ಇದು ಸಂಕಷ್ಟದ ಸಮಯ, ನಿಮ್ಮ ಗಡಿಗಳನ್ನು ಮುಕ್ತವಾಗಿರಿಸಿ: ಅಫಘಾನಿಸ್ತಾನದ ಪಕ್ಕದ ರಾಷ್ಟ್ರಗಳಿಗೆ ವಿಶ್ವಸಂಸ್ಥೆ ಕರೆ

ನವದೆಹಲಿ: ಅಫಘಾನಿಸ್ತಾನದಲ್ಲಿ ಸಂಕಷ್ಟದ ಸಮಯ, ಹೀಗಾಗಿ ನಿಮ್ಮ ಗಡಿಗಳನ್ನು ಮುಕ್ತವಾಗಿಡಿ ಎಂದು ಅಫಘಾನಿಸ್ತಾನದ ನೆರೆರಾಷ್ಟ್ರಗಳಿಗೆ ವಿಶ್ವಸಂಸ್ಥೆ ಕರೆ ನೀಡಿದೆ.
ಸದ್ಯ, ಅಫಘಾನಿಸ್ತಾನದಲ್ಲಿ ಅಪಾಯದಲ್ಲಿರುವವರಿಗೆ ಯಾವುದೇ ದಾರಿಯಿಲ್ಲಎಂದು ಹೇಳಿರುವ ವಿಶ್ವಸಂಸ್ಥೆಯ ನಿರಾಶ್ರಿತರ ಮಾನವ ವಕ್ತಾರ ಶಬಿಯಾ ಮಂಟೂ, ಅಫ್ಘಾನಿಸ್ತಾನದಲ್ಲಿ ಉಲ್ಬಣಗೊಳ್ಳುತ್ತಿರುವ ಪರಿಸ್ಥಿತಿಯಲ್ಲಿ ನಾಗರಿಕರು, ವಿಶೇಷವಾಗಿ ಮಹಿಳೆಯರು ಮತ್ತು ಹುಡುಗಿಯರ ವಿರುದ್ಧ ಮಾನವ ಹಕ್ಕುಗಳ ಉಲ್ಲಂಘನೆಯ ಅಪಾಯದ ಬಗ್ಗೆ ತೀವ್ರ ಆತಂಕ ವ್ಯಕ್ತಪಡಿಸಿದ್ದಾರೆ.
ಕಾಬೂಲ್ ವಿಮಾನ ನಿಲ್ದಾಣದ ಹೊರಗೆ ಜನಸಂದಣಿ ಮತ್ತು ರನ್ ವೇನಲ್ಲಿ ವಿಮಾನಗಳಲ್ಲಿ ನೇತಾಡುತ್ತಿರುವ ಹಾಗೂ ಅದಕ್ಕೆ ಅಂಟಿಕೊಳ್ಳುತ್ತಿರುವ ವ್ಯಕ್ತಿಗಳ ವೀಡಿಯೋ ತುಣುಕನ್ನು ಪ್ರಸ್ತಾಪಿಸಿರುವ ಶಬಿಯಾ ಮಂಟೂ, ಅಫ್ಘಾನಿಸ್ತಾನ ತೊರೆಯಲು ಸಾಧ್ಯವಾಗದೆ ಇರುವವರನ್ನು ಮರೆಯಲು ಸಾಧ್ಯವಿಲ್ಲ. ಈ ಸ್ಥಳಾಂತರಿಸುವಿಕೆಗಳು ಅವರ ಜೀವರಕ್ಷಕವಾಗಿವೆ ಹಾಗೂ ಅವರ ಪಾಲಿಗೆ ಅವುಗಳು ನಿರ್ಣಾಯಕವಾಗಿವೆ. ಅವರಿಗೆ ಅವುಗಳ ಅಗತ್ಯವಿದೆ. ಇದಕ್ಕಾಗಿ ಅವರಿಗೆ ಅಂತಾರಾಷ್ಟ್ರೀಯ ಸಹಕಾರದ ಅಗತ್ಯವಿದೆ ಎಂದು ಹೇಳಿದ್ದಾರೆ.
ಈ ವರ್ಷದ ಆರಂಭದಿಂದಲೂ, ಯುಎನ್‍ಹೆಚ್‍ಸಿಆರ್ ದೇಶದ 230,000 ಜನರಿಗೆ ತುರ್ತು ಸಹಾಯ ಒದಗಿಸಿದೆ. ಇದರಲ್ಲಿ ನಗದು ನೆರವು, ನೈರ್ಮಲ್ಯ ಬೆಂಬಲ ಮತ್ತು ಇತರ ಪರಿಹಾರ ವಸ್ತುಗಳು ಸೇರಿವೆ. ಸ್ಥಳಾಂತರಗೊಂಡ ಸುಮಾರು ಅರ್ಧ ಮಿಲಿಯನ್ ಆಫ್ಘನ್ನರಿಗೆ ಅಗತ್ಯಗಳ ಮೌಲ್ಯಮಾಪನಗಳು ನಡೆಯುತ್ತಿವೆ. ಅವರಲ್ಲಿ 80 ಪ್ರತಿಶತ ಮಹಿಳೆಯರು ಮತ್ತು ಮಕ್ಕಳು ಎಂದು ವಿಶ್ವಸಂಸ್ಥೆ ಹೇಳಿದೆ.

ಪ್ರಮುಖ ಸುದ್ದಿ :-   ಅಪರೂಪದ ಮದುವೆ; 2ನೇ ವಿಶ್ವ ಮಹಾಯುದ್ಧದ ಸೇನಾನಿ, 100 ವರ್ಷದ ವ್ಯಕ್ತಿಯೇ ಮದುವೆ ಗಂಡು ....ವಧುವಿಗೆ 96 ವರ್ಷ...!

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement