ಅಫ್ಘಾನಿಸ್ತಾನ ಬಿಕ್ಕಟ್ಟು:ಟೊಲೊ ನ್ಯೂಸ್‌ ವರದಿಗಾರನ ಗನ್‌ ಪಾಯಿಂಟ್‌ನಲ್ಲಿ ಥಳಿಸಿದ ತಾಲಿಬಾನಿಗಳು, ಕ್ಯಾಮೆರಾ, ಉಪಕರಣ ಕಸಿದುಕೊಂಡರು

TOLO ನ್ಯೂಸ್ ವರದಿಗಾರ ಜಿಯಾರ್ ಯಾದ್ ಅವರ ಮೇಲೆ ಕಾಬೂಲ್‌ನಲ್ಲಿ ತಾಲಿಬಾನ್‌ಗಳು ಥಳಿಸಿದ್ದಾರೆ ಮತ್ತು ಅವರ ಕ್ಯಾಮರಾಮ್ಯಾನ್ ಅನ್ನು ತಾಲಿಬಾನ್‌ಗಳು ಹೊಡೆದಿದ್ದಾರೆ ಎಂದು ವರದಿಯಾಗಿದೆ.
ಈ ಕುರಿತು ಸ್ವತಃ ಜಿಯಾರ್‌ ಯಾದ್‌ ಅವರೇ ಟ್ವೀಟ್‌ ಮಾಡಿದ್ದಾರೆ. ಟೊಬೊ ನ್ಯೂಸ್ ವರದಿಗಾರನನ್ನು ಕಾಬೂಲ್‌ನಲ್ಲಿ ತಾಲಿಬಾನ್‌ಗಳು ಹೊಡೆದರು, ಕ್ಯಾಮೆರಾಗಳು, ತಾಂತ್ರಿಕ ಉಪಕರಣಗಳು ಮತ್ತು ನನ್ನ ವೈಯಕ್ತಿಕ ಮೊಬೈಲ್ ಫೋನ್ ಕಸಿದುಕೊಂಡಿದ್ದಾರೆ.ತಾಲಿಬಾನ್‌ಗಳು ಶಸ್ತ್ರಸಜ್ಜಿತ ಲ್ಯಾಂಡ್ ಕ್ರೂಸರ್‌ನಿಂದ ಹೊರಬಂದು ನನ್ನನ್ನು ಗನ್‌ಪಾಯಿಂಟ್‌ನಲ್ಲಿ ಹೊಡೆದಿದ್ದಾರೆ ಎಂದು ಅವರು ಹೇಳಿದ್ದಾರೆ.
ರಾಜಧಾನಿಯ ಹಾಜಿ ಯಾಕೂಬ್ ಛೇದಕದಲ್ಲಿ ಬಡತನ, ನಿರುದ್ಯೋಗದ ಬಗ್ಗೆ ಯಾದ್ ಮತ್ತು ಕ್ಯಾಮರಾಮನ್ ವರದಿ ಮಾಡುತ್ತಿದ್ದಾಗ ಈ ಘಟನೆ ನಡೆದಿದೆ ಎಂದು ಅದು ಹೇಳಿದೆ. ಟೊಲೊ ನ್ಯೂಸ್ ಅಫ್ಘಾನಿಸ್ತಾನದ ಪ್ರಮುಖ ಸುದ್ದಿ ವಾಹಿನಿಯಾಗಿದೆ.
ಈ ಹಿಂದೆ ಜುಲೈನಲ್ಲಿ, ಅಂತಾರಾಷ್ಟ್ರೀಯ ಸುದ್ದಿಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ಭಾರತೀಯ ಫೋಟೋ ಜರ್ನಲಿಸ್ಟ್ ಡ್ಯಾನಿಶ್ ಸಿದ್ದಿಕಿ ಕಂದಹಾರ್ ನಲ್ಲಿ ಕೊಲ್ಲಲ್ಪಟ್ಟರು. ಇತ್ತೀಚೆಗೆ ಅಮೆರಿಕದ ಪಡೆಗಳು ಅಫ್ಘಾನಿಸ್ತಾನದಿಂದ ಹೊರಬಂದ ನಂತರ ಸಿದ್ದಿಕಿ ಅವರು ಕಂದಹಾರ್‌ನಲ್ಲಿದ್ದರು. ವರದಿಗಳ ಪ್ರಕಾರ, ಸಿದ್ದಿಕಿ ಅಫ್ಘಾನ್ ಪಡೆಗಳೊಂದಿಗೆ ಅಡಕವಾಗಿದ್ದು ಕಂದಹಾರ್ ಪ್ರಾಂತ್ಯದ ಸ್ಪಿನ್ ಬೋಲ್ಡಾಕ್ ಜಿಲ್ಲೆಯಲ್ಲಿ ತಾಲಿಬಾನ್ ದಾಳಿಗೆ ಒಳಗಾದರು. ರಾಯಿಟರ್ಸ್ ನಲ್ಲಿ ಕೆಲಸ ಮಾಡುತ್ತಿದ್ದ ಮತ್ತು ಮುಂಬೈನಲ್ಲಿ ನೆಲೆಸಿದ್ದ ಸಿದ್ದಿಕಿ ಅವರಿಗೆ ಪ್ರತಿಷ್ಠಿತ ಪುಲಿಟ್ಜರ್ ಪ್ರಶಸ್ತಿಯನ್ನೂ ನೀಡಲಾಗಿತ್ತು.

ಪ್ರಮುಖ ಸುದ್ದಿ :-   ಅಪರೂಪದ ಮದುವೆ; 2ನೇ ವಿಶ್ವ ಮಹಾಯುದ್ಧದ ಸೇನಾನಿ, 100 ವರ್ಷದ ವ್ಯಕ್ತಿಯೇ ಮದುವೆ ಗಂಡು ....ವಧುವಿಗೆ 96 ವರ್ಷ...!

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement