ಕಾಬೂಲ್ ಅವಳಿ ಬಾಂಬ್ ಸ್ಫೋಟದಲ್ಲಿ ಸಾವಿನ ಸಂಖ್ಯೆ 103ಕ್ಕೆ ಏರಿಕೆ : ಹುಡುಕಿ,ಬೇಟೆಯಾಡಿ ಪ್ರತೀಕಾರ ತೀರಿಸಿಕೊಳ್ತೇವೆ ಎಂದು ಬಿಡೆನ್‌ ಪ್ರತಿಜ್ಞೆ

ವಾಷಿಂಗ್ಟನ್: ಕಾಬೂಲ್‌ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಗುರುವಾರ ಸಂಜೆ ಸಂಭವಿಸಿದ ಆತ್ಮಾಹುತಿ ಬಾಂಬ್‌ ಸ್ಫೋಟಕ್ಕೆ ಪ್ರತಿಕ್ರಿಯೆ ನೀಡಿರುವ ಅಮೆರಿಕ ಅಧ್ಯಕ್ಷ ಜೋ ಬಿಡೆನ್, “ಈ ಸಾವುಗಳಿಗೆ ನಾವು ಪ್ರತೀಕಾರ ತೀರಿಸಿಕೊಳ್ಳುತ್ತೇವೆ’ ಎಂದು ಪ್ರತಿಜ್ಞೆ ಮಾಡಿದ್ದಾರೆ.
‘ದಾಳಿ ನಡೆಸಿರುವ ಉಗ್ರರಿಗೆ ತಕ್ಕ ಉತ್ತರ ನೀಡುತ್ತೇವೆ, ಅವರನ್ನು ಪತ್ತೆ ಹಚ್ಚಿ ಬೇಟೆಯಾಡುತ್ತೇವೆ’ ಎಂದು ಶ್ವೇತಭವನದಲ್ಲಿ ಪ್ರತಿಜ್ಞೆ ಮಾಡಿದ್ದಾರೆ.

ದಾಳಿ ಸಂಬಂಧ ಶ್ವೇತಭವನದಲ್ಲಿ ಮಾತನಾಡಿದ ಜೋ ಬಿಡೆನ್, ಐಎಸ್‌ ಸಂಘಟನೆ ಈ ಬಾಂಬ್‌ ದಾಳಿ ಹಿಂದಿದೆ ಎಂದು ದೃಢಪಟ್ಟಿದೆ. ನಾವು ಇದನ್ನು ಮರೆಯುವುದಿಲ್ಲ, ನಿಮ್ಮನ್ನು ಬೇಟೆಯಾಡಿ ಕೊಲ್ಲುತ್ತೇವೆ. ಇದಕ್ಕೆ ತಕ್ಕ ಬೆಲೆ ತೆರುವಂತೆ ಮಾಡುತ್ತೇವೆ’ ಎಂದು ಭಾವನಾತ್ಮಕವಾಗಿ ಮಾತನಾಡಿದ್ದಾರೆ.
ದಾಳಿ ನಡೆಸಿದವರು ಯಾರೆಂದು ನಮಗೆ ತಿಳಿದಿದೆ. ಅದು ಖಚಿತವಾದ ಬಳಿಕ ನಾವು ಅವರನ್ನು ಬೇಟೆಯಾಡದೇ ಬಿಡುವುದಿಲ್ಲ’ ಎಂದು ಹೇಳಿದ್ದಾರೆ. ಈ ದಾಳಿ ಹೊರತಾಗಿಯೂ ಅಫ್ಘಾನಿಸ್ತಾನದಿಂದ ಅಮೆರಿಕದ ನಾಗರಿಕರು ಮತ್ತು ಇತರರ ಸ್ಥಳಾಂತರ ಪ್ರಕ್ರಿಯೆಯನ್ನು ಪೂರ್ಣಗೊಳಿಸುತ್ತೇವೆ’ ಎಂದು ಭರವಸೆ ನೀಡಿದ್ದಾರೆ.

