ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಅಡಿಯಲ್ಲಿ ಮಹಿಳೆಯರಿಗೆ ಶರಿಯಾ ಕಾನೂನಿನ ಅರ್ಥವೇನು? ಇಲ್ಲಿದೆ ಸಂಕ್ಷಿಪ್ತ ಮಾಹಿತಿ

ಶರಿಯಾ ಕಾನೂನಿನ ಅಡಿಯಲ್ಲಿ ಅಫ್ಘಾನಿಸ್ತಾನದಲ್ಲಿ ಮಹಿಳೆಯರು ತಮ್ಮ ಹಕ್ಕುಗಳನ್ನು ಅನುಭವಿಸುತ್ತಾರೆ ಎಂದು ತಾಲಿಬಾನ್ ಹೇಳಿದೆ. ಶರಿಯಾ ಇಸ್ಲಾಂನ ಕಾನೂನು ವ್ಯವಸ್ಥೆಯಾಗಿದೆ. ಆದರೆ ತಾಲಿಬಾನ್‌ಗಳು ಶರಿಯಾ ಕಾನೂನಿಗೆ ತಮ್ಮದೇ ಆದ ವ್ಯಾಖ್ಯಾನವನ್ನು ಹೊಂದಿದ್ದಾರೆ.ಅದು ಉಳಿದ ಇಸ್ಲಾಂ ದೇಶಗಳಿಗಿಂತ ಭಿನ್ನವಾಗಿದೆ ಎಂದು ಹೇಳಲಾಗಿದೆ.

ತಾಲಿಬಾನ್ ತಮ್ಮನ್ನು ಹೆಚ್ಚು ಸುಧಾರಣಾವಾದಿ ಶಕ್ತಿಯೆಂದು ತೋರಿಸಲು ಪ್ರಯತ್ನಿಸಿದೆ. ಅವರು ಮಹಿಳೆಯರ ಹಕ್ಕುಗಳನ್ನು ಗೌರವಿಸುವ ಮತ್ತು ಅವರ ವಿರುದ್ಧ ಹೋರಾಡಿದವರನ್ನು ಕ್ಷಮಿಸುವ ಭರವಸೆ ನೀಡಿದ್ದಾರೆ.
ತಾಲಿಬಾನ್ ವಕ್ತಾರ ಸುಹೇಲ್ ಶಾಹೀನ್ ಅವರು ಸ್ಕೈ ನ್ಯೂಸ್‌ಗೆ ನೀಡಿದ ಸಂದರ್ಶನದಲ್ಲಿ ಅಫ್ಘಾನಿಸ್ತಾನದಲ್ಲಿ ಮಹಿಳೆಯರಿಗೆ ಕೆಲಸ ಮಾಡುವ ಮತ್ತು ವಿಶ್ವವಿದ್ಯಾಲಯದ ಹಂತದವರೆಗೆ ಶಿಕ್ಷಣ ಪಡೆಯುವ ಹಕ್ಕನ್ನು ಹೊಂದಿರುವುದಾಗಿ ಹೇಳಿದ್ದಾರೆ.
ಆದಾಗ್ಯೂ, ಗುಂಪು ತನ್ನ ದೃಷ್ಟಿಕೋನವನ್ನು ಬದಲಾಯಿಸಿದೆ ಎಂದು ಹಲವರು ಅನುಮಾನಿಸುತ್ತಾರೆ ಮತ್ತು ಮುಂದೆ ಏನಾಗುತ್ತದೆ ಎಂಬುದನ್ನು ನೋಡಲು ಇದು ಕೇವಲ ಪರಿಸ್ಥಿತಿಯ ವೀಕ್ಷಣೆಯ ಆಟವಾಗಿದೆ ಅಷ್ಟೆ ಎಂದು ಹೇಳುತ್ತಾರೆ.

ತಾಲಿಬಾನ್ ಅಫ್ಘಾನಿಸ್ತಾನದಲ್ಲಿ ಶರಿಯಾ ಕಾನೂನನ್ನು ಜಾರಿಗೊಳಿಸಲಿದೆ ಎಂದು ಹೇಳಿದೆ. ಅಫ್ಘಾನ್ ಮಹಿಳೆಯರು ಕತ್ತಲೆಯ ಅವಧಿಗೆ ಮರಳಲು ಏಕೆ ಹೆದರುತ್ತಾರೆ?
ಧಾರ್ಮಿಕ ಸರ್ವಾಧಿಕಾರವನ್ನು ಜಾರಿಗೊಳಿಸಲು ಸಾರ್ವಜನಿಕ ಮರಣದಂಡನೆಗಳು, ಕಲ್ಲೆಸೆತಗಳು, ಚಾಟಿಗಳು ಮತ್ತು ಇತರ ಕ್ರೂರ ತಂತ್ರಗಳು- ಇವು ಮಧ್ಯಕಾಲೀನ ಯುಗವನ್ನು ಚಿತ್ರಿಸುವ ವಿವರಣೆಯಲ್ಲ. ಅಫ್ಘಾನಿಸ್ತಾನದಲ್ಲಿ ತಾಲಿಬಾನ್‌ನ ಐದು ವರ್ಷಗಳ ಆಡಳಿತದ ಕೆಲವು ದೌರ್ಜನ್ಯಗಳು.
ಸುಮಾರು 20 ವರ್ಷಗಳ ಹಿಂದೆ, ತಾಲಿಬಾನ್‌ಗಳು ಅಫ್ಘಾನಿಸ್ತಾನವನ್ನು ಆಳ್ವಿಕೆ ನಡೆಸಿದಾಗ, ಅಂದರೆ ಅಮೆರಿಕ ನೇತೃತ್ವದ ಪಡೆಗಳಿಂದ ಹೊರಹಾಕಲ್ಪಡುವ ಮೊದಲು ತನ್ನ ಆಡಳಿತದಲ್ಲಿ ತಾಲಿಬಾನಿಗಳು ಅಫ್ಘಾನ್ ಪ್ರಜೆಗಳ ಮೇಲೆ ಷರಿಯಾ ಕಾನೂನನ್ನು ಹೇರಿದ್ದರು.

ತಾಲೀಬಾನಿಗಳ ಶರಿಯಾ
ತಾಲಿಬಾನ್ ಆಳ್ವಿಕೆಯಲ್ಲಿ ಮಹಿಳೆಯರಿಗೆ ಶರಿಯಾ ಕಾನೂನು ಎಂದರೆ ಏನು..? ಹಿಂದಿನ ತಾಲಿಬಾನಿಗಳ ಆಳ್ವಿಕೆಯಲ್ಲಿ ಮಹಿಳೆಯರ ಸ್ಥಿತಿ ಹೇಗಿತ್ತು ಎಂಬುದರ ಕುರಿತು ಸಂಕ್ಷಿಪ್ತ ಮಾಹಿತಿ ಇಲ್ಲಿದೆ:

ಪ್ರಮುಖ ಸುದ್ದಿ :-   ಕೋಟಿಗಟ್ಟಲೆ ಬೆಲೆಗೆ ಮಾರಾಟವಾಗಿ ನೂತನ ದಾಖಲೆ ನಿರ್ಮಿಸಿದ ಭಾರತದ ಮೂಲದ ಈ ತಳಿಯ ಹಸು..! ಬೆಲೆ ಕೇಳಿದ್ರೆ ದಂಗಾಗ್ತೀರಾ...!!

ಮಹಿಳೆಯರು ಮಾರುಕಟ್ಟೆ ಪ್ರದೇಶಗಳಿಗೆ ಹೋಗಬಹುದೇ?
ಆದರೆ ಅವರ ಹಿಂದಿನ ಆಳ್ವಿಕೆಯಲ್ಲಿ, ತಾಲಿಬಾನ್ ಮಹಿಳೆಯು ಹೊರಗೆ ಹೋದಾಗ ಒಬ್ಬ ಪುರುಷ ಕುಟುಂಬದ ಸದಸ್ಯರು (ಮಗು ಅಥವಾ ವಯಸ್ಕ) ಜೊತೆಗಿರಬೇಕು ಎಂದು ಷರತ್ತು ವಿಧಿಸಲಾಗಿತ್ತು.

ಮಹಿಳೆಯರು ಸ್ನೇಹಿತರೊಂದಿಗೆ ಸುತ್ತಾಡಬಹುದೇ?
ತಾಲಿಬಾನ್ ಈ ಹಿಂದೆ ಪರಿಣಾಮಕಾರಿಯಾಗಿ ಮಹಿಳೆಯರನ್ನು ಗೃಹಬಂಧನದಲ್ಲಿರಿಸಿ ಮನೆಯ ಹೊರಗೆ ಸ್ನೇಹಿತರೊಂದಿಗೆ ಸುತ್ತಾಡುವುದನ್ನು ನಿಷೇಧಿಸಿತ್ತು

ಮಹಿಳೆಯರು ಪುರುಷ ಸ್ನೇಹಿತರನ್ನು ಭೇಟಿ ಮಾಡಬಹುದೇ?
12 ವರ್ಷಕ್ಕಿಂತ ಮೇಲ್ಪಟ್ಟ ಹುಡುಗರು ಅಥವಾ ಕುಟುಂಬದವರಲ್ಲದ ಪುರುಷರೊಂದಿಗೆ ಸಂವಹನ ನಡೆಸಲು ಮಹಿಳೆಯರಿಗೆ ತಾಲಿಬಾನ್‌ ಆಡಳಿತದಲ್ಲಿ ಅವಕಾಶವಿಲ್ಲ.

ಮಹಿಳೆಯರು ಶಿಕ್ಷಣ ಪಡೆಯಬಹುದೇ?
ಮಹಿಳೆಯರು ಶಿಕ್ಷಣವನ್ನು ಪಡೆಯಬಹುದು ಆದರೆ ಹುಡುಗರು ಅಥವಾ ಪುರುಷರು ಕೂಡ ಓದುತ್ತಿರುವ ಸಾಮಾನ್ಯ ಶಾಲೆ, ಕಾಲೇಜು ಅಥವಾ ಮದರಸಾಗಳಲ್ಲಿ ಅಲ್ಲ. ಅವರು ತಮಗೇ ಮೀಲಿರುವ ಪ್ರತ್ಯೇಕ ಶಾಲೆಯಲ್ಲಿಯೇ ಓದಬೇಕು.

ಮಹಿಳೆಯರು ಮೇಕಪ್ ಮಾಡಬಹುದೇ?
ತಾಲಿಬಾನಿಗಳ ಹಿಂದಿನ ಆಳ್ವಿಕೆಯಲ್ಲಿ, ತಾಲಿಬಾನ್ ಮಹಿಳೆಯರಿಂದ ನೇಲ್ ಪಾಲಿಶ್ ಸೇರಿದಂತೆ ಮೇಕ್ಅಪ್ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಿತ್ತು.

ಮಹಿಳೆಯರು ಸಂಗೀತ  ಕೇಳಬಹುದೇ ಮತ್ತು ನೃತ್ಯವನ್ನುಮಾಡಬುದೇ?
ಷರಿಯಾ ಕಾನೂನಿನ ಪ್ರಕಾರ ಸಂಗೀತ ಕಾನೂನುಬಾಹಿರ. ಪಾರ್ಟಿಗಳಲ್ಲಿ ಸಂಗೀತ ನುಡಿಸುವ ಅಥವಾ ಟ್ಯೂನ್ ನಲ್ಲಿ ನೃತ್ಯ ಮಾಡಿದವರನ್ನು ತಾಲಿಬಾನ್ ಕಠಿಣವಾಗಿ ಶಿಕ್ಷಿಸಿತ್ತು.

ಮಹಿಳೆಯರು ಕಚೇರಿಗಳಲ್ಲಿ ಕೆಲಸ ಮಾಡಬಹುದೇ?
ಮಹಿಳೆಯರಿಗೆ ಕೆಲಸ ಮಾಡಲು ಅವಕಾಶ ನೀಡಲಾಗುವುದು ಎಂದು ತಾಲಿಬಾನ್ ಹೇಳಿದೆ. ಆದರೆ ಅಫ್ಘಾನಿಸ್ತಾನದಿಂದ ಬಂದ ವರದಿಗಳು ಬ್ಯಾಂಕರ್‌ಗಳು ಮತ್ತು ಸಾರ್ವಜನಿಕ ಕಚೇರಿಗಳ ಉದ್ಯೋಗಿಗಳನ್ನು ತಾಲಿಬಾನ್‌ಗಳು ಮನೆಗೆ ಹೋಗುವಾಗ ದಾರಿಯಲ್ಲಿ ಕರೆದೊಯ್ದಿದ್ದಾರೆ. ಅವರ ಪುರುಷ ಸಂಬಂಧಿಗಳು ತಮ್ಮ ಸ್ಥಳದಲ್ಲಿ ಕೆಲಸ ಮಾಡಲು ಪ್ರಾರಂಭಿಸಬಹುದು ಎಂದು ಅವರಿಗೆ ತಿಳಿಸಲಾಯಿತು.

ಪ್ರಮುಖ ಸುದ್ದಿ :-   ಕೋಟಿಗಟ್ಟಲೆ ಬೆಲೆಗೆ ಮಾರಾಟವಾಗಿ ನೂತನ ದಾಖಲೆ ನಿರ್ಮಿಸಿದ ಭಾರತದ ಮೂಲದ ಈ ತಳಿಯ ಹಸು..! ಬೆಲೆ ಕೇಳಿದ್ರೆ ದಂಗಾಗ್ತೀರಾ...!!

ಬುರ್ಖಾ ಧರಿಸುವುದು ಕಡ್ಡಾಯವೇ?
ಹೌದು. ಶರಿಯಾ ಕಾನೂನಿನ ಅಡಿಯಲ್ಲಿ ಸೌಂದರ್ಯದ ಪ್ರದರ್ಶನವನ್ನು ಅನುಮತಿಸಲಾಗುವುದಿಲ್ಲ. ತಾಲಿಬಾನ್ ಎಂಟು ವರ್ಷಕ್ಕಿಂತ ಮೇಲ್ಪಟ್ಟ ಹುಡುಗಿಯರು ಕುಟುಂಬದ ಪುರುಷ ಸದಸ್ಯರ ಜೊತೆಗಿರುವಾಗ ಅಥವಾ ಅವರು ಮನೆಯಲ್ಲಿ ಹೊರಗಿನವರೊಂದಿಗೆ ಸಂವಹನ ನಡೆಸುವಾಗ ಬುರ್ಖಾ ಧರಿಸಬೇಕು.

ಮಹಿಳೆಯರು ಹೇಗೆ ಮಾತನಾಡಬೇಕು?
ಹಿಂದಿನ ತಾಲಿಬಾನ್ ಆಡಳಿತಾವಧಿಯಲ್ಲಿ, ಮಹಿಳೆಯರು ಕೂಟದಲ್ಲಿ ಅಥವಾ ಸಾರ್ವಜನಿಕವಾಗಿ ಅಪರಿಚಿತರಿಗೆ ಕೇಳಿಸದ ಧ್ವನಿಯಲ್ಲಿ ಮಾತನಾಡಬೇಕು ಎಂದು ಸೂಚಿಸಲಾಗಿತ್ತು.

ಮಹಿಳೆಯರು ಹೈ ಹೀಲ್ಸ್ ಧರಿಸಬಹುದೇ?
ಎತ್ತರದ ಹಿಮ್ಮಡಿಯ ಪಾದರಕ್ಷೆಗಳನ್ನು ಧರಿಸುವುದನ್ನು ತಾಲಿಬಾನ್ ನಿಷೇಧಿಸಿದೆ, ಯಾಕೆಂದರೆ ಹೆಂಗಸರು ಯಾವ ಹೆಜ್ಜೆಯನ್ನೂ ಪುರುಷರಿಗೆ ಕೇಳಬಾರದ ರೀತಿಯಲ್ಲಿ ನಡೆಯಬೇಕು ಎಂದು ಷರತ್ತು ವಿಧಿಸಿತ್ತು.

ಮಹಿಳೆಯರು ಬಾಲ್ಕನಿಗಳಲ್ಲಿ ಕುಳಿತುಕೊಳ್ಳಬಹುದೇ?
ತಾಲಿಬಾನ್ ಆಳ್ವಿಕೆಯಲ್ಲಿ, ಮಹಿಳೆಯರನ್ನು ತಮ್ಮ ಮನೆಗಳ ಬಾಲ್ಕನಿಗಳಲ್ಲಿ ಕುಳಿತುಕೊಳ್ಳಲು ಅನುಮತಿಸಲಿಲ್ಲ.

ಮಹಿಳೆಯರು ಯಾವುದೇ ರೀತಿಯ ಮಾಡೆಲಿಂಗ್ ಮಾಡಬಹುದೇ?
ಮಾಡೆಲಿಂಗ್‌ ದೂರವಾಯಿತು. ಪತ್ರಿಕೆಗಳು, ಪುಸ್ತಕಗಳು ಅಥವಾ ಪೋಸ್ಟರ್‌ಗಳು ಸೇರಿದಂತೆ ಎಲ್ಲಿಯಾದರೂ ಮಹಿಳೆಯರ ಚಿತ್ರಗಳನ್ನು ಚಿತ್ರೀಕರಿಸುವುದು ಅಥವಾ ಪ್ರದರ್ಶಿಸುವುದನ್ನು ತಾಲಿಬಾನ್ ಆಳ್ವಿಕೆಯಲ್ಲಿ ಸಂಪೂರ್ಣವಾಗಿ ನಿಷೇಧಿಸಲಾಗಿದೆ.

ಮಹಿಳೆಯರು ಶರಿಯಾ ಕಾನೂನನ್ನು ಉಲ್ಲಂಘಿಸಿದರೆ ಏನಾಗಬಹುದು?
ಶರಿಯಾ ಕಾನೂನಿನ ಉಲ್ಲಂಘನೆಗಾಗಿ ತಾಲಿಬಾನ್‌ಗಳು ಕಠೀಣ ಶಿಕ್ಷೆಗಳನ್ನು ನೀಡುತ್ತಾರೆ. ಹಿಂದಿನ ನಿಯಮದಲ್ಲಿ ಮಹಿಳೆಯರಿಗೆ ಶರಿಯಾ ಕಾನೂನಿನ ಅಡಿಯಲ್ಲಿ ವಿವಿಧ ಅಪರಾಧಗಳಿಗಾಗಿ ಸಾರ್ವಜನಿಕ ಅವಮಾನ, ಚಾಡಿ ಮತ್ತು ಸಾಯುವ ವರೆಗೆ ಕಲ್ಲೆಸೆಯುವ ಶಿಕ್ಷೆ ವಿಧಿಸಲಾಯಿತು.

5 / 5. 3

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement