ಅಫಘಾನ್ ಅವಶೇಷಗಳ ನಡುವೆ ತಾಲಿಬಾನ್ ವಿರುದ್ಧ ಎತ್ತರವಾಗಿ ನಿಂತ ಪಂಜಶೀರ್‌ ಕಣಿವೆ..ಇಲ್ಲಿದೆ ಮಾಹಿತಿ

ಅಫ್ಘಾನಿಸ್ತಾನದ ಭೂಪಟವನ್ನು ನೋಡಿದರೆ, ಕಾಬೂಲ್‌ನ ಉತ್ತರಕ್ಕೆ ರಾಕೆಟ್ ಹೋಲುವ ಸರೋವರದಂತಹ ರಚನೆ ಕಾಣುತ್ತದೆ. ಇದು ಪಂಜಶೀರ್ ಕಣಿವೆ. ಈ ಸಣ್ಣ ಪ್ರಾಂತ್ಯವು ತಾಲಿಬಾನ್‌ಗಳಿಗೆ ಇನ್ನೂ ಕಂಟಕವಾಗಿದೆ. ಏಕೆಂದರೆ ಅವರು ಆಗಸ್ಟ್‌ನಲ್ಲಿ ಅಫ್ಘಾನಿಸ್ತಾನವನ್ನು ವಶಪಡಿಸಿಕೊಂಡಿದ್ದರು ಪಂಜಶೀರ್‌ ಕಣಿವೆ ಸ್ವಾಧೀನ ಪಡಿಸಿಕೊಳ್ಳುವುದು ಇನ್ನೂ ಸಾಧ್ಯವಾಗಿಲ್ಲ.
ಪಂಜಶೀರ್‌ ಎಂದರೆ ಐದು ಸಿಂಹಗಳು ಎಂದು ಅರ್ಥ, ಪಂಜಶೀರ್ ತಾಲಿಬಾನ್ ವಿರುದ್ಧ “ಪ್ರತಿರೋಧ” ಎಂದು ಕರೆಯಲ್ಪಡುವ ಆಧಾರವಾಗಿ ಹೊರಹೊಮ್ಮಿದೆ. ತಾಲಿಬಾನ್ ಪ್ರತಿರೋಧ ಗುಂಪಿನಿಂದ ಕೆಲವು ಜಿಲ್ಲೆಗಳನ್ನು ವಶಪಡಿಸಿಕೊಳ್ಳುವುದಾಗಿ ಹೇಳಿಕೊಂಡಿದೆ.
ತಾಲಿಬಾನ್‌ಗಳಿಗೆ, ಪಂಜ್‌ಶೀರ್‌ ವಶಪಡಿಸಿಕೊಳ್ಳಲು ಅಂತಿಮ ಗಡಿಯಾಗಿದೆ. ತದ್ವಿರುದ್ಧವಾಗಿ, ಪಂಜ್‌ಶೀರ್ ಎರಡನೇ ಬಾರಿಗೆ ತಾಲಿಬಾನ್‌ಗಳನ್ನು ಓಡಿಸುವ ಗುರಿಯನ್ನು ಹೊಂದಿರುವ ಪ್ರತಿರೋಧ ಪಡೆಗೆ ಲಾಂಚ್ ಪ್ಯಾಡ್ ಆಗಿದೆ.
ಪಂಜಶೀರ್ ಹಿಂದೂ ಕುಶ್ ಶ್ರೇಣಿಯಲ್ಲಿದೆ ಮತ್ತು ಇದು ಐದು ಪರ್ವತ ಶಿಖರಗಳಿಂದ ಆವೃತವಾದ ಪ್ರದೇಶದಲ್ಲಿ ಪಂಜಶೀರ್ ನದಿಯಿಂದ ಮಾಡಿದ ಕಣಿವೆಯನ್ನು ಸೂಚಿಸುತ್ತದೆ. ಇದು ಕಾಬೂಲ್‌ಗೆ ಕೇವಲ ಒಂದು ಪ್ರಮುಖ ಪ್ರವೇಶ ಅಥವಾ ನಿರ್ಗಮನ ಹೊಂದಿರುವ ಉದ್ದ ಮತ್ತು ಕಿರಿದಾದ ಕಣಿವೆ.

ತಾಲಿಬಾನಿಗಳ ವಿರೋಧಿಗಳ ಪ್ರದೇಶ..
ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ವಿರೋಧಿ ಮಿಲಿಟರಿ ಪಡೆ ರೂಪುಗೊಂಡಿದೆ. ಇದನ್ನು ಅಫ್ಘಾನಿಸ್ತಾನದ ರಾಷ್ಟ್ರೀಯ ಪ್ರತಿರೋಧ ಮುಂಭಾಗ ಎಂದು ಕರೆಯಲಾಗುತ್ತದೆ, ಇದನ್ನು ಸಾಮಾನ್ಯವಾಗಿ NRF ಅಥವಾ NRFA ಎಂದು ಕರೆಯಲಾಗುತ್ತದೆ.
ಆಗಸ್ಟ್ ಮಧ್ಯದಲ್ಲಿ ಅಫ್ಘಾನ್ ಅಧ್ಯಕ್ಷ ಅಶ್ರಫ್ ಘನಿ ದೇಶದಿಂದ ಪಲಾಯನ ಮಾಡಿದಾಗ ಈ ಪಡೆ ತಾಲಿಬಾನ್ ಅಫ್ಘಾನಿಸ್ತಾನವನ್ನು ಒಟ್ಟುಗೂಡಿಸುವುದನ್ನು ವಿರೋಧಿಸುತ್ತಿದೆ. ಅಹ್ಮದ್ ಮಸೂದ್ ನೇತೃತ್ವದಲ್ಲಿ ಪಂಜಶೀರ್ ಕಣಿವೆಯಲ್ಲಿ ತಾಲಿಬಾನ್ ವಿರೋಧಿ ಪಡೆಗಳು ಒಕ್ಕೂಟ ರಚಿಸಿಕೊಂಡಿವೆ.

ಯಾರು ಈ ಅಹ್ಮದ್ ಮಸೂದ್?
ಅಹ್ಮದ್ ಮಸೂದ್ ಸೋವಿಯತ್‌ ರಶಿಯಾ ಹಾಗೂ ತಾಲಿಬಾನಿಗಳ ಪ್ರತಿರೋಧ ನಾಯಕ ಅಹ್ಮದ್ ಶಾ ಮಸೂದ್ ಅವರ ಮಗ, 1980 ರಲ್ಲಿ ಪಾಕಿಸ್ತಾನ ಮತ್ತು ಅಮೆರಿಕ ಬೆಂಬಲಿತ ಮುಜಾಹಿದ್ದೀನ್ ಸೋವಿಯತ್ ವಿರೋಧಿ ‘ಜಿಹಾದ್’ ಸಮಯದಲ್ಲಿ ಅವರು ಖ್ಯಾತಿಯನ್ನು ಗಳಿಸಿದ್ದರು.
ಅವರು ತಿಂಗಳುಗಟ್ಟಲೆ ಗುಹೆಗಳಲ್ಲಿ ಕಳೆದರು, ಅವರ ತಂದೆ ಸೋವಿಯತ್ ಪಡೆಗಳೊಂದಿಗೆ ಹೋರಾಡುತ್ತಿದ್ದರು. ಈಗ, ತನ್ನ ಮೂವತ್ತರ ಆಸುಪಾಸಿನಲ್ಲಿ, ಅಹ್ಮದ್ ಮಸೂದ್ ಪಂಜ್‌ಶೀರ್ ಕಣಿವೆಯಲ್ಲಿ ತಾಲಿಬಾನ್ ವಿರುದ್ಧ ಹೋರಾಡುತ್ತಿರುವ ಎನ್‌ಆರ್‌ಎಫ್‌ ಮುಖ್ಯಸ್ಥನಾಗಿದ್ದಾನೆ.

ಪ್ರಮುಖ ಸುದ್ದಿ :-   ಹೆಲಿಕಾಪ್ಟರ್ ಅಪಘಾತದಲ್ಲಿ ಇರಾನ್ ಅಧ್ಯಕ್ಷ ಇಬ್ರಾಹಿಂ ರೈಸಿ, ವಿದೇಶಾಂಗ ಸಚಿವ ಸಾವು

ಅಹ್ಮದ್ ಶಾ ಮಸೂದ್ ಸೋವಿಯತ್ ವಾಪಸಾತಿಯ ನಂತರ ಅವರು ಅಫ್ಘಾನಿಸ್ತಾನದ ರಕ್ಷಣಾ ಮಂತ್ರಿಯಾಗಿ ಸೇವೆ ಸಲ್ಲಿಸಿದರು. 1990 ರ ದಶಕದಲ್ಲಿ ತಾಲಿಬಾನ್ ಉದಯವಾದ ನಂತರ, ಅಹ್ಮದ್ ಷಾ ಪಡೆಗಳು ಪಶ್ತೂನಿಯನ್ ತಾಲಿಬಾನ್‌ಗಿಂತ ಭಿನ್ನವಾಗಿ ಬಹು-ಜನಾಂಗೀಯ ಶಕ್ತಿಯಾಗಿದ್ದ ಉತ್ತರ ಒಕ್ಕೂಟದ ಬ್ಯಾನರ್ ಅಡಿಯಲ್ಲಿ ಸಂಘಟಿತವಾದವು.
ಅಮೆರಿಕ 2001 ರಲ್ಲಿ ಅಫ್ಘಾನಿಸ್ತಾನಕ್ಕೆ ಬಂದಿತು ಮತ್ತು ಉತ್ತರ ಒಕ್ಕೂಟವನ್ನು ಅನ್ನು ಬೆಂಬಲಿಸಿತು. ಆದರೆ ಆ ಹೊತ್ತಿಗೆ 48 ವರ್ಷದ ಅಹ್ಮದ್ ಶಾ ಅಲ್-ಖೈದಾ ಮತ್ತು ತಾಲಿಬಾನ್ ಕಾರ್ ಬಾಂಬ್ ಆತ್ಮಾಹುತಿ ದಾಳಿಯಲ್ಲಿ ಹತ್ಯೆಗೀಡಾದರು. ಅಮೆರಿಕದ 9/11 ದಾಳಿಗೆ ಎರಡು ದಿನಗಳ ಮೊದಲು ಇದು ಸಂಭವಿಸಿತು.

ಪಂಜಶೀರ್ ನಿವಾಸವು ಏಕೆ ಮಹತ್ವದ್ದು?
ಪಂಜ್‌ಶೀರ್ ಮಿಲಿಟರಿಗೆ ಆಕ್ರಮಣ ಮಾಡಲು ಕಷ್ಟಕರವಾದ ಭೂಪ್ರದೇಶವಾಗಿದೆ. 1990ರ ದಶಕದಲ್ಲಿ, ತಾಲಿಬಾನ್‌ಗಳು ಕಂದಹಾರ್‌ನಲ್ಲಿ ತಮ್ಮ ಬೇರುಗಳನ್ನು ಹೊಂದಿದ್ದರೂ, ಪಂಜಶೀರ್ ಕಣಿವೆಯನ್ನು ವಶಪಡಿಸಿಕೊಳ್ಳಲು ಸಾಧ್ಯವಾಗಿರಲಿಲ್ಲ.
ತಾಲಿಬಾನ್ ಅಫ್ಘಾನಿಸ್ತಾನವನ್ನು ವಶಪಡಿಸಿಕೊಂಡಾಗ, ಪಂಜಶೀರ್ ಉತ್ತರ ಒಕ್ಕೂಟದ ಭದ್ರಕೋಟೆಯಾಗಿತ್ತು. ತಾಲಿಬಾನಿಗಳಿಗೆ ತಮ್ಮ ಹಿಂದಿನ ಆಳ್ವಿಕೆಯಲ್ಲಿಯೂ ಪಂಜಶೀರ್‌ನಿಂದ ಉತ್ತರ ಒಕ್ಕೂಟವನ್ನು 2001 ರ ವರೆಗೂ ಹೊರಹಾಕಲು ಸಾಧ್ಯವಾಗಿರಲಿಲ್ಲ.
ಈಗ 20 ವರ್ಷಗಳ ನಂತರ, ಅಮೆರಿಕ ಅಫ್ಘಾನಿಸ್ತಾನದಿಂದ ಹೊರಬಂದಾಗ, ಪಂಜಶೀರ್ ಪ್ರಮುಖ ಯುದ್ಧಭೂಮಿಯಾಗಿ ಹೊರಹೊಮ್ಮಿತು. ಅಫ್ಘಾನಿಸ್ತಾನದ 34 ಪ್ರಾಂತ್ಯಗಳಲ್ಲಿ 33 ಅನ್ನು ತಾಲಿಬಾನ್ ವಶಪಡಿಸಿಕೊಂಡಿದೆ. ಪಂಜ್‌ಶೀರ್ ಪ್ರಾಂತ್ಯ ಮಾತ್ರ ಅವರ ನಿಯಂತ್ರಣದಲ್ಲಿಲ್ಲ.

ಪ್ರಮುಖ ಸುದ್ದಿ :-   ಸಿಂಗಾಪುರದಲ್ಲಿ ಮತ್ತೆ ವಿಜೃಂಭಿಸುತ್ತಿರುವ ಕೋವಿಡ್‌-19 ; 6 ದಿನಗಳಲ್ಲಿ 25,900 ಪ್ರಕರಣಗಳು ದಾಖಲು : ಮಾಸ್ಕ್‌ ಧರಿಸಲು ಶಿಫಾರಸು

ಪಂಜಶೀರ್‌ನಲ್ಲಿ ಯಾರು ಹೋರಾಡುತ್ತಿದ್ದಾರೆ?
ಪಂಜ್‌ಶಿರ್ ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ವಿರುದ್ಧದ ಪ್ರತಿರೋಧದ ಯುದ್ಧದ ಹೃದಯವಾಗಿದೆ. ಇದು ಅಹ್ಮದ್ ಮಸೂದ್ ತಾಲಿಬಾನ್ ಗೆ ಶರಣಾಗಲು ನಿರಾಕರಿಸುವುದರೊಂದಿಗೆ ಆರಂಭವಾಯಿತು.
ಅಹ್ಮದ್ ಮಸೂದ್ ಪಡೆಗಳ ಜೊತೆಗೆ, ಎನ್‌ಆರ್‌ ಎಫ್‌ ಕೂಡ ತಾಲಿಬಾನ್ ಸೇರಲು ನಿರಾಕರಿಸಿತು. ಇದು ಹಿಂದಿನ ಅಫ್ಘಾನ್ ಸೈನ್ಯದ ಸೈನಿಕರನ್ನು ಹೊಂದಿದೆ. ಅಹ್ಮದ್ ಮಸೂದ್ ಅಂತರಾಷ್ಟ್ರೀಯ ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ 12,000 ಕ್ಕಿಂತ ಹೆಚ್ಚು ಸಕ್ರಿಯ ಸೈನಿಕರು ಮತ್ತು ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳ ದಾಸ್ತಾನು ಇರುವುದಾಗಿ ಹೇಳಿಕೊಂಡಿದ್ದಾರೆ.
ಅಶ್ರಫ್ ಘನಿ ಆಫ್ಘನ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿ ದೇಶದಿಂದ ಪಲಾಯನ ಮಾಡಿದ ನಂತರ, ಉಪಾಧ್ಯಕ್ಷ ಅಮರುಲ್ಲಾ ಸಲೇಹ್ ಪಂಜಶೀರ್ ಗೆ ಧಾವಿಸಿ, ಅಹ್ಮದ್ ಮಸೂದ್ ಜೊತೆ ಸೇರಿಕೊಂಡರು. ಅವರು ತನ್ನನ್ನು ತಾನು ಅಫ್ಘಾನಿಸ್ತಾನದ “ಹಂಗಾಮಿ ಅಧ್ಯಕ್ಷ” ಎಂದು ಘೋಷಿಸಿಕೊಂಡರು. ಅವರ ನೇತೃತ್ವದಲ್ಲಿ ಅವರು ಸುಮಾರು 3,000ಕ್ಕೂ ಹೆಚ್ಚು ಪಡೆಗಳನ್ನು ಹೊಂದಿದ್ದರು ಎಂದು ವರದಿಯಾಗಿದೆ.
ಪ್ರತಿರೋಧ ಗುಂಪು ಎನ್‌ಆರ್‌ಎಫ್ ಅಫ್ಘಾನಿಸ್ತಾನದಲ್ಲಿ ಕೇಂದ್ರೀಕೃತವಲ್ಲದ ಆಡಳಿತವನ್ನು ಸ್ಥಾಪಿಸಲು ಬಯಸುತ್ತದೆ. ತಾಲಿಬಾನ್ ಜೊತೆ ಶಾಂತಿಯುತ ಮಾತುಕತೆ ಇತ್ಯರ್ಥಕ್ಕೆ ಮುಕ್ತವಾಗಿದೆ ಎಂದು ಅದು ಹೇಳಿದೆ.
ಎನ್‌ಆರ್‌ಎಫ್ ತಾಜಿಕ್ ನಾಯಕರಾದ ಅಹ್ಮದ್ ಮಸೂದ್ ಮತ್ತು ಅಮರುಲ್ಲಾ ಸಲೇಹ್ ನೇತೃತ್ವದ ಬಹು-ಜನಾಂಗೀಯ ಒಕ್ಕೂಟವಾಗಿದೆ. ಇದು ಹೊಸ ರಾಜಕೀಯ ವ್ಯವಸ್ಥೆಯ ಅಡಿಯಲ್ಲಿ ಅಲ್ಪಸಂಖ್ಯಾತರ ಹಕ್ಕುಗಳನ್ನು ರಕ್ಷಿಸಲು ಬಯಸುತ್ತದೆ. ತಾಲಿಬಾನ್‌ಗಳು ಪಶ್ತೂನ್‌ಗಳಿಂದ ಪ್ರಾಬಲ್ಯ ಹೊಂದಿದ್ದಾರೆ ಮತ್ತು ಇಸ್ಲಾಮಿಕ್ ಕಾನೂನಿನ ತಮ್ಮದೇ ಆದ ಶರಿಯಾದ ಆವೃತ್ತಿಯನ್ನು ನಂಬುತ್ತಾರೆ.

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement