ರಾಜ್ಯ ಸಂಪುಟ ಸಭೆಯಲ್ಲಿ 2859 ಆರೋಗ್ಯ ಉಪಕೇಂದ್ರಗಳ ಮೇಲ್ದರ್ಜೆಗೇರಿಸಲು 478 ಕೋಟಿ ರೂ.ಗಳಿಗೆ ಅನುಮೋದನೆ

ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಇಂದು (ಗುರುವಾರ) ನಡೆದ ಸಂಪುಟ ಸಭೆಯಲ್ಲಿ 2859 ಆರೋಗ್ಯ ಉಪಕೇಂದ್ರಗಳನ್ನು ಮೇಲ್ದರ್ಜೆಗೇರಿಸಲು 478 ಕೋಟಿ ರೂ.ಗಳಿಗೆ ಅನುಮೋದನೆ ನೀಡಲಾಯಿತು.

ಸಭೆಯ ಬಳಿಕ ಸಚಿವ ಮಾಧುಸ್ವಾಮಿ ಪತ್ರಿಕಾಗೋಷ್ಠಿ ನಡೆಸಿ ಈ ಕುರಿತು ಮಾಹಿತಿ ನೀಡಿ, 2859 ಆರೋಗ್ಯ ಉಪ ಕೇಂದ್ರಗಳನ್ನು ಮೇಲ್ದರ್ಜೆಗೆ 478 ಕೋಟಿ ರೂ. ಅನುಮೋದನೆ ನೀಡಲಾಗಿದೆ. ಶೇ 50% ರಷ್ಟು ಕೇಂದ್ರ ಸರ್ಕಾರ ನೀಡಲಿದೆ. 278.ಕೋಟಿ ರಾಜ್ಯ ಸರ್ಕಾರ ನೀಡಲಿದೆ ಎಂದರು.
ಆರೋಗ್ಯ ಪೂರೈಕೆದಾರರ ಹುದ್ದೆ ಸೃಜಿಸಲಾಗುವುದು. ನರ್ಸ್ ಗಳ ನೇಮಕ ಮಾಡಲಾಗುವುದು. ಕಟ್ಟಡ ಬಾಡಿಗೆ ತೆಗೆದುಕೊಳ್ಳಲು 5000 ರೂ ನೀಡಲಾಗುವುದು. 3 ವರ್ಷದವರೆಗೆ ಗುತ್ತಿಗೆ ಆಧಾರದಲ್ಲಿ ನರ್ಸ್, ಸ್ಟಾಫ್ ತೆಗೆದುಕೊಳ್ಳಲಾಗುವುದು. ಬಿಎಸ್ಸಿ ನರ್ಸ್ ಗಳನ್ನು ತೆಗೆದುಕೊಳ್ಳಲು ಅವಕಾಶ ಕಲ್ಪಿಸಲಾಗಿದೆ ಎಂದು ಮಾಹಿತಿ ನೀಡಿದರು.
ಅಲ್ಲದೆ, ಸಭೆಯಲ್ಲಿ ಕರ್ನಾಟಕ ಸ್ಟೇಟ್ ಮೆಂಟಲ್ ಹೆಲ್ತ್ ಕಾಯ್ದೆ ಜಾರಿಗೆ ತೀರ್ಮಾನ ಮಾಡಲಾಯಿತು. ಸರ್ಕಾರಿ- ಅನುದಾನಿತ ಕಾಲೇಜುಗಳಲ್ಲಿ ಸ್ಯಾನಿಟರಿ ಪ್ಯಾಡ್ ಗೆ 47 ಕೋಟಿ ರೂ. ವೆಚ್ಚ ಮಾಡಲಾಗುತ್ತದೆ ಎಂದರು.
75 ಸ್ಥಳೀಯ ನಗರ ಸಂಸ್ಥೆಗಳನ್ನು ಅಮೃತ ನಗರ ಗಳಾಗಿ ಪರಿವರ್ತನೆ ಮಾಡಲಾಗವುದು. 700 ಸರ್ಕಾರಿ ಶಾಲೆಗಳಿಗೆ ಪ್ರತಿ ಶಾಲೆಗೆ 10 ಲಕ್ಷ ರೂ.ಗಳನ್ನು ನೀಡಲು 100 ಕೋಟಿ ಹಣ, ಅಮೃತ ಸ್ವಸಹಾಯ ಗುಂಪುಗಳಿಗೆ 1 ಲಕ್ಷ ರೂ. ಸಹಾಯಧನ. 700 ಅಮೃತ ಗ್ರಾಮ ಪಂಚಯಾತಿಗಳನ್ನು ಆಯ್ಕೆ ಮಾಡಲಾಗುತ್ತದೆ ಹಾಗೂ ಪ್ರತಿ ಗ್ರಾಮ ಪಂಚಾಯತಿಗೆ 25 ಲಕ್ಷ ರೂ. ನೀಡಲಾಗುತ್ತದೆ ಎಂದು ಮಾಹಿತಿ ನೀಡಿದರು.
ಸಣ್ಣ ನೀರಾವರಿ ಯೋಜನೆಗೆ ಮೂರು ಯೋಜನೆಗಳಿವೆ. ಅವುಗಳ ಅನುಷ್ಠಾನ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ತಿಳಿಸಿದರು.

ಪ್ರಮುಖ ಸುದ್ದಿ :-   ಸಚಿವ ಸತೀಶ ಜಾರಕಿಹೊಳಿಗೆ ಸಂಬಂಧಿಸಿದ ಸ್ಥಳಗಳ ಮೇಲೆ ಇ.ಡಿ. ದಾಳಿ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement