ದೇಶದ ಮೊದಲ ಗಾಳಿ ಶುದ್ಧೀಕರಿಸುವ ಸ್ಮಾಗ್ ಟವರ್ ದೆಹಲಿಯಲ್ಲಿ ಉದ್ಘಾಟನೆ..ಅದರಿಂದಾಗುವ ಪ್ರಯೋಜನಗಳೇನು..?

ನವದೆಹಲಿ: ದೆಹಲಿಯಲ್ಲಿ ಗಾಳಿಯ ಗುಣಮಟ್ಟವನ್ನು ಸುಧಾರಿಸುವ ಉದ್ದೇಶದಿಂದ ನಿರ್ಮಿಸಲಾಗಿರುವ ದೇಶದ ಮೊದಲ ಸ್ಮಾಗ್ ಟವರ್( ಹೊಂಜು ಗೋಪುರ)ಅನ್ನು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಸೋಮವಾರ ಉದ್ಘಾಟಿಸಿದರು.
ಈ ಟವರ್ ಸುಮಾರು 1 ಕಿಮೀ ವ್ಯಾಪ್ತಿಯಲ್ಲಿ ಪ್ರತಿ ಸೆಕೆಂಡಿಗೆ 1 ಸಾವಿರ ಘನ ಮೀಟರ್‌ನಷ್ಟು ಗಾಳಿಯನ್ನು ಶುದ್ಧೀಕರಿಸಲಿದೆ. ಈ ಗಾಳಿ ಶುದ್ಧೀಕರಣ ಯಂತ್ರವನ್ನು ಪ್ರಾಯೋಗಿಕವಾಗಿ ಸ್ಥಾಪಿಸಲಾಗಿದೆ.
ಗಾಳಿ ಶುದ್ಧೀಕರಣ ಯಂತ್ರದ ಪರಿಣಾಮಕಾರಿತ್ವವನ್ನು ಪರಿಶೀಲಿಸಲು ಎರಡು ವರ್ಷಗಳ ಪ್ರಾಯೋಗಿಕ ಅಧ್ಯಯನವನ್ನು ನಡೆಸಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದರು.
ಈ ಟವರ್ ಕಾರ್ಯಕ್ಷಮತೆ ಮೇಲೆ ನಿಗಾ ಇಡಲಿ ನಿಯಂತ್ರಣ ಕೊಠಡಿ ಸ್ಥಾಪಿಸಲಾಗಿದೆ. ಒಂದು ತಿಂಗಳೊಳಗೆ ಆರಂಭಿಕ ಕಾರ್ಯನಿರ್ವಹಣೆ ಮಾಹಿತಿ ಲಭ್ಯವಾಗಲಿದೆ. ಇದು ಯಶಸ್ವಿಯಾದರೆ, ದೆಹಲಿಯ ಉಳಿದ ಭಾಗಗಳಲ್ಲೂ ಸ್ಮಾಗ್ ಟವರ್ ಸ್ಥಾಪಿಸಲಾಗುವುದು ಎಂದು ತಿಳಿಸಲಾಗಿದೆ.
ದೆಹಲಿ ಹಾಗೂ ಅದರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮಾಲಿನ್ಯದಿಂದಾಗಿ ತುರ್ತು ಪರಿಸ್ಥಿತಿ ಇದೆ. ಎಲ್ಲರಿಗೂ ಉಸಿರಾಟದ ತೊಂದರೆ ಕಾಣಿಸಿಕೊಳ್ಳುತ್ತಿದೆ.

ಏನಿದು ಸ್ಮಾಗ್‌ ಟವರ್‌.- ಕಾರ್ಯನಿರ್ವಹಣೆ ಹೇಗೆ..?
ಸ್ಮಾಗ್ ಟವರ್ ಎಂಬುದು ಗಾಳಿ ಶುದ್ಧೀಕರಣ ಘಟಕವಾಗಿದೆ. ಇದು ಕಲುಷಿತ ಗಾಳಿ ಅಥವಾ ಅದರ ಕಣಗಳನ್ನು ಸುತ್ತಮುತ್ತಲಿನಿಂದ ಹೀರಿಕೊಳ್ಳುತ್ತದೆ. ನಂತರ ಪರಿಸರಕ್ಕೆ ಶುದ್ಧ ಗಾಳಿಯನ್ನು ಬಿಡುಗಡೆ ಮಾಡುತ್ತದೆ. ಇದು ವಿದ್ಯುತ್ ಮೂಲಕ ಕಾರ್ಯನಿರ್ವಹಿಸುತ್ತದೆ ಅಥವಾ ಸೌರಶಕ್ತಿಯಿಂದಲೂ ನಡೆಸಬಹುದು.
ಇದು ಗಾಳಿ ಶುದ್ಧೀಕರಣ ಘಟಕದ ಸಾಮರ್ಥ್ಯದ ಮೇಲೆ ಅವಲಂಬಿತವಾಗಿದೆ. 2016ರಲ್ಲಿ ಚೀನಾದಲ್ಲಿ ಅಳವಡಿಸಲಾದ ಏರ್ ಪ್ಯೂರುಫೈಯರ್‌ಗಳು ಏಳು ಮೀಟರ್ ಉದ್ದವಿತ್ತು. ಇದು ಒಂದು ಗಂಟೆಯಲ್ಲಿ 29,000 ಎಂ3 ಗಾಳಿಯನ್ನು ಸ್ವಚ್ಛಗೊಳಿಸುತ್ತಿತ್ತು ಎಂದು ಹೇಳಲಾಗಿದೆ.
ನಂತರ 100 ಮೀಟರ್ ಘಟಕವನ್ನು ಚೀನಾದಲ್ಲಿ ಸ್ಥಾಪಿಸಲಾಯಿತು. ಇದು ಪ್ರತಿದಿನ ಬೇಸಿಗೆಯಲ್ಲಿ 16 ಮಿಲಿಯನ್ ಎಂ3 ಗಾಳಿಯನ್ನು ಸ್ವಚ್ಛಗೊಳಿಸುತ್ತಿದೆ ಎಂದು ಹೇಳಲಾಗಿದೆ.
ದೆಹಲಿ ಮೂಲದ ಸ್ಮಾರ್ಟಪ್ 20 ಅಡಿ ಎತ್ತರದ ಏರ್ ಪ್ಯೂರಿಫೈಯರ್ ತಯಾರಿಸಿದೆ. ಫಾಗ್ ಟವರ್‌ಗಳು ದೊಡ್ಡ ಪ್ರಮಾಣದಲ್ಲಿ ಶುದ್ಧೀಕಾರಕಗಳಾಗಿ ಕೆಲಸ ಮಾಡುವ ರೀತಿಯಲ್ಲಿ ವಿನ್ಯಾಸ ಮಾಡಲಾಗಿದೆ. ತಳದಲ್ಲಿ ಏರ್ ಫಿಲ್ಟರ್‌ಗಳು ಹಾಗೂ ಫ್ಯಾನ್‌ಗಳನ್ನು ಅಳವಡಿಸಲಾಗಿದೆ.
ಕಲುಷಿತ ಗಾಳಿಯು ಘಟಕದೊಳಗೆ ಪ್ರವೇಶಿಸಿ ನಂತರ ಅದನ್ನು ವಾತಾವರಣಕ್ಕೆ ಪುನಃ ಪ್ರಸಾರ ಮಾಡುವ ಮೊದಲು ಅದನ್ನು ಬಹು ಪದರಗಳಿಂದ ಶುದ್ಧೀಕರಿಸಲಾಗುತ್ತದೆ.
ಘಟಕವನ್ನು 20 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿದ್ದು, ಮಳೆಗಾಲದ ಬಳಿಕ ಇದು ಸಂಪೂರ್ಣ ಸಾಮರ್ಥ್ಯದೊಂದಿಗೆ ಕಾರ್ಯ ನಿರ್ವಹಿಸುತ್ತದೆ.
.ಟವರ್​​ನ ಕೆಳಭಾಗದಲ್ಲಿ ಒಟ್ಟು 40 ಫ್ಯಾನ್ ಗಳನ್ನು ಅಳವಡಿಸಲಾಗಿದೆ. ಗೋಪುರದ ಮೇಲ್ಭಾಗದಿಂದ ಗಾಳಿಯನ್ನು ಹೀರಿಕೊಳ್ಳಲಾಗುತ್ತದೆ, ಫಿಲ್ಟರ್ ಮಾಡಿ ಮತ್ತು ಕೆಳಭಾಗದಲ್ಲಿರುವ ಫ್ಯಾನ್ ಮೂಲಕ ಬಿಡುಗಡೆ ಮಾಡಲಾಗುತ್ತದೆ. ಪ್ರಾಯೋಗಿಕ ಅಧ್ಯಯನದ ಪ್ರವೃತ್ತಿಗಳು ಒಂದು ತಿಂಗಳಲ್ಲಿ ಲಭ್ಯವಾಗಬಹುದು ಎಂದು ಕೇಜ್ರಿವಾಲ್ ಹೇಳಿದ್ದಾರೆ.

ಪ್ರಮುಖ ಸುದ್ದಿ :-   ಲೋಕಸಭೆ ಚುನಾವಣೆ 2ನೇ ಹಂತದ ಮತದಾನ : ಶ್ರೀಮಂತ ಅಭ್ಯರ್ಥಿ ₹ 622 ಕೋಟಿ ಒಡೆಯ, ಅತ್ಯಂತ ಬಡ ಅಭ್ಯರ್ಥಿ ಬಳಿ ಇರುವುದು ಕೇವಲ...

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement