ಕುಮಟಾದ ಎರಡು ಸಿಇಟಿ ಕೇಂದ್ರಗಳಲ್ಲಿ ಮೊದಲನೇ ದಿನ ಸುಗಮವಾಗಿ ನಡೆದ ಪರೀಕ್ಷೆ

ಕುಮಟಾ; ತಾಲೂಕಿನಲ್ಲಿ ಎರಡು ಸಿಇಟಿ ಪರಿಕ್ಷಾ ಕೇಂದ್ರಗಳಿದ್ದು ಡಾ.ಎ.ವಿ.ಬಾಳಿಗಾ ಕಲಾ ವಿಜ್ಞಾನ ಮಹಾವಿದ್ಯಾಲಯದಲ್ಲಿ ೨೬೪ ವಿದ್ಯಾರ್ಥಿಗಳು ಪರೀಕ್ಷೆಬರೆಯಲು ಅನುಮತಿ ಪಡೆದಿದ್ದಾರೆ.
ಮುಂಜಾನೆ ಅವಧಿಯ ಜೀವಶಾಸ್ತ್ರ ಪರಿಕ್ಷೆಯಲ್ಲಿ ೬೯ ವಿದ್ಯಾರ್ಥಿಗಳು ಗೈರುಹಾಜರಾಗಿದ್ದು ೧೯೫ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ. ಮಧ್ಯಾಹ್ನ ಗಣಿತ ಪರೀಕ್ಷೆಯಲ್ಲಿ ಕೇವಲ ೬ ವಿದ್ಯಾರ್ಥಿಗಳು ಗೈರುಹಾಜರಾಗಿದ್ದರು.
ಬೆಣ್ಣೆ ಸರ್ಕಾರಿ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ೨೭೬ ಪರೀಕ್ಷಾರ್ಥಿಗಳಿದ್ದು ಜೀವಶಾಸ್ತ್ರ ಪರಿಕ್ಷೆಯಲ್ಲಿ ೧೯೩ ಪರಿಕ್ಷೆ ಬರೆದಿದ್ದು ೮೩ ವಿದ್ಯಾರ್ಥಿಗಳು ಗೈರುಹಾಜರಾಗಿದ್ದರೆ ಗಣಿತ ಪರೀಕ್ಷೆಯಲ್ಲಿ ೮ ವಿದ್ಯಾರ್ಥಿಗಳು ಗೈರು ಹಾಜರಿದ್ದು. ೧೬೮ ವಿದ್ಯಾಥಿಗಳು ಪರಿಕ್ಷೆ ಬರೆದಿದ್ದಾರೆ.
ಸಿಇಟಿ ಪರಿಕ್ಷೆಯನ್ನು ಉಪವಿಭಾಗಾಧಿಕಾರಿ ರಾಹುಲ ಪಾಂಡೆ ನೇತೃತ್ವದಲ್ಲಿ ಕಟ್ಟುನಿಟ್ಟಾಗಿ ಕೋವಿಡ್‌ ಮಾರ್ಗಸೂಚಿಗಳನ್ನು ಅನುಸರಿಸಿ ಪರೀಕ್ಷೆ ನಡೆಸಲಾಗಿದೆ. ಪಿದ್ಯಾಥಿಗಳು ಪರೀಕ್ಷಾ ಕೊಠಡಿ ಪ್ರವೇಶಿಸುವ ಮುನ್ನವೆ ಸ್ಕ್ರೀನ್ ಟೆಸ್ಟ್ ಮಾಡಿ ಮತ್ತು ಸ್ಯಾನಿಟೈಸರ್ ನೀಡಿಯೆ ಕಳಿಸಲಾಗಿದೆ ಎಂದು ಬಾಳಿಗಾ ಪ್ರಾಚಾರ್ಯ ವೀಣಾ ಕಾಮತ ತಿಳಿಸಿದರು. ವಿದ್ಯಾರ್ಥಿಗಳ ಹೊರತಾಗಿ ಪರೀಕ್ಷಾ ಕೊಠಡಿಗೆ ಹೊರಗಿನ ವ್ಯಕ್ತಿಗೆ ಪ್ರವೇಶ ನಿಷೇಧಿಸಲಾಗಿದೆ. ಕೊಠಡಿಯ ಚಿತ್ರಣ ಮಾಡಲು ಪತ್ರಕರ್ತರಿಗೂ ಸರಕಾರಿ ಆದೇಶದಂತೆ ಅವಕಾಶವಿಲ್ಲ ಎಂದು ಸರಕಾರಿ ಕಾಲೇಜು ಪ್ರಾಚಾರ್ಯ ಸತೀಶ ನಾಯಕ ತಿಳಿಸಿದರು. ರವಿವಾರದಂದು ರಸಾಯನ ಶಾಸ್ತ್ರ ಮತ್ತು ಭೌತಶಾಸ್ತ್ರದ ಪರೀಕ್ಷೆ ನಡೆಯಲಿದೆ ಎಂದು ಅವರು ಹೇಳಿದರು.

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement