ಅಫ್ಘಾನಿಸ್ತಾನದಲ್ಲಿ ‘ತಾಲಿಬಾನ್ ಶೈಲಿಯ’ ಕಾಲೇಜು ಹೇಗಿದೆ ನೋಡಿ: ಹುಡುಗ-ಹುಡುಗಿಯರ ಪ್ರತ್ಯೇಕಿಸಲು ಪರದೆ..!

ನವದೆಹಲಿ: ಅಫ್ಘಾನಿಸ್ತಾನವನ್ನು ತಾಲಿಬಾನ್ ವಶಪಡಿಸಿಕೊಂಡ ಬಳಿಕ ಅಲ್ಲಿನ ಚಿತ್ರಣವೇ ಸಂಪೂರ್ಣ ಬದಲಾಗಿದೆ. 1990ರ ದಶಕದ ಅಫ್ಘಾನಿಸ್ತಾನ ತಾಲಿಬಾನ್ ಆಳ್ವಿಕೆಗಿಂತ ಈ ಬಾರಿಯ ಆಡಳಿತ ಭಿನ್ನವಾಗಿದೆ. ಈ ಬಾರಿ, ಹುಡುಗಿಯರು ಹಾಗೂ ಮಹಿಳೆಯರಿಗೆ ಶಿಕ್ಷಣದ ಮತ್ತು ಕಲಿಯುವ ಹಕ್ಕು ನೀಡಲಾಗಿದೆ. ಆದರೆ, ಹೇಗೆ ಎಂಬುದಕ್ಕೆ ಈಗ ಗೊತ್ತಗಲು ಆರಂಭವಾಗಿದೆ. ಅವರು ತಾಲಿಬಾನ್‌ಗಳು ಹೇಳುವಷ್ಟು ಕಲಿಕೆ ಸಲೀಸಾಗಿ ಸಾಗುತ್ತಿಲ್ಲ.
ಕಾಬೂಲ್​ನ Ibn-e-Sina University ಕೆಲವು ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಅದರಲ್ಲಿ ಹುಡುಗರು ಹಾಗೂ ಹುಡುಗಿಯರು ಪ್ರತ್ಯೇಕವಾಗಿ ಕುಳಿತುಕೊಂಡಿದ್ದಾರೆ. ವಿಚಿತ್ರವೆಂದರೆ ಅವರ ನಡುವೆ ಒಂದು ಪರದೆಯನ್ನು ಕೂಡ ಹಾಕಲಾಗಿದೆ. ಚಿತ್ರದಲ್ಲಿ ಕಾಣುವಂತೆ ಕಲಿಯಲು ಬಂದ ಹುಡುಗರು ಸಾಂಪ್ರದಾಯಿಕ ಉಡುಗೆ ತೊಟ್ಟುಕೊಂಡಿದ್ದಾರೆ. ಹುಡುಗಿಯರು ಬುರ್ಕಾ ಹಾಕಿದ್ದಾರೆ.

ತಾಲಿಬಾನ್ ನಿಯಮಗಳ ಪ್ರಕಾರ, ಅಫ್ಘಾನಿಸ್ತಾನದಲ್ಲಿ ಹುಡುಗರು ಪಾಶ್ಚಿಮಾತ್ಯ ಸಂಪ್ರದಾಯದಂತೆ ಪ್ಯಾಂಟ್ ಹಾಗೂ ಶರ್ಟ್ ಧರಿಸುವಂತಿಲ್ಲ. ಕುರ್ತಾ ಧರಿಸುವುದು ಅವರಿಗೆ ಕಡ್ಡಾಯವಾಗಿದೆ. ಮಹಿಳೆಯರಿಗೆ ಬುರ್ಕಾ ಧರಿಸುವುದು ಕೂಡ ಕಡ್ಡಾಯ ಆಗಿದೆ.
ಈ ಬಗ್ಗೆ ತಾಲಿಬಾನ್ ಡಾಕ್ಯುಮೆಂಟ್ ಒಂದನ್ನು ಹಂಚಿಕೊಂಡಿದೆ. ಹಾಗೂ ಮಹಿಳೆಯರು ಹಾಗೂ ಹುಡುಗರು ಪ್ರತ್ಯೇಕವಾಗಿ ಕುಳಿತುಕೊಳ್ಳಬೇಕು ಎಂದು ಹೇಳಲಾಗಿದೆ. ಹಾಗೂ ಮಹಿಳೆಯರಿಗೆ ಮಹಿಳೆಯರೇ ಶಿಕ್ಷಣ ನೀಡುತ್ತಾರೆ ಎಂದು ಹೇಳಲಾಗಿದೆ. ಅಥವಾ ಉತ್ತಮ ಚಾರಿತ್ರ್ಯ ಹೊಂದಿರುವ ಒಬ್ಬ ವಯಸ್ಕ ವ್ಯಕ್ತಿಯಿಂದ ಕಲಿಸಲಾಗುತ್ತದೆ ಎಂದು ತಿಳಿಸಲಾಗಿದೆ.
ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಸಹಿಷ್ಣು ಎಂದು ತೋರಿಸಿಕೊಳ್ಳುತ್ತಿದೆ. ಆದರೆ, ನಿಜವಾಗಿಯೂ ತನ್ನ ಕಟ್ಟುಪಾಡುಗಳನ್ನು ಮೀರಿ ಇರುವಂತೆ ಕಾಣುತ್ತಿಲ್ಲ. ಹೀಗಾಗಿಯೇ ಮಹಿಳೆಯರು ಹೆರಾತ್ ನಗರದಲ್ಲಿ ಪ್ರತಿಭಟನೆ ನಡೆಸಿದ್ದಾರೆ. ಮಹಿಳೆಯರ ಹಕ್ಕಿಗಾಗಿ ಧರಣಿ ನಡೆಸಿದ್ದಾರೆ.
ಒಂದು ಕಡೆ, ಮಹಿಳೆಯರು ಕೆಲಸ ಮಾಡಬಹುದು ಎಂದು ತಾಲಿಬಾನ್ ಹೇಳಿದೆ. ಆದರೆ, ಯಾವುದೇ ಗಂಡಸರ ಸಹಾಯ ಇಲ್ಲದೆ ಮನೆಯಿಂದ ಮಹಿಳೆಯರು ಹೊರಹೋಗಬಾರದು ಎಂದೂ ತಾಲಿಬಾನ್​ಗಳು ಹೇಳುತ್ತಿದ್ದಾರೆ. ಆದರೆ, ಗಂಡ ತೀರಿಕೊಂಡವರು, ತಂದೆ, ಮಗ ಇಲ್ಲದವರು ಏನು ಮಾಡಬೇಕು ಎಂಬುದಕ್ಕೆ ಅಂತಹವರು ಮನೆಯಲ್ಲೇ ಕುಳಿತುಕೊಳ್ಳುವಂತೆ ತಾಲಿಬಾನ್ ಹೇಳಿದೆ. ಇನ್ನು ಸರ್ಕಾರವೇ ಬಂದಿಲ್ಲ. ಈಗಲೇ ಅವರು ಒಂದೊಂದೇ ಆಡಳಿತ ವಿಧಾನಗಳು ಹೊರಬರುತ್ತಿವೆ. ಸರ್ಕಾರ ರಚನೆಯಾದ ನಂತರ ಡಳಿತ ಹೇಗಿರಬಹುದು ಎಂದು ಆತಂಕ ಅಲ್ಲಿನವರಿಗೆ ಇದೆ.

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement