ಆಘಾತಕಾರಿ ವಿಡಿಯೋ:ಕಾಬೂಲ್‌ನಿಂದ ಹೊರಟ ವಿಮಾನದ ಚಕ್ರಕ್ಕೆ ತಮ್ಮನ್ನು ಕಟ್ಟಿಹಾಕಿಕೊಂಡಿದ್ದ ಇಬ್ಬರು ಕೆಳಗೆ ಬಿದ್ದು ಸಾವು..!

ಕಾಬೂಲ್ ನಿಂದ ಹಾರುತ್ತಿದ್ದ ವಿಮಾನದ ಚಕ್ರಗಳಿಗೆ ತಮ್ಮನ್ನು ಕಟ್ಟಿಕೊಂಡಿದ್ದ ಇಬ್ಬರು ಕೆಳಗೆ ಬಿದ್ದು ಸಾವೀಗೀಡಾದ ಆಘಾತಕಾರಿ ಘಟನೆ ಅಫಘಾನಿಸ್ತಾನದಲ್ಲಿ ನಡೆದಿದೆ.
ಟೆಹ್ರಾನ್ ಟೈಮ್ಸ್ ಟ್ವಿಟರ್ ನಲ್ಲಿ ಹಂಚಿಕೊಂಡಿರುವ ವೀಡಿಯೋದಲ್ಲಿ, ವಿಮಾನವು ಕಾಬೂಲ್ ಮೇಲೆ ಹಾರುವುದನ್ನು ಕಾಣಬಹುದು. ವಿಮಾನವು ಮುಂದುವರೆದಂತೆ ಇಬ್ಬರು ವ್ಯಕ್ತಿಗಳು ಕೆಳಗೆ ಬೀಳುವುದನ್ನು ಕಾಣಬಹುದು..!

 

ರಾಜಧಾನಿ ಕಾಬೂಲ್ ಅನ್ನು ವಶಪಡಿಸಿಕೊಂಡ ನಂತರ ತಾಲಿಬಾನ್ ಅಫ್ಘಾನಿಸ್ತಾನದ ಮೇಲೆ ತನ್ನ ಆಡಳಿತವನ್ನು ಸ್ಥಾಪಿಸುವುದರೊಂದಿಗೆ, ದೇಶದಿಂದ ಪಲಾಯನ ಮಾಡಲು ಹತಾಶರಾಗಿರುವ ಜನರನ್ನು ತೋರಿಸುವ ದೇಶದ ಆಘಾತಕಾರಿ ದೃಶ್ಯಗಳ ವಿಡಿಯೊಗಳು ಹೊರಬೀಳುತ್ತಿವೆ.ಸೋಮವಾರ ಕಾಬೂಲ್ ವಿಮಾನ ನಿಲ್ದಾಣದಲ್ಲಿ ವಿಮಾನದೊಳಗೆ ಸೇರಲು ಭಾರೀ ಜನಸಂದಣಿಯ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ತುಂಬಿ ತುಳುಕಿದ ಬೆನ್ನಲ್ಲೇ, ಇನ್ನೊಂದು ಅನಿರೀಕ್ಷಿತ ಹಾಗೂ ಆಘಾತಕಾರಿ ವಿಡಿಯೋ ಕಾಣಿಸಿಕೊಂಡಿದೆ.
ನಂಬಲಾಗದ ವೀಡಿಯೋ ಕಾಬೂಲ್ ವಿಮಾನ ನಿಲ್ದಾಣದಿಂದ ವಿಮಾನವೊಂದು ಟೇಕಾಫ್ ಆಗುವುದನ್ನು ಮತ್ತು ಕನಿಷ್ಠ ಎರಡು ಜನರು ದೈತ್ಯ ವಿಮಾನದಿಂದ ಕೆಳಗೆ ಬೀಳುವುದನ್ನು ತೋರಿಸಿದೆ. ವರದಿಗಳ ಪ್ರಕಾರ, ಕಾಬೂಲ್ ವಿಮಾನ ನಿಲ್ದಾಣದ ಬಳಿ ಸ್ಥಳೀಯರು ತಮ್ಮನ್ನು ವಿಮಾನದ ಚಕ್ರಗಳಿಗೆ ತಮ್ಮನ್ನು ಕಟ್ಟಿಕೊಂಡಿದ್ದ ಮೂವರು ವ್ಯಕ್ತಿಗಳನ್ನು ನೋಡಿ ನಂತರ ಅವರು ಕೆಳಗೆ ಬಿದ್ದರು ಎಂದು ಹೇಳಿಕೊಂಡಿದ್ದಾರೆ.
ಸ್ಥಳೀಯರೊಬ್ಬರು ಇದನ್ನು ದೃಢಪಡಿಸಿದರು ಮತ್ತು ಈ ಜನರು ಬೀಳುವುದು ಜೋರಾಗಿ ಮತ್ತು ಭಯಾನಕ ಶಬ್ದವನ್ನು ಮಾಡಿದೆ ಎಂದು ಹೇಳಿದರು” ಎಂದು ಅಶ್ವಕ್‌ ನ್ಯೂಸ್ ಟ್ವೀಟ್ ಮಾಡಿದೆ.
ಕೆಲವೇ ತಾಸುಗಳ, ಕಾಬೂಲ್‌ನ ಹಮೀದ್ ಕರ್ಜೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಕನಿಷ್ಠ 5 ಜನರು ಸಾವನ್ನಪ್ಪಿದ್ದರು ಮತ್ತು ಹಲವಾರು ಜನರು ಗಾಯಗೊಂಡಿದ್ದರು. ತಾಲಿಬಾನ್ ದಾಳಿಗೆ ಹೆದರಿ ನೂರಾರು ಜನರು ಅಫ್ಘಾನಿಸ್ತಾನ ರಾಜಧಾನಿಯನ್ನು ಬಿಟ್ಟು ವಿಮಾನಗಳನ್ನು ಬಲವಂತವಾಗಿ ಪ್ರವೇಶಿಸಲು ಪ್ರಯತ್ನಿಸಿದಾಗ ಈ ಘಟನೆ ಸಂಭವಿಸಿದೆ.

ಪ್ರಮುಖ ಸುದ್ದಿ :-   ಅಪರೂಪದ ಮದುವೆ; 2ನೇ ವಿಶ್ವ ಮಹಾಯುದ್ಧದ ಸೇನಾನಿ, 100 ವರ್ಷದ ವ್ಯಕ್ತಿಯೇ ಮದುವೆ ಗಂಡು ....ವಧುವಿಗೆ 96 ವರ್ಷ...!

5 / 5. 3

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement