ಭೂಪೇಂದ್ರ ಪಟೇಲ್’ ಗುಜರಾತಿನ ನೂತನ ಮುಖ್ಯಮಂತ್ರಿ

ಶನಿವಾರ ವಿಜಯ್ ರೂಪಾನಿ ರಾಜೀನಾಮೆ ನೀಡಿದ ನಂತರ ಭಾನುವಾರ ಬಿಜೆಪಿ ಗುಜರಾತಿನ ಹೊಸ ಮುಖ್ಯಮಂತ್ರಿಯನ್ನು ಘೋಷಿಸಿದೆ.
ಭೂಪೇಂದ್ರ ಪಟೇಲ್ ಗುಜರಾತಿನ ನೂತನ ಮುಖ್ಯಮಂತ್ರಿ ಆಗಲಿದ್ದಾರೆ. ಗಾಂಧಿನಗರದಲ್ಲಿ ನಡೆದ ಬಿಜೆಪಿ ಶಾಸಕಾಂಗ ಪಕ್ಷದ ಸಭೆಯ ನಂತರ ಈ ಘೋಷಣೆ ಮಾಡಲಾಗಿದೆ.

ಈ ಕುರಿತು ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಬಿಜೆಪಿ ವೀಕ್ಷಕರು ಹಾಗೂ ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಶಿ ಹಾಗೂ ನರೇಂದ್ರ ಸಿಂಗ್ ತೋಮರ್ ನೂತನ ಸಿಎಂ ಆಯ್ಕೆಯನ್ನು ಘೋಷಿಸಿದರು. ಬಿಎಲ್ ಪಿ ಸಭೆಯಲ್ಲಿ ವಿಜಯ್ ರೂಪಾನಿ ಅವರು ಸಿಎಂ ಆಗಿ ಯಾರನ್ನು ಆಯ್ಕೆ ಮಾಡಬೇಕೆಂಬ ಬಗ್ಗೆ ತಮ್ಮ ನಿಲುವು ಸೂಚಿಸಿದರು. ಆ ಬಳಿಕ ಇತರರಿಂದ ಅಭಿಪ್ರಾಯ ಸಂಗ್ರಹಿಸಲಾಯಿತು. ಬಿಎಲ್ ಪಿ ಸಭೆಯ ನಂತರ ಬಿಜೆಪಿ ಹಿರಿಯ ನಾಯಕರು ಮಹತ್ವದ ಸಭೆ ನಡೆಸಿದರು. ಆ ಬಳಿಕ ನೂತನ ಸಿಎಂ ಹೆಸರನ್ನು ಪ್ರಕಟಿಸಲಾಯಿತು.

ಭೂಪೇಂದ್ರ ಪಟೇಲ್ ಗುಜರಾತಿನ ಘಟ್ಲೋಡಿಯಾ ವಿಧಾನಸಭಾ ಕ್ಷೇತ್ರದಿಂದ ಚುನಾಯಿತ ಪ್ರತಿನಿಧಿಯಾಗಿದ್ದಾರೆ. ಅವರು ಕಾಂಗ್ರೆಸ್ ಪಕ್ಷದಿಂದ ಶಶಿಕಾಂತ್ ಪಟೇಲ್ ವಿರುದ್ಧ 1,17,000 ಮತಗಳ ಅಂತರದಿಂದ ಗೆದ್ದಿದ್ದರು. ಈ ಸ್ಥಾನವನ್ನು ಉತ್ತರ ಪ್ರದೇಶದ ಗವರ್ನರ್ ಮತ್ತು ಮಾಜಿ ಗುಜರಾತ್ ಸಿಎಂ ಆನಂದಿಬೆನ್ ಪಟೇಲ್ ಹೊಂದಿದ್ದರು.ನೂತನ ಮುಖ್ಯ ಭುಪೇನ್‌ ಪಟೇಲ್‌ ಅವರು ಮಾಜಿ ಮುಖ್ಯಮಂತ್ರಿ ಆನಂದಿಬೆನ್ ಪಟೇಲ್ ಅವರ ಆಪ್ತರಾಗಿದ್ದಾರೆ.

ಪ್ರಮುಖ ಸುದ್ದಿ :-   ನಾಳೆ ಫಿಲಿಪ್ಪೀನ್ಸ್‌ಗೆ ʼಬ್ರಹ್ಮೋಸ್ ಕ್ಷಿಪಣಿʼಗಳ ಮೊದಲ ಸೆಟ್ ನೀಡಲಿದೆ ಭಾರತ

ಭುಪೇನ್‌ ಪಟೇಲ್ ಈ ಹಿಂದೆ AUDA (ಅಹಮದಾಬಾದ್ ನಗರಾಭಿವೃದ್ಧಿ ಪ್ರಾಧಿಕಾರ) ಅಧ್ಯಕ್ಷರಾಗಿದ್ದರು ಮತ್ತು ಅಮದವಾಡ ಮುನ್ಸಿಪಲ್ ಕಾರ್ಪೊರೇಶನ್ (AMC) ಸ್ಥಾಯಿ ಸಮಿತಿಯ ಅಧ್ಯಕ್ಷರಾಗಿದ್ದರು. ಅವರು ಎಂಜಿನಿಯರಿಂಗ್‌ ಪದವೀಧರರು..
ಶನಿವಾರ, ವಿಜಯ್ ರೂಪಾನಿ ಹಠಾತ್ ಗುಜರಾತ್ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಘೋಷಿಸಿದ್ದರು. ನಾನು ಗುಜರಾತ್ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ” ಎಂದು ವಿಜಯ್ ರೂಪಾನಿ ರಾಜ್ಯಪಾಲ ಆಚಾರ್ಯ ದೇವವ್ರತ್ ಅವರನ್ನು ಭೇಟಿ ಮಾಡಿದ ನಂತರ ಮಾಧ್ಯಮಗಳಿಗೆ ತಿಳಿಸಿದರು. “ನಾನು ಪ್ರಧಾನಿಯವರ ನೇತೃತ್ವದಲ್ಲಿ ಮತ್ತು ಬಿಜೆಪಿ ಮುಖ್ಯಸ್ಥರ ಮಾರ್ಗದರ್ಶನದಲ್ಲಿ ಪಕ್ಷದ ಸಂಘಟನೆಯಲ್ಲಿ ಕೆಲಸ ಮಾಡಲು ನನ್ನ ಇಚ್ಛೆಯನ್ನು ತಿಳಿಸಿದ್ದೇನೆ” ಎಂದು ಅವರು ಹೇಳಿದರು. ಅದರ ನಂತರ ಅವರ ಸ್ತಾನಕ್ಕೆ ಹಲವಾರು ಹೆಸರುಗಳು ಕೇಳಿಬಂದಿದ್ದವು. ಅಂತಿಮವಾಗಿ ಬಿಜೆಪಿಭೂಪೇಂದ್ರ ಪಟೇಲ್ ಅವರನ್ನು ಮುಖ್ಯಮಂತ್ರಿ ಸ್ಥಾನಕ್ಕೆ ಆಯ್ಕೆ ಮಾಡಿದೆ.

5 / 5. 1

ನಿಮ್ಮ ಕಾಮೆಂಟ್ ಬರೆಯಿರಿ

advertisement