ವಾಷಿಂಗ್ಟನ್: ಕಾಬೂಲ್ ವಿಮಾನ ನಿಲ್ದಾಣದಲ್ಲಿ ಅವಳಿ ಬಾಂಬ್ ಸ್ಫೋಟಕ್ಕೆ ಪ್ರತೀಕಾರ ತೀರಿಸಿಕೊಳ್ಳುವುದಾಗಿ ಅಮೆರಿಕ ಅಧ್ಯಕ್ಷ ಜೋ ಬಿಡೆನ್ ಹೇಳಿದ್ದಾರೆ, ಇದರಲ್ಲಿ 13 ಅಮೆರಿಕನ್ ಸೇನಾ ಸದಸ್ಯರು ಸೇರಿದಂತೆ ಕನಿಷ್ಠ 103 ಜನರು ಮೃತಪಟ್ಟಿದ್ದಾರೆ.
ಅಫ್ಘಾನಿಸ್ತಾನದಲ್ಲಿ ನಡೆಯುತ್ತಿರುವ ಸ್ಥಳಾಂತರವು ನಿರಂತರವಾಗಿ ಮುಂದುವರಿಯುತ್ತದೆ ಎಂದು ಅಮೆರಿಕ ಹೇಳಿದೆ.
ಅಮೆರಿಕ ಸೆಂಟ್ರಲ್ ಕಮಾಂಡಿನಸಾರ್ವಜನಿಕ ವ್ಯವಹಾರಗಳ ಅಧಿಕಾರಿ ಬಿಲ್ ಅರ್ಬನ್ ಅವರ ಇತ್ತೀಚಿನ ಅಪ್ಡೇಟ್ ಪ್ರಕಾರ, ದಾಳಿಯಲ್ಲಿ ಮೃತಪಟ್ಟ ಅಮೆರಿಕ ಸೇನೆ ಸದಸ್ಯರ ಸಂಖ್ಯೆ 13 ಕ್ಕೇರಿದೆ, ಇನ್ನೂ 18 ಗಾಯಗೊಂಡ ಸೈನಿಕರನ್ನು ದೇಶದಿಂದ ಹೊರಕ್ಕೆ ಕಳುಹಿಸಲಾಗುತ್ತಿದೆ.
ನಮ್ಮ ಸಮಯದಲ್ಲಿ ನಾವು ಬಲದಿಂದ ಮತ್ತು ನಿಖರತೆಯಿಂದ ಪ್ರತಿಕ್ರಿಯಿಸುತ್ತೇವೆ, ನಾವು ಆಯ್ಕೆ ಮಾಡುವ ರೀತಿಯಲ್ಲಿ ನಾವು ಆಯ್ಕೆ ಮಾಡಿಕೊಳ್ಳುತ್ತೇವೆ” ಎಂದು ಹಮೀದ್ ಕರ್ಜೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದ ಬಾಂಬ್ ದಾಳಿಯ ನಂತರ ಬಿಡೆನ್ ಗುರುವಾರ ತಡರಾತ್ರಿ ವೈಟ್ ಹೌಸ್ ನಿಂದ ಹೇಳಿಕೆ ನೀಡಿದ್ದಾರೆ.
ವಿಮಾನ ನಿಲ್ದಾಣ ಮತ್ತು ಸುತ್ತಮುತ್ತಲ ಪ್ರದೇಶದಲ್ಲಿ ಭಾರಿ ಸ್ಫೋಟ ಹಾಗೂ ಗುಂಡಿನ ದಾಳಿ ನಡೆಸುವ ಅಪಾಯವಿದೆ. ಈ ವೇಳೆ ಅಮೆರಿಕ ಪ್ರಜೆಗಳು ವಿಮಾನ ನಿಲ್ದಾಣ ಹಾಗೂ ನಿಲ್ದಾಣದ ಗೇಟ್‌ಗಳ ಬಳಿ ತೆರಳಬೇಡಿ ಎಂದು ಈ ಮೊದಲೇ ಅಮೆರಿಕ ರಾಯಭಾರಿ ಕಚೇರಿ ಸಂದೇಶ ರವಾನಿಸಿತ್ತು.
ತಾಲಿಬಾನ್ ಹೇಳಿಕೆ..
ತಾಲಿಬಾನ್ ವಕ್ತಾರ ಜಬೀವುಲ್ಲಾ ಮುಜಾಹಿದ್ ಸ್ಫೋಟದ ಕುರಿತು ಅಮೆರಿಕಕ್ಕೆ ಮಾಹಿತಿ ನೀಡಿದ್ದಾಗಿ ಹೇಳಿದ್ದಾರೆ. ದಾಳಿ ಹಿಂದೆ ಐಸಿಸ್ (ಇಸ್ಲಾಮಿಕ್ ಸ್ಟೇಟ್ ಆಫ್ ಇರಾಕ್ ಆಂಡ್ ಸಿರಿಯಾ) ಉಗ್ರರು ಕೈವಾಡವಿರುವ ಬಗ್ಗೆ ಅನುಮಾನವಿದೆ ಎಂದು ಹೇಳಿದ್ದಾರೆ.
ಅಫ್ಘಾನಿಸ್ತಾನದ ನೆಲದಲ್ಲಿ ಭಯೋತ್ಪಾದಕರಿಗೆ ಮತ್ತು ಭಯೋತ್ಪಾದಕ ಚಟುವಟಿಕೆಗಳನ್ನು ನಡೆಸಲು ಅವಕಾಶ ನೀಡುವುದಿಲ್ಲ,” ಎಂದು ತಾಲಿಬಾನ್ ವಕ್ತಾರ ಜಬೀವುಲ್ಲಾ ಮುಜಾಹಿದ್ ಸ್ಪಷ್ಟಪಡಿಸಿದ್ದಾರೆ.

 

 

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement