ಗಗನಯಾತ್ರಿಗಳು ಬಾಹ್ಯಾಕಾಶದಲ್ಲಿ ಹೇಗೆ ತಲೆ ಸ್ನಾನ ಮಾಡುತ್ತಾರೆ? ಪಿಜ್ಜಾ ಹೇಗೆ ತಿನ್ನುತ್ತಾರೆ? ಗಗನಾಯಾತ್ರಿ ಹಂಚಿಕೊಂಡ ವಿಡಿಯೋ ನೋಡಿ

ಬಾಹ್ಯಾಕಾಶ ಕೇಂದ್ರದಲ್ಲಿರುವ ಗಗನಯಾತ್ರಿಗಳ ಜೀವನ ಹೇಗಿರುತ್ತದೆ ಎಂಬ ಕುತೂಹಲ ಎಲ್ಲರಿಗೂ ಇರುತ್ತದೆ. ಬಾಹ್ಯಾಕಾಶ ಕೇಂದ್ರದಲ್ಲಿ ಗುರುತ್ವಾಕರ್ಷಣೆ ಶಕ್ತಿ ಕಡಿಮೆ ಆಗುವುದರಿಂದ ಅಲ್ಲಿಗೆ ಹೊಂದಿಕೊಳ್ಳಲು ಸಮಯ ಬೇಕಾಗುತ್ತದೆ. ಕೆಲವೇ ದಿನಗಳ ಹಿಂದೆ ಗಗನಯಾತ್ರಿಗಳು ಬಾಹ್ಯಾಕಾಶ ಕೇಂದ್ರದಲ್ಲಿ ಪಿಜ್ಜಾ ತಯಾರಿಸಿ ತಿಂದ ವಿಡಿಯೋ, ಬಾಹ್ಯಾಕಾಶದಲ್ಲಿ ಜನ್ಮದಿನ ಆಚರಿಸಿಕೊಂಡ ವಿಡಿಯೋ ವೈರಲ್ ಆಗಿತ್ತು.
ಈಗ ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರದಲ್ಲಿದ್ದ ನಾಸಾ ಗಗನಯಾತ್ರಿ ಮೇಗನ್ ಮೆಕ್​ಅರ್ಥರ್ ಬಹಳ ಕುತೂಹಲಕಾರಿಯಾದ ವಿಡಿಯೋ ಶೇರ್ ಮಾಡಿದ್ದು, ಗಗನಯಾತ್ರಿಗಳು ಅಲ್ಲಿ ಹೇಗೆ ತಮ್ಮ ಕೂದಲನ್ನು ತೊಳೆದುಕೊಳ್ಳುತ್ತಾರೆ ಎಂಬುದನ್ನು ಮೇಗನ್ ಅವರು ವಿಡಿಯೋ ಮೂಲಕ ಹಂಚಿಕೊಂಡಿದ್ದಾರೆ. ಬಾಹ್ಯಾಕಾಶ ಕೇಂದ್ರದಲ್ಲಿ ಗುರುತ್ವಾಕರ್ಷಣ ಶಕ್ತಿ ಇರದ ಕಾರಣ ಕೂದಲೆಲ್ಲ ಹೇಗೆ ಬೇಕೆಂದರೆ ಹಾಗೆ ಹಾರುತ್ತಿರುತ್ತದೆ. ಅಲ್ಲಿ ಯಾವ ವಸ್ತುವೂ ಇಟ್ಟ ಜಾಗದಲ್ಲಿ ಇರುವುದಿಲ್ಲ. ಹೀಗಿರುವಾಗ ತಲೆ ಸ್ನಾನ ಮಾಡುವುದು ಹೇಗೆ ಎಂಬುದಕ್ಕೆ ಅವರು ಈ ವಿಡಿಯೊ ಮೂಲಕ ಉತ್ತರ ನೀಡುವ ಪ್ರಯತ್ನ ಮಾಡಿದ್ದಾರೆ.

https://twitter.com/Astro_Megan/status/1432708693267779607

ಶವರ್ ಟೈಮ್‌ ಎಂದು ವಿಡಿಯೋ ಶೇರ್ ಮಾಡಿರುವ ಅವರು, ಬಾಹ್ಯಾಕಾಶದಲ್ಲಿ ಗಗನಯಾತ್ರಿಗಳು ಸ್ನಾನ ಮಾಡಲು ಸಾಧ್ಯವಿಲ್ಲ. ಸ್ನಾನ ಮಾಡಿದರೆ ಎಲ್ಲ ಕಡೆಯೂ ನೀರು ಹರಡುತ್ತದೆ. ಹೀಗಾಗಿ, ಅಲ್ಲಿರುವವರು ಸ್ನಾನಕ್ಕೆ ನೀರನ್ನು ಬಳಸುವುದು ಕಷ್ಟ ಸಾಧ್ಯ. ಭೂಮಿಯಂತೆ ಅಲ್ಲಿ ಗುರುತ್ವಾಕರ್ಷಣ ಶಕ್ತಿ ಇಲ್ಲದ ಕಾರಣ ಇಲ್ಲಿಗಿಂತಲೂ ಅಲ್ಲಿಯ ಜೀವನಶೈಲಿ ವಿಭಿನ್ನವಾಗಿರುತ್ತದೆ ಎಂದು ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ.

ಬಾಹ್ಯಾಕಾಶ ಕೇಂದ್ರದಲ್ಲಿದ್ದಾಗ ಹೇಗೆ ದಿನನಿತ್ಯದ ಕೆಲಸಗಳನ್ನು ಮಾಡಿಕೊಳ್ಳುತ್ತಾರೆ, ಅಲ್ಲಿಯ ಜೀವನ ಹೇಗಿರುತ್ತದೆ ಎಂದು ಹಲವರು ನನ್ನನ್ನು ಪ್ರಶ್ನೆ ಮಾಡಿದ್ದರು. ಅದಕ್ಕೆ ಉತ್ತರವಾಗಿ ಈ ವಿಡಿಯೋ ಹಂಚಿಕೊಳ್ಳುತ್ತಿದ್ದೇನೆ ಎಂದು ನಾಸಾದ ಗಗನಯಾತ್ರಿ ಮೇಗನ್ ಟ್ವಿಟ್ಟರ್​ನಲ್ಲಿ ತಿಳಿಸಿದ್ದಾರೆ.
ನೀರು ಬಳಸದೆ ಮೇಗನ್ ಯಾವ ರೀತಿ ತಲೆ ಕೂದಲನ್ನು ಕ್ಲೀನ್ ಮಾಡಿಕೊಂಡರೆಂಬ ವಿಡಿಯೋ ಇಲ್ಲಿದೆ.
ಅದೇರೀತಿ ಹಾಗೇ, ಫ್ರೆಂಚ್ ಗಗನಯಾತ್ರಿ ಥಾಮಸ್ ಎಂಬುವವರು ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ತಾವು ಪಿಜ್ಜಾ ತಯಾರಿಸಿ ತಿಂದ ವಿಡಿಯೋ ಹಂಚಿಕೊಂಡಿದ್ದು ಕೂಡ ಭಾರೀ ವೈರಲ್ ಆಗಿತ್ತು.

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement