ಭಾರತದ ವಿದೇಶೀ ವಿನಿಮಯ ಸಂಗ್ರಹ 621.464 ಬಿಲಿಯನ್‌ ಡಾಲರ್​ಗೆ ಏರಿಕೆ: ಇದು ಸಾರ್ವಕಾಲಿಕ ದಾಖಲೆ

ಮುಂಬೈ: ಆಗಸ್ಟ್ 6, 2021ಕ್ಕೆ ಕೊನೆಗೊಂಡ ವಾರದಲ್ಲಿ ಭಾರತದ ವಿದೇಶಿ ವಿನಿಮಯ ಸಂಗ್ರಹವು 889 ಮಿಲಿಯನ್ ಅಮೆರಿಕನ್ ಡಾಲರ್​ನಷ್ಟು ಹೆಚ್ಚಳವಾಗಿ, ಸಾರ್ವಕಾಲಿಕ ಗರಿಷ್ಠ ಮಟ್ಟವಾದ 621.464 ಬಿಲಿಯನ್‌ ಡಾಲರ್​ಗೆ ಏರಿಕೆಯಾಗಿದೆ ಎಂದು ಆರ್‌ಬಿಐ ಅಂಕಿ-ಅಂಶಗಳಿಂದ ಶುಕ್ರವಾರ ತಿಳಿದುಬಂದಿದೆ.

ಜುಲೈ 30, 2021ಕ್ಕೆ ಕೊನೆಗೊಂಡ ಈ ಹಿಂದಿನ ವಾರದಲ್ಲಿ, ಮೀಸಲು ಪ್ರಮಾಣ 9.427 ಬಿಲಿಯನ್​ ಡಾಲರ್​ಗಳಷ್ಟು ಏರಿಕೆಯಾಗಿ 620.576 ಬಿಲಿಯನ್ ಡಾಲರ್ ತಲುಪಿತ್ತು.  ವಿದೇಶೀ ಕರೆನ್ಸಿ ಸ್ವತ್ತು (FCA) 1.508 ಬಿಲಿಯನ್ ಡಾಲರ್​ ಹೆಚ್ಚಳವಾಗಿ, ವರದಿಯಾಗುವ ವಾರಕ್ಕೆ 577.732 ಬಿಲಿಯನ್ ಅಮೆರಿಕನ್ ಡಾಲರ್ ಮುಟ್ಟಿದೆ.

ಚಿನ್ನದ ಮೀಸಲು 588 ಮಿಲಿಯನ್ ಡಾಲರ್​ನಷ್ಟು ಇಳಿಕೆಯಾಗಿ, 37.057 ಬಿಲಿಯನ್ ಅಮೆರಿಕನ್ ಡಾಲರ್ ಆಗಿತ್ತು. ಇದು ವರದಿಯಾದ ವಾರದ ಅಂಕಿ- ಅಂಶ ಎಂದು ಆರ್​ಬಿಐ ತಿಳಿಸಿದೆ. ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆ (ಐಎಂಎಫ್) ಬಳಿಯ ಸ್ಪೆಷಲ್ ಡ್ರಾಯಿಂಗ್ ರೈಟ್ಸ್ (ಎಸ್​ಡಿಆರ್​) 1 ಮಿಲಿಯನ್ ಡಾಲರ್ ಇಳಿದು, 1.551 ಬಿಲಿಯನ್ ಡಾಲರ್ ತಲುಪಿದೆ.

ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆಯ ಬಳಿ ಇರುವ ಭಾರತದ ಮೀಸಲು ಪ್ರಮಾಣ ಕೂಡ 31 ಮಿಲಿಯನ್ ಅಮೆರಿಕನ್ ಡಾಲರ್ ಇಳಿದು, 5.125 ಬಿಲಿಯನ್ ಅಮೆರಿಕನ್ ಡಾಲರ್ ಮುಟ್ಟಿದೆ. ಎಂದು ಅಂಕಿ- ಅಂಶಗಳು ತಿಳಿಸುತ್ತಿವೆ.

ಪ್ರಮುಖ ಸುದ್ದಿ :-   ಕಾರು ಅಡ್ಡ ಹಾಕಿ ನಟಿ ಹರ್ಷಿಕಾ ಪೂಣಚ್ಚ ದಂಪತಿಗೆ ಕಿರುಕುಳ : "ನಾವು ಪಾಕಿಸ್ತಾನ ಅಥವಾ ಅಫ್ಘಾನಿಸ್ತಾನದಲ್ಲಿದ್ದೇವೆಯೇ ಎಂದು ನಟಿ ಪ್ರಶ್ನೆ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement