ಕ್ರಿಕೆಟ್:‌ ಆರು ಎಸೆತಕ್ಕೆ 6 ಸಿಕ್ಸರ್‌ ಹೊಡೆದು ದಾಖಲೆ ಬರೆದ ಭಾರತೀಯ ಮೂಲದ ಅಮೆರಿಕನ್‌ ಜಸ್ಕರನ್ ಮಲ್ಹೋತ್ರಾ..!

ಭಾರತ ಮೂಲದ ಜಸ್​​ಕರಣ್ ಮಲ್ಹೋತ್ರಾ (Jaskaran Malhotra) ಹೊಸ ಇತಿಹಾಸ ನಿರ್ಮಿಸಿದ್ಧಾರೆ. ನಿನ್ನೆ ನಡೆದ ಪಪುವಾ ನ್ಯೂ ಗಿನಿಯಾ ಮತ್ತು ಅಮೆರಿಕ (USA) ನಡುವಿನ ಏಕದಿನ ಪಂದ್ಯದಲ್ಲಿ ಅಮೆರಿಕದ ಜಸ್​ಕರಣ್ ಮಲ್ಹೋತ್ರಾ ಒಂದೇ ಓವರ್​ನಲ್ಲಿ 6 ಸಿಕ್ಸರ್ ಸಿಡಿಸಿ ವಿಶ್ವದಾಖಲೆ ಸರಿಗಟ್ಟಿದ್ದಾರೆ. ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ಒಂದು ಓವರ್​ನಲ್ಲಿ ಆರು ಸಿಕ್ಸ್ ಭಾರಿಸಿದ ವಿಶ್ವದ ಎರಡನೇ ಆಟಗಾರರೆನಿಸಿದ್ದಾರೆ.
ಭಾರತದ ಯುವರಾಜ್ ಸಿಂಗ್ ಆರು ಬಾಲ್​ಗೆ ಆರು ಸಿಕ್ಸರ್ ಭಾರಿಸಿದ್ದರು. ಈ ದಿಗ್ಗಜರ ಸಾಲಿಗೆ 31 ವರ್ಷದ ಜಸ್​ಕರಣ್ ಮಲ್ಹೋತ್ರಾ ಸೇರ್ಪಡೆಯಾಗಿದ್ದಾರೆ. ಆತಿಥೇಯ ಪಪುವಾ ತಂಡದ ವೇಗದ ಬೌಲರ್ ಗೌಡಿ ಟೋಕಾ ಅವರ ಒಂದು ಓವರ್​ನಲ್ಲಿ ಮಲ್ಹೋತ್ರಾ ಆರು ಸಿಕ್ಸರ್ ಸಿಡಿಸಿದ ದಾಖಲೆ ಬರೆದಿದ್ದಾರೆ.
ಪಪುವಾ ನ್ಯೂ ಗಿನಿಯಾ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ಮಲ್ಹೋತ್ರಾ ಅವರ ಅಮೋಘ ಬ್ಯಾಟಿಂಗ್ ಪ್ರದರ್ಶನದ ನೆರವಿನಿಂದ ಅಮೆರಿಕ ತಂಡ 134 ರನ್​ಗಳಿಂದ ಭರ್ಜರಿ ಗೆಲುವು ಸಾಧಿಸಿತು. ಚಂಡೀಗಡ ಸಂಜಾತರಾದ ಮಲ್ಹೋತ್ರಾ 124 ಬಾಲ್​ನಲ್ಲಿ ಅಜೇಯ 173 ರನ್ ಗಳಿಸಿದರು. ಗೆಲ್ಲಲು ಅಮೆರಿಕ ಒಡ್ಡಿದ 271 ರನ್​ಗೆ ಪ್ರತಿಯಾಗಿ ಪಪುವಾ ತಂಡ 137 ರನ್​ಗೆ ಆಲೌಟ್ ಆಯಿತು. ಮಲ್ಹೋತ್ರಾ ಈ ಪಂದ್ಯದಲ್ಲಿ ಗಳಿಸಿದ ಶತಕ ಐತಿಹಾಸಿಕವಾಗಿತ್ತು. ಇದು ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ಅಮೆರಿಕ ತಂಡದ ಆಟಗಾರನೊಬ್ಬ ಗಳಿಸಿದ ಚೊಚ್ಚಲ ಶತಕವಾಗಿದೆ.

ಗೌಡಿ ಟಾಕ್ ದುರದೃಷ್ಟಕರ ಬೌಲರ್ ಆಗಿದ್ದು, ಮಲ್ಹೋತ್ರಾ ಕ್ಲೀನರ್‌ಗಳಿಗೆ ಕರೆದೊಯ್ದರು, ಅವರು 124 ಎಸೆತಗಳಲ್ಲಿ 16 ಸಿಕ್ಸರ್ ಮತ್ತು 4 ಬೌಂಡರಿಗಳೊಂದಿಗೆ 173 ರನ್ ಗಳಿಸಿ ಔಟಾಗದೇ ಉಳಿದರು.

ಗಿಬ್ಸ್ (vs ನೆದರ್ಲ್ಯಾಂಡ್, 2011), ಯುವರಾಜ್ ಸಿಂಗ್ (vs ಇಂಗ್ಲೆಂಡ್, 2007) ಮತ್ತು ವೆಸ್ಟ್ ಇಂಡೀಸ್ ನ ಕೀರನ್ ಪೊಲಾರ್ಡ್ (vs ಶ್ರೀಲಂಕಾ, 2021) ನಂತರ ಅಸ್ಕರನ್ ಮಲ್ಹೋತ್ರಾ ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ ಈ ಸಾಧನೆ ಮಾಡಿದ ನಾಲ್ಕನೇ ಬ್ಯಾಟ್ಸ್ ಮನ್. ಟಿ 20 ಕ್ರಿಕೆಟ್ ನಲ್ಲಿ ಯುವರಾಜ್ ಮತ್ತು ಪೊಲಾರ್ಡ್ ಇಬ್ಬರೂ ಒಂದು ಓವರ್ ನಲ್ಲಿ ಆರು ಸಿಕ್ಸರ್ ಬಾರಿಸಿದರು.

ಈ ಗೆಲುವಿನ ಮೂಲಕ ಅಮೆರಿಕ ತಂಡ ಪಪುವಾ ನ್ಯೂಗಿನಿಯಾ ವಿರುದ್ಧದ ಎರಡೂ ಪಂದ್ಯಗಳನ್ನ ಗೆದ್ದು ಸರಣಿ ಕ್ಲೀನ್ ಸ್ವೀಪ್ ಮಾಡಿದೆ. ಸೆಪ್ಟೆಂಬರ್ 13ರಂದು ನೇಪಾಳ ಮತ್ತು ಓಮನ್ ದೇಶ ತಂಡಗಳ ವಿರುದ್ಧ ಅಮೆರಿಕ ತಂಡ ಆಡಲಿದೆ. ಇದೇ ವೇಳೆ, ಜಸ್​ಕರಣ್ ಮಲ್ಹೋತ್ರಾ ಅವರ ದಾಖಲೆಯ ಆಟವನ್ನು ಹರ್ಷಲ್ ಗಿಬ್ಸ್, ಎಬಿ ಡೀವಿಲಿಯರ್ಸ್ ಮೊದಲಾದವರು ಪ್ರಶಂಸಿಸಿದ್ಧಾರೆ.

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement