ತಮಿಳು ಭಾಷೆ ದೇವರ ಭಾಷೆ ಎಂದು ಹೇಳಿದ ಮದ್ರಾಸ್​ ಹೈಕೋರ್ಟ್​​

ಚೆನ್ನೈ: ತಮಿಳು (Tamil ) ಭಾಷೆ ದೇವರ ಭಾಷೆ ಎಂದು ಮದ್ರಾಸ್​ ಹೈ ಕೋರ್ಟ್ (Madras High Court)​ ಕೊಂಡಾಡಿದೆ.
ದೇಶದಾದ್ಯಂತ ದೇವಾಲಯಗಳಲ್ಲಿ ಅಜ್ವರರು ಮತ್ತು ನಾಯನ್ಮಾರ್‌, ಅರುಣಗಿರಿನಾಥರಂತಹ ಸಂತರು ರಚಿಸಿದ ತಮಿಳು ಸ್ತೋತ್ರಗಳನ್ನು ಪಠಿಸಬೇಕು ಎಂದು ಅದು ತಿಳಿಸಿದೆ.
ನ್ಯಾಯಮೂರ್ತಿ ಎನ್ ಕಿರುಬಾಕರನ್ ಮತ್ತು ನ್ಯಾಯಮೂರ್ತಿ ಬಿ. ಪುಗಲೆಂಧಿ ಅವರ ಪೀಠ ಇತ್ತೀಚೆಗೆ ತಮಿಳು ಭಾಷೆ ಕುರಿತು ತಮ್ಮ ಆದೇಶದಲ್ಲಿ, ತಮಿಳು ದೇವ ಭಾಷೆಯಾಗಿದೆ. ವಿವಿಧ ದೇಶಗಳಲ್ಲಿ ಮತ್ತು ಧರ್ಮಗಳಲ್ಲಿ, ವಿಭಿನ್ನ ರೀತಿಯ ನಂಬಿಕೆಗಳು ಅಸ್ತಿತ್ವದಲ್ಲಿದ್ದವು. ಆದರೆ, ಅದು ಅಲ್ಲಿನ ಸಂಸ್ಕೃತಿ ಮತ್ತು ಧರ್ಮಕ್ಕೆ ಅನುಗುಣವಾಗಿ ಬದಲಾಗಿವೆ.ಸ್ಥಳೀಯ ಭಾಷೆಗಳನ್ನು ಮಾತ್ರ ಸ್ವರ್ಗದ ಭಾಷೆಯಾಗಿ ಬಳಕೆ ಮಾಡಲಾಗಿದೆ. ಆದರೆ ನಮ್ಮ ದೇಶದಲ್ಲಿ ಸಂಸ್ಕೃತವನ್ನು ದೇವರ ಭಾಷೆ ಎಂದು ನಂಬುವಂತೆ ಮಾಡಲಾಗಿದೆ.  ಸಂಸ್ಕೃತವು ಅಗಾಧ ಪ್ರಾಚೀನ ಸಾಹಿತ್ಯ ಹೊಂದಿರುವ ಭಾಷೆ ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ. ಆದರೆ ಭಕ್ತರಲ್ಲಿ ಸಂಸ್ಕೃತದಲ್ಲಿ ವೇದಗಳನ್ನು ಹೇಳಿದರೆ ಮಾತ್ರ ಅದು ದೇವರಿಗೆ ತಲುಪುತ್ತದೆ ಎಂಬ ನಂಬಿಕೆ ಹರಡಲಾಗಿದೆ ಎಂದು ಪೀಠ ತಿಳಿಸಿದೆ.
ಕರೂರು ಜಿಲ್ಲೆಯ ದೇವಸ್ಥಾನವನ್ನು ಪ್ರತಿಷ್ಠಾಪಿಸಲು ಕೋರಿ ಸಲ್ಲಿಸಲಾಗಿದ್ದ ಅರ್ಜಿ ವಿಚಾರಣೆ ನಡೆಸುವಾಗ ಪೀಠ ಈ ಕುರಿತು ತಿಳಿಸಿದೆ. ತಮಿಳು ಪ್ರಪಂಚದ ಪ್ರಾಚೀನ ಭಾಷೆಗಳಲ್ಲಿ ಒಂದು ಮಾತ್ರವಲ್ಲದೇ ದೇವರ ಭಾಷೆ ಕೂಡ ಆಗಿದೆ. ಶಿವ ನೃತ್ಯ ಮಾಡುವಾಗ ಬಿದ್ದ ಡಮರುಗದಿಂದ ತಮಿಳು ಭಾಷೆ ಜನಿಸಿತು ಎಂದು ನಂಬಲಾಗಿದೆ. ಇನ್ನೊಂದು ನಂಬಿಕೆ ಪ್ರಕಾರ ಮುರುಗ ದೇವರು ತಮಿಳು ಭಾಷೆಯನ್ನು ರಚಿಸಿದರು ಎನ್ನಲಾಗಿದೆ.
ಪುರಾಣದ ಪ್ರಕಾರ, ಶಿವನು ಮೊದಲ ತಮಿಳು ಸಂಗಮದ ಅಧ್ಯಕ್ಷತೆ ವಹಿಸಿದ್ದನು. ತಮಿಳು ಕವಿಗಳ ಜ್ಞಾನವನ್ನು ಪರೀಕ್ಷಿಸಲು ಭಗವಾನ್ ಶಿವನು ‘ತಿರುವಿಲಯದಲ್ ನುಡಿಸಿದನೆಂಬ ನಂಬಿಕೆ ಇದೆ. ಈ ಮೂಲಕ ತಮಿಳು ಭಾಷೆ ದೇವರೊಂದಿಗೆ ಸಂಪರ್ಕ ಹೊಂದಿದೆ ಎಂಬ ಅರ್ಥವನ್ನು ಇದು ಹೊಂದಿದೆ. ದೇವರೊಂದಿಗೆ ಸಂಪರ್ಕ ಹೊಂದಿರುವ ಹಿನ್ನಲೆ ತಮಿಳು ದೈವಿಕ ಭಾಷೆಯಾಗಿದೆ. ಕುಡಾಮುಝಕು ಪ್ರದರ್ಶಿಸುವಾಗ ಈ ದೇವ ಭಾಷೆ ಬಳಸಬೇಕಾಗುತ್ತದೆ ಎಂದು ನ್ಯಾಯಾಲಯ ತಿಳಿಸಿದೆ.
ಜನರು ಮಾತನಾಡುವ ಪ್ರತಿಯೊಂದು ಭಾಷೆಯೂ ದೇವರ ಭಾಷೆಯೇ ಎಂದು ಇದೇ ವೇಳೆ ಪೀಠ ತಿಳಿಸಿದೆ.
ಅರ್ಜಿದಾರರು ದೇವಸ್ಥಾನಗಳಲ್ಲಿ ಕುಡುಮುಝಕು ಪ್ರದರ್ಶನದ ವೇಳೆ ತಮಿಳು ಪದ್ಯಗಳನ್ನು ಹಾಡಲು ಅವಕಾಶ ಕೇಳುತ್ತಾರೆ. ಆದರೆ, ದೇವಸ್ಥಾನಕ್ಕೆ ಮಾತ್ರವಲ್ಲದೆ ದೇಶದಾದ್ಯಂತ, ಎಲ್ಲಾ ದೇವಾಲಯಗಳಲ್ಲೂ ತಮಿಳು ತಿರುಮುರೈ ಮತ್ತು ಪತಿನಾಥರು, ಅರುಣಗಿರಿನಾಥರ್ ಇತ್ಯಾದಿಗಳ ಹೊರತಾಗಿ ಆಳ್ವಾರ್ಗಲ್ ಮತ್ತು ನಾಯನ್ಮಾರ್ಗಲ್ ಮುಂತಾದ ಸಂತರು ರಚಿಸಿದ ಇತರ ಸ್ತೋತ್ರಗಳನ್ನು ಪಠಿಸುವ ಮೂಲಕ ಪವಿತ್ರಗೊಳಿಸಬೇಕು ಎಂದು ಹೇಳಿದೆ.
.

ಪ್ರಮುಖ ಸುದ್ದಿ :-   ಹೈದರಾಬಾದ್ ಮಳೆ: ಗೋಡೆ ಕುಸಿದು 7 ಕಾರ್ಮಿಕರು ಸಾವು

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement