1200 ವರ್ಷಗಳಷ್ಟು ಹಳೆಯ ದುರ್ಗಾದೇವಿ ಶಿಲ್ಪ ಕಾಶ್ಮೀರದ ಬುಡ್ಗಂನಲ್ಲಿ ಪತ್ತೆ ..!

ನವದೆಹಲಿ : ಸುಮಾರು 1200 ವರ್ಷಗಳಷ್ಟು ಹಳೆಯದಾದ ದುರ್ಗಾಮಾತೆ ಪ್ರತಿಮೆ ಕಾಶ್ಮೀರದಲ್ಲಿ ಪತ್ತೆಯಾಗಿದೆ.

ಜಮ್ಮು ಮತ್ತು ಕಾಶ್ಮೀರ ಪೊಲೀಸರು ಬಡ್ಗಾಮ್ ಜಿಲ್ಲೆಯ ಖಾನ್ ಸಾಹಿಬ್ ಪ್ರದೇಶದಿಂದ ಸುಮಾರು 1200 ವರ್ಷಗಳಷ್ಟು ಹಳೆಯದಾದ ದುರ್ಗಾದೇವಿಯ ಶಿಲ್ಪವನ್ನು ಪತ್ತೆ ಮಾಡಿದ್ದಾರೆ.
ಕೇಂದ್ರ ಕಾಶ್ಮೀರದ ಬುಡ್ಗಾಂ ಜಿಲ್ಲೆಯಲ್ಲಿ ದುರ್ಗಾಮಾತೆಯ 1200 ವರ್ಷಗಳಷ್ಟು ಹಳೆಯದಾದ ಮೂರ್ತಿಯೊಂದನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಖಚಿತ ಮಾಹಿತಿಯನ್ನು ಆಧರಿಸಿ ದಾಳಿ ನಡೆಸಿದ್ದಾರೆ. ಇಲ್ಲಿನ ಖಾನ್ ಸಹಾಬ್ ಪ್ರದೇಶದಲ್ಲಿ ಶೋಧ ಕಾರ್ಯಾಚರಣೆ ನಡೆಸಿದ ಪ್ರಾಚ್ಯ ವಸ್ತು ಇಲಾಖೆ ಹಾಗೂ ಪೊಲೀಸರಿಗೆ ಈ ಪ್ರಾಚೀನ ವಿಗ್ರಹ ಸಿಕ್ಕಿದೆ.

ಶಿಲ್ಪವನ್ನು ಆರ್ಕೈವ್ಸ್, ಪುರಾತತ್ವ ಮತ್ತು ವಸ್ತುಸಂಗ್ರಹಾಲಯಗಳ ಇಲಾಖೆಯ ಉಪನಿರ್ದೇಶಕ ಮುಷ್ತಾಕ್ ಅಹ್ಮದ್ ಬೇಗ್ ಮತ್ತು ಅವರ ತಂಡಕ್ಕೆ ಈ ಮೂರ್ತಿಯನ್ನು ಹಿರಿಯ ಪೊಲೀಸ್ ಅಧೀಕ್ಷಕ (ಎಸ್‌ಎಸ್‌ಪಿ) ಬುದ್ಗಾಮ್ ತಾಹಿರ್ ಸಲೀಂ ಖಾನ್ ಹಸ್ತಾಂತರಿಸಿದರು.
2021 ಆಗಸ್ಟ್ 13 ರಂದು ನದಿಯಿಂದ ಮರಳು ತೆಗೆಯುತ್ತಿದ್ದ ಕಾರ್ಮಿಕರಿಂದ ಈ ಶಿಲ್ಪವು ಶ್ರೀನಗರದ ಪಾಂಡ್ರೆಥಾನ್ ನಲ್ಲಿರುವ ಜೇಲಂ ನದಿಯಲ್ಲಿ ಪತ್ತೆಯಾಗಿದೆ ಎಂದು ಎಂದು ಜಮ್ಮು ಮತ್ತು ಕಾಶ್ಮೀರ ಪೋಲಿಸರು ತಿಳಿಸಿದ್ದಾರೆ.
ಈ ವಿಗ್ರಹವು ಸುಮಾರು 7-8ನೇ ಶತಮಾನದ್ದು ಎಂದು ಪರಿಶೀಲನೆ ವೇಳೆ ತಿಳಿದುಬಂದಿದೆ. ವಿಗ್ರಹವು 12×8 ಇಂಚು ಗಾತ್ರವಿದ್ದು, ಸಿಂಹಾಸನದ ಮೇಲೆ ತನ್ನ ಸಹಾಯಕರೊಂದಿಗೆ ದುರ್ಗಾಮಾತೆ ಕುಳಿತಿರುವಂತೆ ಕಪ್ಪುಶಿಲೆಯಲ್ಲಿ ಕೆತ್ತಲಾಗಿದೆ. ಸದ್ಯ ದುರ್ಗಾಮಾತೆ ಪ್ರತಿಮೆ ವಿಗ್ರಹವನ್ನುಜಮ್ಮು ಮತ್ತು ಕಾಶ್ಮೀರ ಕೇಂದ್ರಾಡಳಿತ ಪ್ರದೇಶದ ಪ್ರಾಚ್ಯವಸ್ತು ಇಲಾಖೆಗೆ ಹಸ್ತಾಂತರಿಸಲಾಗಿದೆ.

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

5 / 5. ಒಟ್ಟು ವೋಟುಗಳು 1

  1. R.G.Bhat. Melinamane.

    ಉತ್ತಮ ಮಾಹಿತಿ ನೀಡುತ್ತಿದ್ದೀರಿ. ಅಭಿನಂದನೆಗಳು

ನಿಮ್ಮ ಕಾಮೆಂಟ್ ಬರೆಯಿರಿ