ಚರ್ಚ್‌ಗೆ ಭೇಟಿ ನೀಡಿದ ಗಣಪತಿ..:ಸ್ಪೇನ್ ನಲ್ಲಿ ನಡೆದ ಅಪರೂಪದ ವಿದ್ಯಮಾನ..! ವಿಡಿಯೋ ವೀಕ್ಷಿಸಿ

ಮ್ಯಾಡ್ರಿಡ್‌: ಭಾರತದಾದ್ಯಂತ ಗಣೇಶ ಹಬ್ಬದ ಸಂಭ್ರಮ. ವಿಘ್ನ ವಿನಾಶಕನ ಪೂಜಾ ಕೈಂಕರ್ಯಗಳು ಭಕ್ತಿ-ಭಾವದಿಂದ ನಡೆಯುತ್ತಿದೆ. ಗಣೇಶ ಹಬ್ಬದಂದೇ ಇಲ್ಲೊಂದು ಭ್ರಾತೃತ್ವದ ಸಂದೇಶ ಸಾರುವ ಗಣೇಶನಿಗೆ ಸಂಬಂಧಿಸಿದ ವಿಡಿಯೋ ಹೊರಬಿದ್ದಿದೆ.
ಇಲ್ಲಿ ಗಣೇಶ ಚರ್ಚಿಗೆ ಹೋಗಿದ್ದಾನೆ. ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಗಣಪತಿ ಚರ್ಚಿಗೆ ಹೋಗುವುದೆಂದರೇನು ಎಂದು ಹುಬ್ಬೇರಿಸಬೇಡಿ. ಇದು ನಡೆದದ್ದು ಸ್ಪೇನ್‌ ದೇಶದಲ್ಲಿ. ಧಾರ್ಮಿಕ ಸೌಹಾರ್ದತೆ ಉತ್ತೇಜಿಸುವಂತಹ ಈ ವಿದ್ಯಮಾನ ಪ್ರೇರಣಾದಾಯಕವಾಗಿದೆ.

ಚಲನಚಿತ್ರ ನಿರ್ಮಾಪಕ ವಿವೇಕ್ ರಂಜನ್ ಅಗ್ನಿಹೋತ್ರಿ ಅವರು ಟ್ವೀಟ್ ಮಾಡಿರುವ ವಿಡಿಯೋದಲ್ಲಿ, ಸ್ಪೇನ್‌ನ ಮ್ಯಾಡ್ರಿಡ್‌ನಲ್ಲಿ ಇತ್ತೀಚೆಗೆ ಹಿಂದೂ ಸಮುದಾಯದವರು ಗಣೇಶ ಚತುರ್ಥಿ ಆಚರಿಸಲು ನಿರ್ಧರಿಸಿ ಗಣಪತಿಯ ಸುಂದರ ಮಣ್ಣಿನ ಮೂರ್ತಿ ಮಾಡಿ ಮೆರವಣಿಗೆಯಲ್ಲಿ ಹೊರಟಿದ್ದರು. ಅವರು ಚರ್ಚ್‌ನ ದಾರಿಯಲ್ಲಿ ಹಾದುಹೋಗಬೇಕಾದಾಗ, ಅವರು ನಿರ್ದಿಷ್ಟ ಧಾರ್ಮಿಕ ಸ್ಥಳದ ಅಧಿಕಾರಿಗಳಿಂದ ಮೆರವಣಿಗೆ ಹಾದುಹೋಗಲು ಅನುಮತಿ ಕೇಳಿದ್ದಾರೆ. ಒಂದು ಉದಾತ್ತ ನಡವಳಿಕೆಯಲ್ಲಿ ಚರ್ಚಿನವರು ಗಣಪತಿ ಮೂರ್ತಿಯನ್ನು ಚರ್ಚ್ ಒಳಗೆ ಕರೆತರಲು ಕೇಳಿದರು ”ಎಂದು ಅಗ್ನಿಹೋತ್ರಿ ವಿಡಿಯೋ ಟ್ವೀಟ್ ಮಾಡುವಾಗ ಬರೆದಿದ್ದಾರೆ. ವಿಘ್ನ ವಿನಾಯಕನ ಮೂರ್ತಿಯನ್ನು ಚರ್ಚ್ ಒಳಗೆ ಕರೆತರುವಾಗ ಚರ್ಚ್ ಒಳಗಿದ್ದ ಜನರು ಹಾಡುಗಳನ್ನು ಹಾಡಲಾರಂಭಿಸಿದರು ಎಂದು ವಿಡಿಯೊ ತೋರಿಸಿದೆ. ನಂತರ ಮೂರ್ತಿಗೆ ಪ್ರಾರ್ಥನೆ ಮಾಡಿದ್ದಾರೆ.
ವಿವೇಕ್ ರಂಜನ್ ಅಗ್ನಿಹೋತ್ರಿ ಅವರು ತನ್ನ ಸ್ನೇಹಿತ ವಿಡಿಯೋ ಕಳುಹಿಸಿದ್ದಾನೆ ಎಂದು ಹೇಳಿಕೊಂಡಿದ್ದಾರೆ.

ಪ್ರಮುಖ ಸುದ್ದಿ :-   ಹರ್ದೀಪ್ ನಿಜ್ಜರ್ ಹತ್ಯೆ ಪ್ರಕರಣ : ಮೂವರು ಭಾರತೀಯರನ್ನು ಬಂಧಿಸಿದ ಕೆನಡಾ ಪೊಲೀಸರು

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement