ಕುಮಟಾ: ಬಾಡ ಸಮುದ್ರದಲ್ಲಿ ನಾಪತ್ತೆಯಾಗಿದ್ದವ ಎರಡು ದಿನಗಳ ಬಳಿಕ ಶವವಾಗಿ ಪತ್ತೆ

posted in: ರಾಜ್ಯ | 0

ಕುಮಟಾ; ಉತ್ತರ ಕನ್ನಡ ಜಿಲ್ಲೆ ಕುಮಟಾ ತಾಲೂಕಿನ ಬಾಡದ ಹುಬ್ಬಣ್ಣಗೆರೆ ಅರಬ್ಬಿ ಸಮುದ್ರ ತೀರದಲ್ಲಿ ಸೋಮವಾರ ನಾಪತ್ತೆಯಾಗಿದ್ದ ಬುಧವಾರ ಯುವಕನ ಶವ ಪತ್ತೆಯಾಗಿದೆ.
ಸೋಮವಾರ ಈಜಾಡಲು ಸಮುದ್ರಕ್ಕೆ ಇಳಿದಿದು ಕಾಣೆಯಾಗಿದ್ದ ದಾವಣಗೆರೆಯ ಇಂಜಿನಿಯರಿಂಗ್ ವಿದ್ಯಾರ್ಥಿ ರೇಣುಕಾಪ್ರಸಾದ (೨೩)ಎಂದು ಗುರುತಿಸಲಾಗಿದೆ. ಸೋಮವಾರ ಪ್ರವಾಸಕ್ಕೆ ಬಂದಿದ್ದ ರೇಣುಕಾ ಪ್ರಸಾದ ಮತ್ತು ಮೇಘಾ ಎಂಬವರು ಬಾಡದ ಸಮುದ್ರ ತೀರದಲ್ಲಿ ಈಜಿಗೆಂದು ಇಳಿದಿದ್ದರು. ಆದರೆ ಸಮುದ್ರದ ಅಲೆ ಜೋರಾಗಿದ್ದರಿಂದ ಪ್ರಬಲ ಅಲೆಯ ಸುಳಿಯಲ್ಲಿ ಇಬ್ಬರು ಅರಬ್ಬಿ ಸಮುದ್ರದಲ್ಲಿ ಕಾಣೆಯಾಗಿದ್ದರು ಮೇಘಾ ಅದೇ ದಿನ ಸಂಜೆ ಸಂಜೆ ಶವವಾಗಿ ಪತ್ತೆಯಾಗಿದ್ದಳು. ಆದರೆ ರೇಣುಕಾ ಪ್ರಸಾದ ಶವ ಎರಡು ದಿನಗಳ ಬಳಿಕ ಬುಧವಾರ ಪತ್ತೆಯಾಗಿದೆ.
ಈ ಪ್ರದೇಶದಲ್ಲಿ ಕಳೆದ ವರ್ಷವು ಈ ರೀತಿಯ ಘಟನೆ ನಡೆದಿತ್ತು. ಪ್ರವಾಸೋದ್ಯಮ ಇಲಾಖೆ ಮತ್ತು ಸ್ಥಳಿಯ ಆಡಳಿಯ ಸಮುದ್ರದ ಅಪಾಯದಲ್ಲಿ ಕನಿಷ್ಠ ಎಚ್ಚರಿಕೆಯ ಫಲಕವನ್ನಾದರೂ ಹಾಕಿದ್ದರೆ ಇಂತಹ ಘಟನೆ ತಪ್ಪಬಹುದು ಎಂಬುದು ಸಾರ್ವಜನಿಕರ ಮಾತಾಗಿದೆ. ಅದರಲ್ಲೂ ಮಳೆಗಾಲದಲ್ಲಿ ಪ್ರತಿ ಕ್ಷಣ ಸಮುದ್ರದ ಮಟ್ಟ ಮತ್ತು ನೀರಿನ ಸೆಳೆತ ಬದಲಾವಣೆ ಆಗುತ್ತಿರುವ ಬಗ್ಗೆ ಮಾಹಿತಿ ನೀಡುವ ಕೆಲಸವಾಗಬೇಕಿದೆ.
ಕುಮಟಾ ಪಿ.ಎಸ್.ಐ ಆನಂದ ಮೂರ್ತಿ ತನಿಖೆ ಕೈಗೊಂಡಿದ್ದಾರೆ.

ಕನ್ನಡಿ ನ್ಯೂಸ್ ನ ದಿನದ ಪ್ರಮುಖ ಸುದ್ದಿಗಳು ಮತ್ತು ಮಾಹಿತಿಗಾಗಿ
ಟೆಲಿಗ್ರಾಮ್ ಚಾನೆಲ್ ಸೇರಿ
ವಾಟ್ಸಾಪ್ ಗ್ರೂಪ್ ಸೇರಿ
ಫೇಸ್ ಬುಕ್ ಫಾಲೋ ಮಾಡಿ
ಗೂಗಲ್ ನ್ಯೂಸ್ ನಲ್ಲಿ ಸೇರಿ
ಟ್ವಿಟರ್ ನಲ್ಲಿ ಫಾಲೋ ಮಾಡಿ
advertisement

advertisement
ಓದಿರಿ :-   ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ: ನ್ಯಾ. ಸುಭಾಷ್ ಆಡಿ ನೇತೃತ್ವದ ಸಮಿತಿ ಕಾರ್ಯಾಚರಣೆಗೆ ಹೈಕೋರ್ಟ್‌ ತಡೆ

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

/ 5. ಒಟ್ಟು ವೋಟುಗಳು

ನಿಮ್ಮ ಕಾಮೆಂಟ್ ಬರೆಯಿರಿ

advertisement