂಗಳೂರು: ಕೊರೊನಾ ಮೂರನೇ ಅಲೆ ಭೀತಿ ತಲೆದೋರಿರುವಾಗಲೇ ಬೆಂಗಳೂರು ನಗರದ ಮಕ್ಕಳಲ್ಲಿ ಸೋಂಕು ಹೆಚ್ಚಾಗುತ್ತಿದೆ. ಕಳೆದ ಕೆಲ‌ ದಿನಗಳಿಂದ ಮಕ್ಕಳಲ್ಲಿ ಸೋಂಕು ಹರಡುತ್ತಿದೆ.
ನಗರದಲ್ಲಿ 5 ದಿನದಲ್ಲಿ 242 ಮಕ್ಕಳಿಗೆ ಸೋಂಕು ತಗುಲಿದೆ. ಒಂದೆಡೆ ಕಂಟೈನ್ಮೆಂಟ್ ಸಂಖ್ಯೆ ಹೆಚ್ಚಳವಾಗ್ತಿದೆ. ಈಗ ಮಕ್ಕಳಿಗೆ ಸೋಂಕು ತಗುಲುತ್ತಿದೆ. ಕಳೆದ ಐದು‌ ದಿನದ ಕೊರೋನಾ ವರದಿಯಲ್ಲಿ ಅಂದರೆ ಆಗಸ್ಟ್ 6 ರಿಂದ 10ರ ವರೆಗಿನ ಐದು‌ ದಿನಗಳ ಅವಧಿಯಲ್ಲಿ 242 ಮಕ್ಕಳಲ್ಲಿ ಸೋಂಕು ಕಾಣಿಸಿಕೊಂಡಿದ್ದು, ಬಿಬಿಎಂಪಿಯನ್ನು ಚಿಂತೆಗೀಡು ಮಾಡಿದೆ.
242 ಮಕ್ಕಳಲ್ಲಿ ‌ ಕೊರೊನಾದಿಂದ ಬಾಧಿತರಾಗಿದ್ದಾರೆ. 123 ಹೆಣ್ಣು ಮಕ್ಕಳು ಹಾಗೂ 119 ಗಂಡು ಮಕ್ಕಳಲ್ಲಿ ಸೋಂಕು ಪತ್ತೆಯಾಗಿದೆ. ಅದರಲ್ಲಿಯೂ ಮುಖ್ಯವಾಗಿ ನವಜಾತ ಶಿಶುಗಳಿಂದ 9 ವರ್ಷ ವರೆಗಿನ 106 ಮಕ್ಕಳಿಗೆ ಹಾಗೂ 10 ವರ್ಷದಿಂದ 19 ವರ್ಷದೊಳಗಿನ 136 ಮಕ್ಕಳಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿದೆ ಒಟ್ಟಾರೆ ಕಳೆದ ಐದು ದಿನದಲ್ಲಿ ನಗರದಲ್ಲಿ 242 ಮಕ್ಕಳಿಗೆ ಸೋಂಕು ದೃಢವಾಗಿದೆ. ಕೆಲ‌ ದಿನಗಳಿಂದ ಮಕ್ಕಳಲ್ಲಿ ಹೆಚ್ಚೆಚ್ಚು ಸೋಂಕು ದೃಢವಾಗುತ್ತಿದೆ. ಆದರೂ ಆತಂಕ ಪಡುವ ಅಗತ್ಯವಿಲ್ಲ. ಮಕ್ಕಳಲ್ಲಿ ಸೋಂಕಿನ ಪ್ರಮಾಣ ಇನ್ನೂ‌ ಶೇಕಡಾ 5 ಇನ್ನೂ ಮೀರಿಲ್ಲ. ಮಕ್ಕಳಿಗೆ ವಿಶೇಷ ಕ್ರಮಗಳನ್ನು ಪಾಲಿಕೆ ಕೈಗೊಂಡಿದೆ ಎಂದು‌ ಬಿಬಿಎಂಪಿ ಆರೋಗ್ಯ ವಿಭಾದ ವಿಶೇಷ ಆಯುಕ್ತ ಡಿ ರಂದೀಪ್ ಅವರನ್ನು ಉಲ್ಲೇಖಿಸಿ ನ್ಯೂಸ್‌18 ಕನ್ನಡ.ಕಾಮ್‌ ವರದಿ ಮಾಡಿದೆ.

ಪ್ರಮುಖ ಸುದ್ದಿ :-   ಪ್ರಧಾನಿ ಬಗ್ಗೆ ವಿವಾದಾತ್ಮಕ ಹೇಳಿಕೆ, ವಿದ್ಯುತ್‌ ಕಡಿತ ಬೆದರಿಕೆ: ಶಾಸಕ ರಾಜು ಕಾಗೆಗೆ ಚುನಾವಣೆ ಆಯೋಗದಿಂದ ನೋಟಿಸ್‌

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement