ದುರಂತ ತಪ್ಪಿಸಿದ ದೆಹಲಿ ಪೊಲೀಸರು: ಪಾಕ್‌ನಲ್ಲಿ ತರಬೇತಿ ಪಡೆದಿದ್ದ ಇಬ್ಬರು ಸೇರಿ 6 ಭಯೋತ್ಪಾದಕರ ಬಂಧನ

ನವದೆಹಲಿ: ಆರು ಭಯೋತ್ಪಾದಕರ ಬಂಧನದೊಂದಿಗೆ “ದಾವೂದ್ ಇಬ್ರಾಹಿಂನೊಂದಿಗೆ ಪಾಕಿಸ್ತಾನ-ಸಂಘಟಿತ ಭಯೋತ್ಪಾದಕ ಘಟಕದ ಸಂಪರ್ಕ ಹೊಂದಿದ್ದ ಜಾಲವನ್ನು ದೆಹಲಿ ಪೋಲಿಸ್ ವಿಶೇಷ ಸೆಲ್ ಭೇದಿಸಿದೆ ಎಂದು ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ. ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ನೀರಜ್ ಠಾಕೂರ್, ವಿಶೇಷ ಸಿಪಿ (ಸ್ಪೆಶಲ್ ಸೆಲ್), ಈ ಮಾಡ್ಯೂಲ್ ಭೂಗತ ಪಾತಕಿ ದಾವೂದ್ ಇಬ್ರಾಹಿಂನೊಂದಿಗೆ ಸಂಪರ್ಕ ಹೊಂದಿದ್ದು, ಅವರು ಮುಂಬೈನಲ್ಲಿ … Continued

ಐಟಿಐ ಕಲಿಯುವವರಿಗೆ ಸಿಹಿ ಸುದ್ದಿ..ಈ ವರ್ಷದಿಂದಲೇ ಆರು ಹೊಸ ಕೋರ್ಸ್​ಗಳ ಪ್ರವೇಶಾತಿಗೆ ಅವಕಾಶ

posted in: ರಾಜ್ಯ | 0

ಬೆಂಗಳೂರು: ಟಾಟಾ ಕಂಪನಿಯ ಸಹಯೋಗದಲ್ಲಿ ರಾಜ್ಯದ 150 ಕೈಗಾರಿಕಾ ತರಬೇತಿ ಸಂಸ್ಥೆಗಳನ್ನು ಉನ್ನತೀಕರಿಸುವ ಕಾರ್ಯಕ್ರಮದಡಿ ಈಗಿನ ಬೇಡಿಕೆಗಳಿಗೆ ಅನುಗುಣವಾಗಿ 6 ಹೊಸ ಕೋರ್ಸ್​ಗಳಿಗೆ ರಾಜ್ಯ ವೃತ್ತಿಶಿಕ್ಷಣ ಪರಿಷತ್ (ಎಸ್.ವಿ.ಸಿ.ಟಿ.) ಮಂಗಳವಾರ ಅನುಮೋದನೆ ನೀಡಿದೆ. ಸಚಿವ ಡಾ. ಸಿ.ಎನ್. ಅಶ್ವತ್ಥ ನಾರಾಯಣ ಅಧ್ಯಕ್ಷತೆಯಲ್ಲಿ ನಡೆದ ಉನ್ನತ ಶಿಕ್ಷಣ ಸಚಿವ ಹಾಗೂ ಕೌಶಲಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯಗಳ ಇಲಾಖೆ … Continued

ಸೆ.17ರಂದು ಬೃಹತ್ ಕೋವಿಡ್ ಲಸಿಕೆ ಅಭಿಯಾನ: ಒಂದೇ ದಿನ 30 ಲಕ್ಷ ಲಸಿಕೆ ನೀಡುವ ಗುರಿ ನಿಗದಿ

posted in: ರಾಜ್ಯ | 0

ಬೆಂಗಳೂರು: ಸೆಪ್ಟೆಂಬರ್ 17 ರಂದು ಬೃಹತ್ ಕೋವಿಡ್ ಲಸಿಕೆ ಅಭಿಯಾನ ಆಯೋಜಿಸಿದ್ದು, ಈ ಕಾರ್ಯಕ್ರಮದಡಿ 30 ಲಕ್ಷ ಲಸಿಕೆ ಹಾಕಬೇಕು ಎಂದು ನಿರ್ಧರಿಸಲಾಗಿದೆ. ಅದಕ್ಕೆ ಸೂಕ್ತ ತಯಾರಿ ಮಾಡಿಕೊಳ್ಳುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಎಲ್ಲ ಜಿಲ್ಲಾಧಿಕಾರಿಗಳಿಗೆ ಸೂಚಿಸಿದರು. ಅವರು ಇಂದು (ಮಂಗಳವಾರ) ಬೃಹತ್ ಲಸಿಕೆ ಕಾರ್ಯಕ್ರಮದ ಪೂರ್ವಭಾವಿಯಾಗಿ ಜಿಲ್ಲಾಧಿಕಾರಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ನಡೆಸಿದರು. ರಾಜ್ಯದಲ್ಲಿ … Continued

ಎಡೆಲ್ವಿಸ್ ಎಂಎಫ್‌ನ ಎರಡು ಇಟಿಎಫ್‌ಗಳು ಈಗ ಸೂಚ್ಯಂಕ ನಿಧಿಗಳಾಗಿ ಮಾರ್ಪಟ್ಟಿವೆ

ಎಡೆಲ್ವಿಸ್ ಮ್ಯೂಚುವಲ್ ಫಂಡ್ ತನ್ನ ಎರಡು ಇಕ್ವಿಟಿ ಎಕ್ಸ್ಚೇಂಜ್-ಟ್ರೇಡೆಡ್ ಫಂಡ್‌ಗಳನ್ನು (ಇಟಿಎಫ್) ಸೂಚ್ಯಂಕ ಯೋಜನೆಗಳಿಗೆ ಪರಿವರ್ತಿಸಿದೆ. ಇದು ತನ್ನ ನಿಫ್ಟಿ 50 ಇಟಿಎಫ್ ಅನ್ನು ನಿಫ್ಟಿ 50 ಸೂಚ್ಯಂಕ ನಿಧಿಗೆ ಮತ್ತು ಅದರ ನಿಫ್ಟಿ 100 ಗುಣಮಟ್ಟ 30 ಇಟಿಎಫ್ ಅನ್ನು ನಿಫ್ಟಿ 100 ಗುಣಮಟ್ಟ 30 ಸೂಚ್ಯಂಕ ನಿಧಿಗೆ ಬದಲಾಯಿಸಿದೆ. ಈ ಬದಲಾವಣೆಗಳು ಅಕ್ಟೋಬರ್ … Continued

ಪಾಕಿಸ್ತಾನದ ಏಜೆಂಟರೊಂದಿಗೆ ರಕ್ಷಣಾ ರಹಸ್ಯ ಹಂಚಿಕೊಂಡಿದ್ದಕ್ಕೆ ನಾಲ್ವರು ಡಿಆರ್‌ಡಿಒ ಉದ್ಯೋಗಿಗಳ ಬಂಧನ

ಭುವನೇಶ್ವರ: ಪಾಕಿಸ್ತಾನದ ಏಜೆಂಟರೊಂದಿಗೆ ಸಂಪರ್ಕ ಹೊಂದಿದ್ದ ಆರೋಪದ ಮೇಲೆ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯ (ಡಿಆರ್‌ಡಿಒ) ಒಡಿಶಾ ಕರಾವಳಿಯ ಕ್ಷಿಪಣಿ ಪರೀಕ್ಷಾ ಕೇಂದ್ರದಿಂದ ನಾಲ್ವರನ್ನು ಬಂಧಿಸಲಾಗಿದೆ. ಗುಪ್ತಚರ ಮಾಹಿತಿ ಆಧರಿಸಿ, ಐಡಿ (ಪೂರ್ವ ಶ್ರೇಣಿ) ಒಡಿಶಾ ಪೊಲೀಸರ ವಿಶೇಷ ತಂಡವು ಮಂಗಳವಾರ ಚಂಡಿಪುರ ಸಮುದ್ರದಲ್ಲಿರುವ ಡಿಆರ್‌ಡಿಒ ಘಟಕದ ಇಂಟಿಗ್ರೇಟೆಡ್ ಟೆಸ್ಟ್ ರೇಂಜ್ (ಐಟಿಆರ್) ನಲ್ಲಿ … Continued

ಹೈದರಾಬಾದ್‌ನಲ್ಲಿ ಬಾಲಕಿ ಅತ್ಯಾಚಾರ-ಕೊಲೆ: ಆರೋಪಿ ಮಾಹಿತಿ ನೀಡಿದರೆ ಪೊಲೀಸರಿಂದ 10 ಲಕ್ಷ ರೂ ಬಹುಮಾನ

ಹೈದರಾಬಾದ್‌: 6 ವರ್ಷದ ಬಾಲಕಿಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪಿ ಬಗ್ಗೆ ಮಾಹಿತಿ ನೀಡಿದವರಿಗೆ ಹೈದರಾಬಾದ್ ಪೊಲೀಸರು 10 ಲಕ್ಷ ರೂ.ಗಳ ಬಹುಮಾನ ಘೋಷಿಸಿದ್ದಾರೆ. ಹೈದರಾಬಾದ್ ಪೊಲೀಸ್ ಆಯುಕ್ತ ಅಂಜನಿ ಕುಮಾರ್ ಮಂಗಳವಾರ ಹೇಳಿದ್ದು, ಆರೋಪಿ ಪಲ್ಲಕೊಂಡ ರಾಜು (30) ಬಂಧನಕ್ಕೆ ಕಾರಣವಾಗುವ ಯಾವುದೇ ಮಾಹಿತಿ ಅಥವಾ ಸುಳಿವು ನೀಡುವ ವ್ಯಕ್ತಿಗೆ 10 … Continued

ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಖಾಸಗೀಕರಣ ಪ್ರಶ್ನಿಸಿದ್ದ ಮನವಿ ವಜಾ ಮಾಡಿದ ಹೈಕೋರ್ಟ್‌

ಬೆಂಗಳೂರು: ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಖಾಸಗೀಕರಣ ಪ್ರಶ್ನಿಸಿ ವಿಮಾನ ನಿಲ್ದಾಣಗಳ ಉದ್ಯೋಗಿಗಳ ಸಂಘ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಮನವಿಯನ್ನು ಕರ್ನಾಟಕ ಹೈಕೋರ್ಟ್‌ ಮಂಗಳವಾರ ವಜಾ ಮಾಡಿದೆ. ವಿಮಾನ ನಿಲ್ದಾಣಗಳನ್ನು ಗುತ್ತಿಗೆ ನೀಡುವ ನೀತಿ ನಿರ್ಧಾರವನ್ನು ಕೇಂದ್ರ ಸರ್ಕಾರ ಕೈಗೊಂಡಿದೆ. ಇದರಲ್ಲಿ ನ್ಯಾಯಾಲಯದ ಮಧ್ಯಪ್ರವೇಶದ ಅಗತ್ಯವಿಲ್ಲ ಎಂದು ಹೇಳಿದ್ದ ಕೇರಳ ಹೈಕೋರ್ಟ್‌ ನಿರ್ಧಾರವನ್ನು ಆಧರಿಸಿ ಹಂಗಾಮಿ … Continued

ಹೊಲನಗದ್ದೆ ಸೀತಾ ಹೆಗಡೆ ನಿಧನ

ಕುಮಟಾ : ಉತ್ತರ ಕನ್ನಡ ಜಿಲ್ಲೆಯ ತಾಲೂಕಿನ ಹೊಲನಗದ್ದೆಯ ಸೀತಾ ಎಂ. ಹೆಗಡೆ(77) ಮಂಗಳವಾರ ಸಂಜೆ ನಿಧನರಾದರು. ಇವರು ಖ್ಯಾತ ಪರಿಸರ ಹೋರಾಟಗಾರರಾಗಿದ್ದ ದಿ. ಎಂ. ಆರ್. ಹೆಗಡೆ ಅವರ ಪತ್ನಿ. ಮೃತರು ಸೀತಕ್ಕ ಎಂದೇ ಪ್ರಸಿದ್ದರಾಗಿದ್ದರು. ಪರಿಸರ, ಸಮಾಜಿಕ ಹಾಗೂ ದಾರ್ಮಿಕ ಸಂಘಟನೆಗಳಲ್ಲಿ ಸಕ್ರಿಯರಾಗಿದ್ದರು. ಮೃತರು ಮೂವರು ಪುತ್ರರು, ಸೊಸೆಯಂದಿರು, ಮೊಮ್ಮಕ್ಕಳು  ಹಾಗೂ ಅಪಾರ-ಬಂಧು ಬಳಗವನ್ನು … Continued

ವಿಧಾನಸಭೆಯಲ್ಲಿ ಜಿಪಂ, ತಾಪಂ ಚುನಾವಣೆ ಮುಂದೂಡಿಕೆ ವಿಧೇಯಕ ಮಂಡನೆ

posted in: ರಾಜ್ಯ | 0

ಬೆಂಗಳೂರು:ಜಿಲ್ಲಾ ಪಂಚಾಯತ ಮತ್ತು ತಾಲೂಕಾ ಪಂಚಾಯತ ಚುನಾವಣೆಗಳನ್ನು ಮುಂದೂಡುವ ನಿಟ್ಟಿನಲ್ಲಿ ಸರ್ಕಾರ ಅಧಿಕೃತ ಹೆಜ್ಜೆಯಿಟ್ಟಿದೆ. ವಿಧಾನಸಭೆಯಲ್ಲಿ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ವಿಧೇಯಕ ತಿದ್ದುಪಡಿ ವಿಧೇಯಕ ಮಂಡನೆ ಮಾಡಲಾಗಿದೆ. ಈ ತಿದ್ದುಪಡಿಯು ಪಂಚಾಯತ್ ರಾಜ್ ಸೀಮಾ ನಿರ್ಣಯಿಸಲು ಆಯೋಗ ರಚನೆಗೆ ಅವಕಾಶ ಮಾಡಿಕೊಡುವ ವಿಧೇಯಕವಾಗಿದೆ. ಜಿಲ್ಲಾ ಪಂಚಾಯತ ಕ್ಷೇತ್ರಗಳ ಮರು ವಿಂಗಡಣೆ, ವಾರ್ಡ್ ಮತ್ತು … Continued

ಕರ್ನಾಟಕದಲ್ಲಿ ಮಂಗಳವಾರ 600ಕ್ಕಿಂತ ಕಡಿಮೆಗೆ ಬಂದ ಕೋವಿಡ್‌ ದೈನಂದಿನ ಪ್ರಕರಣ ..!

posted in: ರಾಜ್ಯ | 0

ಬೆಂಗಳೂರು: ರಾಜ್ಯದಲ್ಲಿ ದೈನಂದಿನ ಕೋವಿಡ್ ಪ್ರಕರಣಗಳ ಸಂಖ್ಯೆಯಲ್ಲಿ ಮತ್ತಷ್ಟು ಇಳಿಕೆಯಾಗಿದೆ. ಇಂದು (ಮಂಗಳವಾರ) ರಾಜ್ಯದಲ್ಲಿ 559 ಕೊರೊನಾ ಪ್ರಕರಣಗಳು ಪತ್ತೆಯಾಗಿವೆ. ಒಟ್ಟು ಸೋಂಕಿತರ ಸಂಖ್ಯೆ 29,62,967 ಕ್ಕೆ ಏರಿಕೆಯಾಗಿದೆ. ಇದೇ ಸಮಯದಲ್ಲಿ 12 ಜನರು ಕೋವಿಡ್ ನಿಂದ ಮೃತಪಟ್ಟಿದ್ದಾರೆ. ಇದುವರೆಗೆ ಸೋಂಕಿನಿಂದ 37,529 ಜನ ಮೃತಪಟ್ಟಿದ್ದಾರೆ. ಇಂದು 1034 ಜನ ಡಿಸ್ಚಾರ್ಜ್ ಆಗಿದ್ದಾರೆ. ಇದುವರೆಗೆ 29,09,656 … Continued