ಅಫಘಾನ್‌ ಬಿಕ್ಕಟ್ಟು: ಮಹಿಳಾ ನಿರೂಪಕಿಗೆ ನೀನು ಮಹಿಳೆ ಮನೆಗೆ ತೆರಳು ಎಂದ ತಾಲಿಬಾನ್‌

ಕಾಬೂಲ್: ಅಪ್ಘಾನಿಸ್ತಾನ್ ದ ಸರ್ಕಾರಿ ಸ್ವಾಮ್ಯದ ಸುದ್ದಿಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ಮಹಿಳಾ ನಿರೂಪಕಿ ಈಗ ತಾಲಿಬಾನಿಂದಾಗಿ ಕೆಲಸ ಕಳೆದುಕೊಂಡಿದ್ದಾರ. ಹೀಗೆಂದು ಅವರು ಸಾಮಾಜಿ ಜಾಲತಾಣದಲ್ಲಿ ಹೇಳಿಕೊಂಡಿದ್ದಾರೆ.
ನೀನು ಮಹಿಳೆ. ಆದ್ದರಿಂದ ಕೆಲಸ ಮಾಡುವುದು ಬೇಡ, ಮನೆಗೆ ತೆರಳು ಎಂದು ತಾಲಿಬಾನ್ ಅಧಿಕಾರಿಗಳು ನನಗೆ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿರುವ ನಿರೂಪಕಿ ನಮಗೆ ಸಹಾಯ ಮಾಡಿ ಎಂದು ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋ ಬಿಡುಗಡೆ ನೆರವಿಗೆ ಅಂಗಲಾಚಿದ್ದಾರೆ.
ಸುದ್ದಿ ನಿರೂಪಕಿ ಶಬನಮ್ ದವ್ರಾನ್ ಅವರು ಐದು ವರ್ಷದಿಂದ ಸರ್ಕಾರಿ ಸ್ವಾಮ್ಯದ ಆರ್.ಟಿ.ಎ ಪಾಸ್ತೋ ಸುದ್ದಿಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದರು. ಅಪ್ಘಾನಿಸ್ತಾನ್ ದ ಮೇಲೆ ತಾಲಿಬಾನ್ ಉಗ್ರರು ದಾಳಿ ನಡೆಸಿ ವಶಕ್ಕೆ ಪಡೆದುಕೊಂಡ ಬಳಿಕವೂ ಶಬನಮ್ ಅವರು ಕೆಲಸಕ್ಕೆ ತೆರಳಿದ್ದರು.
ವ್ಯವಸ್ಥೆ ಬದಲಾದ ನಂತರವೂ ಕೆಲಸ ಮಾಡಲು ತೆರಳಿದೆ. ನನ್ನ ಕಚೇರಿಯ ಕಾರ್ಡ್ ತೋರಿಸಿದ್ದರೂ ನನಗೆ ಒಳಹೋಗುವ ಅವಕಾಶವನ್ನೇ ನೀಡಲಿಲ್ಲ. ನೀನು ಮಹಿಳೆ ಮನೆಗೆ ಹೋಗು ಎಂದು ತಾಲಿಬಾನ್ ಅಧಿಕಾರಿಗಳು ಬೆದರಿಕೆ ಹಾಕಿದ್ದಾರೆ ಎಂದು ಶಬನಮ್ ವಿಡಿಯೋದಲ್ಲಿ ಹೇಳಿದ್ದಾರೆ.ಅಲ್ಲದೆ ನೆರವಾಗಿ ಎಂದು ಮನವಿ ಮಾಡಿದ್ದಾರೆ.

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement