ಕುಮಟಾ: ಕಾರು ಪಲ್ಟಿಯಾಗಿ ಮಹಿಳೆ ಸಾವು, ಮೂವರಿಗೆ ಗಾಯ

ಕುಮಟಾ :ರಾಷ್ಟ್ರೀಯ ಹೆದ್ದಾರಿ  66ರಲ್ಲಿ ಮೋಟಾರ್ ಕಾರ ಪಲ್ಟಿ ಯಾಗಿ ಮಹಿಳೆಯೊಬ್ಬಳು ಮೃತ ಪಟ್ಟ ಘಟನೆ ಸೋಮವಾರ ನಡೆದ ಬಗ್ಗೆ ವರದಿಯಾಗಿದೆ.
ಸೋಮವಾರ ಮಧ್ಯಾಹ್ನ   ವಿಪರೀತ ಸುರಿಯುತ್ತಿರುವ ಮಳೆಯಿಂದ ಕಾರ ಸ್ಕಿಡ್ಡ್ ಆಗಿದೆ ಎನ್ನಲಾಗಿದೆ. ಕಾರು ಮೂರು ಪಲ್ಟಿಯಾಗಿದ್ದರಿಂದ ಘಟನೆ ನಡೆದಿದೆ. ಈ ಸಂದರ್ಭದಲ್ಲಿ ಕಾರಿನಲ್ಲಿದ್ದ ಕಾರಿನಲ್ಲಿ ಇದ್ದ ಮಹಿಳೆ ರಮಾ ಭಟ್ಟ ಎಂಬವರು ಮೃತಪಟ್ಟಿದ್ದು ಪತಿ ಕುಮಟಾದ ಶ್ರೀರಾಮ ಏಜೆನ್ಸಿಯ ದತ್ತಾತ್ರೇಯ ಭಟ್ಟ ಮತ್ತು ಇಬ್ಬರು ಮಕ್ಕಾಳಿಗೆ ಸಣ್ಣ ಪ್ರಮಾಣದ ಪೆಟ್ಟಾಗಿದೆ ತಿಳಿದು ಬಂದಿದೆ ಇಕೋ ಕಾರ್‌  ಮೇಲೆ ಗೋಕರ್ಣ ಕ್ಕೆ ಕುಟುಂಬ ಸಮೇತ ಹೋಗುತ್ತಿರುವಾಗ ಮಿರ್ಜಾನ್‌ ಸಮೀಪ  ಈ ಅವಘಡ ನಡೆದಿದೆ. ಕುಮಟಾ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

5 / 5. 1

ಶೇರ್ ಮಾಡಿ :
ಪ್ರಮುಖ ಸುದ್ದಿ :-   ಲೋಕಸಭಾ ಚುನಾವಣೆ 2024: ಕರ್ನಾಟಕದ 14 ಕ್ಷೇತ್ರಗಳಿಗೆ ಇಂದಿನಿಂದ ನಾಮಪತ್ರ ಸಲ್ಲಿಕೆ ಆರಂಭ

ನಿಮ್ಮ ಕಾಮೆಂಟ್ ಬರೆಯಿರಿ

advertisement