ಮಳೆಗೂ ಜಗ್ಗಲ್ಲ..ಸರ್ಕಾರಕ್ಕೂ ಬಗ್ಗಲ್ಲ..!: ದಾಖಲೆ ಮಳೆ ಮಧ್ಯೆಯೂ ರಾಕೇಶ್ ಟಿಕಾಯತ್‌-ಸಂಗಡಿಗರಿಂದ ದೆಹಲಿ ಜಲಾವೃತ ರಸ್ತೆಯಲ್ಲಿ ಧರಣಿ..!

ನವದೆಹಲಿ : ದೆಹಲಿ-ಎನ್‌ಸಿಆರ್‌ನಲ್ಲಿ ಶನಿವಾರ ಸುರಿದ ಭಾರೀ ಮಳೆಯಿಂದ ಜನಜೀವನ ಸ್ಥಗಿತಗೊಂಡಿದೆ. ಆದರೆ ದೆಹಲಿ ಹೊರವಲಯದಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತರು ಧರಣಿ ಕುಳಿತಿದ್ದರು.
ಭಾರತೀಯ ಕಿಸಾನ್ ಯೂನಿಯನ್ (ಬಿಕೆಯು) ನಾಯಕ ರಾಕೇಶ್ ಟಿಕೈತ್ ರೈತರ ಆಂದೋಲನದ ಘಾಜಿಪುರ ಧರಣಿ ನಿರತ ಸ್ಥಳದಲ್ಲಿ ನೀರಿನಿಂದ ಕೂಡಿದ ರಸ್ತೆಯಲ್ಲಿ ಧರಣಿ ಮುಂದುವರಿಸಿರುವುದು ಕುಳಿತಿರುವುದು ಕಂಡುಬಂದಿದೆ.
ಕೃಷಿ ಕಾಯ್ದೆ ವಿರೋಧಿಸಿ ದೆಹಲಿಯಲ್ಲಿ ಹೋರಾಟ ನಡೆಸುತ್ತಿರುವ ರೈತರು ದೆಹಲಿಯಲ್ಲಿ ಸುರಿದ ಭಾರಿ ಮಳೆಯನ್ನೂ ಲೆಕ್ಕಿಸದೆ ಪ್ರತಿಭಟನೆ ಮುಂದುವರಿಸಿದ್ದಾರೆ.

46 ವರ್ಷಗಳಲ್ಲೇ ಅತಿ ಹೆಚ್ಚು ಮಳೆ ಸುರಿದ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ವಿಮಾನ ನಿಲ್ದಾಣವೇ ಕೆರೆಯಂತಾಗಿ ವಿಮಾನಗಳ ಹಾರಾಟ ರದ್ದುಗೊಳಿಸಲಾಗಿತ್ತು. ಮಳೆಯಿಂದಾಗಿ ಹಲವೆಡೆ ಮನೆಗಳಿಗೆ ನೀರು ನುಗ್ಗಿದ್ದು, ತಗ್ಗು ಪ್ರದೇಶಗಳು ಜಲಾವೃತಗೊಂಡಿವೆ. ಇದರ ನಡುವೆ ಭಾರತೀಯ ಕಿಸಾನ್‌ ಯೂನಿಯನ್‌ ನಾಯಕ ರಾಕೇಶ್ ಟಿಕಾಯತ್‌ ಅವರು ಬೆಂಬಲಿಗರೊಂದಿಗೆ ಗಾಜಿಪುರದಲ್ಲಿ ಜಲಾವೃತವಾದ ಫ್ಲೈ ಓವರ್ ಬಳಿ ಮಳೆ ನೀರಿನಲ್ಲಿ ಕುಳಿತು ಧರಣಿ ಮುಂದುವರಿಸಿದ್ದಾರೆ.
ಶನಿವಾರ ಸುರಿದ ಮಳೆಯಿಂದಾಗಿ ದೆಹಲಿ -ಉತ್ತರ ಪ್ರದೇಶ ಗಡಿ ಪ್ರದೇಶದಲ್ಲಿ ತಾತ್ಕಾಲಿಕವಾಗಿ ನಿರ್ಮಿಸಿದ್ದ ಟೆಂಟ್‌ಗಳು ಹಾನಿಗೊಳಗಾಗಿವೆ. ರಾಕೇಶ್ ಟಿಕಾಯತ್‌ ಅವರು ನೀರು ತುಂಬಿರುವ ರಸ್ತೆಯಲ್ಲಿ ಕುಳಿತು ಪ್ರತಿಭಟನೆ ಮುಂದುವರಿಸಿದ್ದಾರೆ. ಪ್ರತಿಭಟನಾ ಸ್ಥಳದಲ್ಲಿ ಮಳೆ ನೀರು ಮತ್ತು ಚರಂಡಿಗಳನ್ನು ಸ್ವಚ್ಛಗೊಳಿಸಬೇಕು ಎಂದು ನಾವು ಒತ್ತಾಯಿಸುತ್ತಿದ್ದೇವೆ. ಆದರೆ, ಸಂಬಂಧಪಟ್ಟ ಅಧಿಕಾರಿಗಳು ಗಮನ ಹರಿಸುತ್ತಿಲ್ಲ’ ಎಂದು ಬಿಕೆಯುನ ಮಾಧ್ಯಮ ಉಸ್ತುವಾರಿ ಧರ್ಮೇಂದ್ರ ಮಲಿಕ್ ಆರೋಪಿಸಿದ್ದಾರೆ.
ಈಗ ಪ್ರತಿಭಟಿಸುತ್ತಿರುವ ರೈತರು ಎಲ್ಲ ಋತುಗಳನ್ನೂ (ಚಳಿಗಾಲ, ಬೇಸಿಗೆ ಮತ್ತು ಮಳೆ) ನೋಡಿದ್ದಾರೆ. ನಾವು ಯಾವುದಕ್ಕೂ ಹೆದರುವುದಿಲ್ಲ’ ಎಂದು ಅವರು ಹೇಳಿದ್ದಾರೆ.
ಸೆಪ್ಟೆಂಬರ್ 27 ರಂದು ಸಂಯುಕ್ತ್ ಕಿಸಾನ್ ಮೋರ್ಚಾ ‘ಭಾರತ್ ಬಂದ್’ಗೆ ಕರೆ ನೀಡಿದ ಒಂದು ದಿನದ ನಂತರ ಮಳೆಗಾಲದಲ್ಲಿ ಮುಳುಗಿರುವ ರಸ್ತೆಗಳಲ್ಲಿ ಟಿಕಾಯತ್ ಮತ್ತು ಇತರ ರೈತರ ಪ್ರತಿಭಟನೆ ಕುಳಿತಿರುವ ಚಿತ್ರಗಳು ಬಂದಿವೆ.
ಎಡೆಬಿಡದೆ ಸುರಿಯುತ್ತಿರುವ ಮಳೆಯು ರೈತರ ಹೋರಾಟದ ಮೇಲೆ ಯಾವುದೇ ಪರಿಣಾಮ ಬೀರಿದಂತೆ ಕಾಣುತ್ತಿಲ್ಲ ಮತ್ತು ಅವರು ಮುಗುಳ್ನಗುತ್ತಾ ನೀರಿನಲ್ಲಿಯೇ ಧರಣಿ ಮುಂದುವರಿಸಿದ್ದಾರೆ.
ಕೇಂದ್ರ ಸರ್ಕಾರ ಜಾರಿಗೆ ತರಲು ಉದ್ದೇಶಿಸಿರುವ ಮೂರು ಕೃಷಿ ಕಾಯ್ದೆಗಳನ್ನು ವಿರೋಧಿಸಿ ಹರಿಯಾಣ, ಪಂಜಾಬ್‌, ಉತ್ತರಪ್ರದೇಶ ಸೇರಿದಂತೆ ಹಲವು ರಾಜ್ಯಗಳ ರೈತರು ದೆಹಲಿಯ ಗಡಿ ಪ್ರದೇಶಗಳಲ್ಲಿ ಕಳೆದ ನವೆಂಬರ್‌ನಿಂದ ಪ್ರತಿಭಟನೆ ನಡೆಸುತ್ತಿದ್ದಾರೆ. ಪ್ರತಿಭಟನಾಕಾರರೊಂದಿಗೆ ಕೇಂದ್ರ ಸರ್ಕಾರ ಈಗಾಗಲೇ 11 ಬಾರಿ ಮಾತುಕತೆ ನಡೆಸಿದ್ದು, ಯಾವುದೇ ಫಲ ಸಿಕ್ಕಿಲ್ಲ.

ಪ್ರಮುಖ ಸುದ್ದಿ :-   ರಾಜ್‌ ಕುಂದ್ರಾಗೆ ಸೇರಿದ ₹97 ಕೋಟಿ ಮೌಲ್ಯದ ಆಸ್ತಿ ಜಪ್ತಿ ಮಾಡಿದ ಇ.ಡಿ.

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement